Categories
asia

ಆಫ್ಘಾನಿಸ್ತಾನ

[fusion_builder_container hundred_percent=”no” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” overlay_color=”” video_preview_image=”” border_color=”” border_style=”solid” padding_top=”” padding_bottom=”” padding_left=”” padding_right=”” type=”legacy”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”true” min_height=”” hover_type=”none” link=”” border_sizes_top=”” border_sizes_bottom=”” border_sizes_left=”” border_sizes_right=”” type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಹೆಚ್ಚಾಗಿ ಪರ್ವತ ಪ್ರದೇಶಗಳು ಮತ್ತು ಒಣಭೂಮಿಯನ್ನೇ ಹೊಂದಿರುವ ಆಫ್ಘಾನಿಸ್ತಾನ, ಅನೇಕ ಕಾರಣಗಳಿಂದ ಸದಾ ಸುದ್ದಿಯಲ್ಲಿದೆ.ದಕ್ಷಿಣ ಏಷಿಯಾದ ಈ ದೇಶ, ಪಾಕಿಸ್ತಾನ, ಇರಾನ್, ತುರ್ಕ್ ಮೆನಿಸ್ತಾನ್, ಉಜ್ಬೇಕಿಸ್ತಾನ್, ತಜಕಿಸ್ತಾನ್ ಮತ್ತು ಚೈನಾ ದೇಶಗಳ ಗಡಿಗೆ ಹೊಂದಿಕೊಂಡಿದೆ. 6,52,864 ಚ.ಕೀ.ವೀಸ್ತೀರ್ಣ ಹೊಂದಿದ್ದು, 2016ರಲ್ಲಿ ಅಂದಾಜು ಜನಸಂಖ್ಯೆ 3 ಕೋಟಿ 33 ಲಕ್ಷ ಮಾತ್ರ. ರಾಜಧಾನಿ ಕಾಬೂಲ್ ನಗರದ ಅಂದಾಜು ಜನಸಂಖ್ಯೆ 2015ರಲ್ಲಿ 46ಸಾವಿರ.

 

ದೇಶದ ಉತ್ತರ ಮತ್ತು ನೈರುತ್ಯ ದಿಕ್ಕಿನಲ್ಲಿ ಬಯಲು ಪ್ರದೇಶವನ್ನು ಹೊಂದಿದ್ದು, ನೈಸರ್ಗಿಕ ಅನಿಲ, ಪೆಟ್ರೋಲಿಯಂ, ಕಲ್ಲಿದ್ದಲು, ತಾಮ್ರ, ಕ್ರೋಮೈಟ್, ಕಬ್ಬಿಣದ ಅದಿರಿನಂತಹ ಶ್ರೀಮಂತ ಸಂಪನ್ಮೂಲಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಇವುಗಳನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಆರ್ಥಿಕವಾಗಿ ಸುಭದ್ರಗೊಳ್ಳಬಹುದಿತ್ತು.ಪ್ರಾಚೀನ ಸಿಂಧೂ ನಾಗರಿಕತೆಯ ತಾಣಗಳಲ್ಲಿ ಆಫ್ಘಾನಿಸ್ತಾನವೂ ಒಂದೆನ್ನುವುದು ಈ ದೇಶದ ಹೆಗ್ಗಳಿಕೆ. ಕ್ರಿ.ಪೂ.3300ರಷ್ಟು ಹಿಂದೆಯೇ, ಉತ್ತರ ಆಫ್ಘಾನಿಸ್ತಾನದ ಓಕ್ಸಸ್ ನದಿ ದಡದ ಶಾರ್ಟುಘೈ ಬಳಿ ನಾಗರಿಕ ಜನವಸತಿ ಇತ್ತು. ಬರಪರಿಸ್ಥಿತಿಯಿಂದಾಗಿ ಕ್ರಮೇಣ ಪೂರ್ವದ ಕಡೆಗೆ, ಅಂದರೆ ಇಂದಿನ ಪಾಕಿಸ್ತಾನ ಮತ್ತು ಭಾರತದ ಕಡೆಗೆ ಜನ ವಲಸೆ ಹೋದರೆನ್ನಲಾಗಿದೆ. ಅಲ್ಲಿ ಪ್ರದೇಶದ ಕೆಲವು ಕಡೆ ನಡೆದಿರುವ ಉತ್ಖನನಗಳು ಇದನ್ನು ಸಾಬೀತುಪಡಿಸಿವೆ.

ಇಂಥ ದೇಶ ಪದೇ ಪದೇ ಪರಕೀಯರ ಆಡಳಿತಕ್ಕೆ ಸಿಕ್ಕಿದೆ. ಕ್ರಿ.ಪೂ.327ರಲ್ಲಿ ಗ್ರೀಕ್ ಸಾಮ್ರಾಟ ಅಲೆಕ್ಸಾಂಡರ್ ಈ ಪ್ರದೇಶವನ್ನು ಗೆದ್ದುಕೊಂಡ. ನಂತರ ಪರ್ಶಿಯನ್ನರೂ ಇಲ್ಲಿ ಆಡಳಿತ ನಡೆಸಿದ್ದಾರೆ. ಕ್ರಿ.ಪೂ.304ರಲ್ಲಿ ಚಂದ್ರಗುಪ್ತ ಮೌರ್ಯ ದಾಳಿ ನಡೆಸಿ, ಹಿಂದುಕುಶ್ ಪರ್ವತ ಶ್ರೇಣಿಯ ದಕ್ಷಿಣ ಭಾಗದ ಮೇಲೆ ಹಿಡಿತ ಸಾಧಿಸಿದ. ಆ ಕಾಲದಲ್ಲಿ ಗಾಂಧಾರ ಕಲೆ ಅಲ್ಲಿ ಹರಡಿತು. ಹಿಂದೆ ಇದನ್ನು ಗಾಂಧಾರ ದೇಶವೆಂದು ಕರೆಯಲಾಗುತ್ತಿತ್ತು. ಹೀಗೆ ಈ ದೇಶ ಪೌರಾಣಿಕವಾಗಿ ಮಹಾಭಾರತದ ಕತೆಯೊಂದಿಗೆ ತಳಕು ಹಾಕಿಕೊಂಡಿದೆ.

ಬುದ್ಧಾಸ್‌ ಆಫ್‌ ಬಮಿಯನ್‌

ಚೈನಾದೊಂದಿಗೆ ಜಗತ್ತಿನ ವಿವಿಧ ದೇಶಗಳು, ಮುಖ್ಯವಾಗಿ ಯೂರೋಪಿನ ರಾಷ್ಟ್ರಗಳು ವ್ಯಾಪಾರ ವಹಿವಾಟಿಗಾಗಿ ರೂಪಿಸಿಕೊಂಡಿದ್ದ ಸಿಲ್ಕ್ ರೋಡ್ ಎಂದು ಕರೆಯಲಾಗುವ ಮಾರ್ಗದ ಬಹಳಷ್ಟು ಭಾಗ ಈ ದೇಶದಲ್ಲಿಯೇ ಹಾದು ಹೋಗುತ್ತಿದುದರಿಂದ, ಈ ದೇಶ ಚಾರಿತ್ರಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಸಿಲ್ಕ್ ರೋಡ್ ನಲ್ಲಿ ಓಡಾಡುತ್ತಿದ್ದ ಭಾರತದ ಯಾತ್ರಾರ್ಥಿಗಳು ದಾರಿಯಲ್ಲೆಲ್ಲ ಬೌದ್ಧ ಧರ್ಮವನ್ನು ಪ್ರಸಾರ ಮಾಡಿದರು. ಹಡ್ಡ, ಗಜನಿ, ಕೊಂಡೂಜ್, ಬಾಮಿಯಾನ್ ಮತ್ತು ಬಗ್ರಾಮ್ ಗಳಲ್ಲಿ ಇಂಥ ಧಾರ್ಮಿಕ ಕೇಂದ್ರಗಳಿದ್ದವೆಂದು, ಚೈನಾದಿಂದ ಭಾರತಕ್ಕೆ ಬಂದಿದ್ದ ಯಾತ್ರಾರ್ಥಿ ಹ್ಯುಯೆನ್ ತ್ಸಾಂಗ್, ಉಲ್ಲೇಖಿಸಿದ್ದಾನೆ.
ಕ್ರಿ.ಶ. ಏಳನೇ ಶತಮಾನದಲ್ಲಿ ಆಫ್ಘಾನಿಸ್ತಾನ ಸಂಪೂರ್ಣ ಇಸ್ಲಾಮೀಕರಣಗೊಂಡಿತು. ಹತ್ತನೇ ಶತಮಾನದಲ್ಲಿ ಆಫ್ಘಾನಿಸ್ತಾನದ ಮಹಮದ್ ಘಜ್ನಿ ಭಾರತದ ಮೇಲೆ ದಂಡಯಾತ್ರೆ ನಡೆಸಿದ. ಆನಂತರ ದೆಹಲಿ ಸುಲ್ತಾನರು ಆಫ್ಘಾನಿಸ್ತಾನವನ್ನು ಗೆದ್ದುಕೊಂಡರು. ಆನಂತರ ಆ ದೇಶದ ಮೇಲೆ ಮಂಗೋಲರ ದಾಳಿ ನಡೆಯಿತು. ಕ್ರಿ.ಶ.1229ರಲ್ಲಿ ಮಂಗೋಲರ ದೊರೆ ಝೆಂಗೀಸ್ ಖಾನ್ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ. ಕ್ರಿ.ಶ.1504ರಲ್ಲಿ ಬಾಬರ್ ಕಾಬೂಲನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ರಾಜ್ಯ ಸ್ಥಾಪಿಸಿಕೊಂಡ. ಆಮೇಲೆ ಆತ ಭಾರತದ ಕಡೆಗೆ ದಂಡಯಾತ್ರೆ ನಡೆಸಿ, ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ. ಹೀಗೆ ಭಾರತ ಮತ್ತು ಆಫ್ಘಾನಿಸ್ತಾನದ ಚರಿತ್ರೆಗಳು ಬೆಸೆದುಕೊಂಡಿದೆ.ಕ್ರಿ.ಶ.1839-42ರವರೆಗೆ ಮೊದಲನೇ ಆಂಗ್ಲೋ ಆಫ್ಘನ್ ಯುದ್ಧ, ಕ್ರಿ.ಶ.1878-80ರವರೆಗೆ ಎರಡನೇ ಆಂಗ್ಲೋ-ಆಫ್ಘನ್ ಯುದ್ಧ ಹಾಗೂ ಕ್ರಿ.ಶ.1919ರಲ್ಲಿ ಮೂರನೇ ಯುದ್ಧ ನಡೆದವು.
ಕಳೆದ ಹತ್ತು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಾಗ ದೇಶದ ಪ್ರಸ್ತುತ ಪರಿಸ್ಥಿತಿ, ದೇಶ ಏರು ದಿಕ್ಕಿನಲ್ಲಿದೆಯೋ, ಜಾರುವ ಹಾದಿಯಲ್ಲಿದೆಯೋ ತಿಳಿದುಬಿಡುತ್ತದೆ.ಆಘ್ಫಾನಿಸ್ತಾನದ ನಿವ್ವಳ ದೇಶೀಯ ಉತ್ಪನ್ನ(ಜಿಡಿಪಿ) 2005ರಲ್ಲಿ 6622ದಶಲಕ್ಷ ಅಮೇರಿಕನ್ ಡಾಲರ್, 2010ರಲ್ಲಿ 16,078 ದಶಲಕ್ಷ ಅಮೇರಿಕನ್ ಡಾಲರ್ ಮತ್ತು 2015ರಲ್ಲಿ 21,122 ದಶಲಕ್ಷ ಅಮೇರಿಕನ್ ಡಾಲರ್ ಗೆ ಏರಿದೆ. ತಲಾ ನಿವ್ವಳ ದೇಶೀಯ ಉತ್ಪನ್ನ (percapita GDP) 2005ರಲ್ಲಿ 271.4, 2010ರಲ್ಲಿ 575 ಮತ್ತು 2014ರಲ್ಲಿ 667.8 ಅಮೇರಿಕನ್ ಡಾಲರ್ ನಷ್ಟು ಇತ್ತು. ಅಂದರೆ ಅಲ್ಲಿನ ನಾಗರಿಕರ ಸರಾಸರಿ ವಾರ್ಷಿಕ ಆದಾಯ ಆಕರ್ಷಕವಾಗಿಲ್ಲ. ನಿವ್ವಳ ಉತ್ಪನ್ನದಲ್ಲಿ (ಜಿವಿಎ) ಕೃಷಿಯ ಪಾಲು 2010ರಲ್ಲಿ ಶೇ.29.6 ಮತ್ತು 2014ರಲ್ಲಿ ಶೇ.25.7ರಷ್ಟು ಹಾಗೂ ಕೈಗಾರಿಕೆಯ ಪಾಲು 2010ರಲ್ಲಿ ಶೇ.21.9 ಮತ್ತು 2014ರಲ್ಲಿ ಶೇ.22.1 ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಕೃಷಿ ಮತ್ತು ಕೈಗಾರಿಕೆ ಎರಡರಲ್ಲೂ ವಿಶೇಷ ಬದಲಾವಣೆ ಕಂಡುಬಂದಿಲ್ಲ.
ಆಫ್ಘಾನಿಸ್ತಾನ ಕಳೆದ ಹತ್ತು ವರ್ಷಗಳಲ್ಲಿ ಅದೆಂಥ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ ಎನ್ನುವುದು ಗೊತ್ತಾಗಬೇಕಾದರೆ ಅಲ್ಲಿನ ನಿರುದ್ಯೋಗ ಪ್ರಮಾಣವನ್ನು ಗಮನಿಸಬೇಕು. ಒಟ್ಟು ಕಾರ್ಮಿಕ ಬಲದ ಶೇಕಡಾವಾರು ನಿರುದ್ಯೋಗ 2005ರಲ್ಲಿ 10.3, 2010ರಲ್ಲಿ 10.1 ಆಗಿದ್ದರೆ, 2014ರಲ್ಲಿ ಇದು 69.1 ತಲುಪಿತ್ತು. ಅಂದರೆ 2014ರ ಹೊತ್ತಿಗೆ ಭಾರಿ ನಿರುದ್ಯೋಗ ಸಮಸ್ಯೆಗೆ ದೇಶ ಸಿಕ್ಕಿಹಾಕಿಕೊಂಡಿದೆ.ಅದೊಂದು ಪುರುಷ ಪ್ರಧಾನ ಸಮಾಜ. ದುಡಿಯಲು ಮುಂದೆ ಬಂದಿರುವ ಬಹುತೇಕರು ಪುರುಷರೇ. 2014ರ ಅಂದಾಜಿನಂತೆ ಒಟ್ಟು ಕಾರ್ಮಿಕ ಬಲದ ಪೈಕಿ ಮಹಿಳೆಯರ ಪ್ರಮಾಣ ಶೇ.18.9 ಮಾತ್ರ. ಅಷ್ಟೇ ಅಲ್ಲ, ಅವಲಂಬಿತರ ಪ್ರಮಾಣವೂ ಹೆಚ್ಚು ಅಂದರೆ, 15ರಿಂದ 64ವರ್ಷದ ಪ್ರತಿ 100 ಜನರಿಗೆ 14ವರ್ಷ ಒಳಗಿನ ಮತ್ತು 65ವರ್ಷ ಮೇಲಿರುವವರ ಸಂಖ್ಯೆ 87. ದುಡಿಯುವ ಕೈಗಳೇ ಕಡಿಮೆಯಾಗಲು ಕಾರಣ ಅಲ್ಲಿನ ನಾಗರಿಕ ಅಶಾಂತಿ.ಕ್ರಿ.ಶ. 1979ರಲ್ಲಿ ಸೋವಿಯತ್ ರಷ್ಯ ಮುಂದಾಗಿ ಅಲ್ಲಿ ಕಮ್ಯುನಿಸ್ಟ್ ನೇತೃತ್ವದ ಸರ್ಕಾರ ಸ್ಥಾಪಿಸಿತು. ಆ ದೇಶದ ಸೈನ್ಯವನ್ನೂ ಅಲ್ಲಿ ತಂದು ನಿಲ್ಲಿಸಿತು. ಆಗ ಇದನ್ನು ವಿರೋಧಿಸಿ ಮುಜಾಹಿದೀನ್ ಗಳು ಹೋರಾಟ ನಡೆಸಿದರು. ಇದರ ಪರಿಣಾಮ 1989ರಲ್ಲಿ ಸೋವಿಯತ್ ರಷ್ಯಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿತು. ಆದರೆ ನಾಗರಿಕ ಅಶಾಂತಿ ಅಲ್ಲಿಗೆ ನಿಲ್ಲಲಿಲ್ಲ.
ನಂತರ 2005ರಿಂದ 2010ರವರೆಗೆ ಮುಸ್ಲಿಂ ಮೂಲಭೂತವಾದಿ ತಾಲಿಬಾನ್ ಗಳ ಕೈಗೆ ದೇಶ ಸಿಲುಕಿತು. ಈ ಎರಡೂ ಅವಧಿಯಲ್ಲಿ ಉಂಟಾದ ಅಶಾಂತಿಯಿಂದಾಗಿ ಭಾರಿ ಪ್ರಮಾಣದ ಜನ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಕೈಗಾರಿಕೆಗಳು ಮುಚ್ಚಿಹೋಗಿವೆ ಹಾಗೂ ನಿರುದ್ಯೋಗದ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ. ಆಹಾರ ಉತ್ಪಾದನೆಯೂ ಕುಸಿತ ಗೊಂಡಿತು. ಅಫೀಮು ಮತ್ತು ಹೆರಾಯಿನ್ ಈ ದೇಶದಲ್ಲಿ ಬೆಳೆಯುವ ಪ್ರಮುಖ ಆರ್ಥಿಕ ಬೆಳೆಯಾಗಿದೆ.ಬೇರೆ ಬೇರೆ ದೇಶಗಳಿಗೆ, ಮುಖ್ಯವಾಗಿ ಪಾಕಿಸ್ತಾನಕ್ಕೆ ವಲಸೆ ಹೋಗಿರುವ ಜನರನ್ನು ಕರೆಸಿಕೊಂಡು ಅವರಿಗೆ ಉದ್ಯೋಗ ಒದಗಿಸಬೇಕಾಗಿರುವುದು, ಇನ್ನೂ ಕಾಡುತ್ತಿರುವ ಮೂಲಭೂತವಾದದ ಸಮಸ್ಯೆಯನ್ನು ತೊಡೆದುಹಾಕಿ, ದೇಶವನ್ನು ನೆಮ್ಮದಿಯ ತಾಣವನ್ನಾಗಿ ಮಾಡಬೇಕಾಗಿರುವುದು, ಒಣಭೂಮಿಗೆ ನೀರಾವರಿ ಕಲ್ಪಿಸಬೇಕಾಗಿರುವುದು, ಮಾದಕ ವಸ್ತುಗಳ ದಂಧೆಯನ್ನು ನಿಲ್ಲಿಸಬೇಕಾಗಿರುವುದು, ಕೈಗಾರಿಕೆಗಳಿಗೆ ಜೀವ ತುಂಬಬೇಕಾಗಿರುವುದು, ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸಬೇಕಾಗಿರುವುದು, ಪ್ರಸ್ತುತ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳು.

[/fusion_text][/fusion_builder_column][/fusion_builder_row][/fusion_builder_container]