Categories
asia

ಜಪಾನ್

ಅನೇಕ ಸಣ್ಣ ಪುಟ್ಟ ದ್ವೀಪಗಳು ಹಾಗೂ ಮುಖ್ಯವಾದ ನಾಲ್ಕು ದ್ವೀಪಗಳಿಂದ ಕೂಡಿದ, ದ್ವೀಪ ಸಮೂಹ ರಾಷ್ಟ್ರ ಜಪಾನ್. ಈ ದೇಶದ ವಿಸ್ತೀರ್ಣ ಹೆಚ್ಚಿಲ್ಲದಿದ್ದರೂ, ಸಾಧನೆ ಕಡಿಮೆಯದ್ದಲ್ಲ.ಜಪಾನಿನಲ್ಲಿ ಶೇ.86ರಷ್ಟು ಜನ ಶಿಂಟೋ ಮತ್ತು ಬೌದ್ಧ ಧರ್ಮವನ್ನು ಅನುಸರಿಸುತ್ತಾರೆ. ಜಪಾನಿ ಜನಾಂಗವನ್ನು ಹೊರತುಪಡಿಸಿದರೆ ಇಲ್ಲಿರುವ ಇತರೆ ಜನಾಂಗದವರಾದ ಕೊರಿಯನ್ನರು, ಚೀನಿಯರು, ಜನಾಂಗಗಳು ಪ್ರಮಾಣ ಶೇಕಡಾ ಎರಡರಷ್ಟು ಮಾತ್ರ.ಅಂದಾಜಿನಂತೆ 3,77,930 ಚ.ಕಿ. ವಿಸ್ತೀರ್ಣ ಹೊಂದಿದ್ದು, ಜನಸಂಖ್ಯೆ 12.63 ಕೋಟಿ. ರಾಜಧಾನಿ ಟೋಕ್ಯೋದ ಜನಸಂಖ್ಯೆ 2015 ರಲ್ಲಿ 3.80 ಕೋಟಿ. ಇಲ್ಲಿನ ಕರೆನ್ಸಿ ಯೆನ್ ಅಥವಾ ಜೆಪಿವೈ. ಈ ದೇಶದ ಅತ್ಯಂತ ಎತ್ತರದ ಪ್ರದೇಶ ಮೌಂಟ್ ಫ್ಯುಜಿ ಸಮುದ್ರದಿಂದ 3,776 ಮೀಟರ್ ಎತ್ತರದಲ್ಲಿದೆ.

            
ಉತ್ತರ ಪೆಸಿಫಿಕ್ ಸಮುದ್ರ, ಪೂರ್ವ ಚೀನಾ ಸಾಗರ, ಜಪಾನ್ ಸಾಗರ, ಫಿಲಿಪೈನ್ಸ್ ಸಮುದ್ರಗಳಿಂದ ಜಪಾನ್ ಸುತ್ತುವರಿದಿದೆ. ಇವುಗಳ ನಡುವೆ ಈ ದೇಶ ರೂಪುಗೊಂಡಿದ್ದು, ಹೊಕ್ಕಾಯ್ಡೊ, ಹೊನ್ಶ್, ಶಿಕೊಕೊ ಮತ್ತು ಕ್ಯೂಶ್ ಈ ನಾಲ್ಕು ದ್ವೀಪಗಳು ಜಪಾನ್ ನ ವಿಸ್ತೀರ್ಣದ ಶೇ.97ರಷ್ಟು ಆಗುತ್ತದೆ.ಎಲ್ಲ ದ್ವೀಪಗಳಿಗೆ ಕೊಳವೆ ರಸ್ತೆ ಮತ್ತು ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಈ ದೇಶ ಭೂಕಂಪ ಮತ್ತು ಜ್ವಾಲಾಮುಖಿ ಪದೇಪದೇ ಉಂಟಾಗುವ ದೇಶವಾಗಿದ್ದು, ಕ್ರಿ.ಶ.1923ರಲ್ಲಿ ಯೋಕೋಹಾಮ ಮತ್ತು ಟೋಕ್ಯೋ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ 1,40,000 ಜನ ಮೃತಪಟ್ಟಿದ್ದರು. 1995ರಲ್ಲಿ ಕೋಬೆಯಲ್ಲಿ ಸಂಭವಿಸಿದ ಮತ್ತೊಂದು ಭೂಕಂಪದಲ್ಲಿ ಸುಮಾರು 6000 ಜನ ಪ್ರಾಣ ಕಳೆದುಕೊಂಡಿದ್ದಾರೆ. ಫ್ಯುಜಿ ಪರ್ವತದಲ್ಲಿ 1707ರಲ್ಲಿ ಕಡೆಯ ಬಾರಿಗೆ ಜ್ವಾಲಾಮುಖಿ ಹೊರಹೊಮ್ಮಿತ್ತು. ಉತ್ತರದಲ್ಲಿರುವ ದ್ವೀಪ ಹೊಕ್ಕಾಯ್ಡೋ ಹೆಚ್ಚು ಗ್ರಾಮೀಣ ಮತ್ತ ಸಾಂಪ್ರದಾಯಿಕ ಸೊಗಡನ್ನು ಹೊಂದಿದೆ. ಆ ದೇಶದಲ್ಲಿ ಉತ್ಪತ್ತಿಯಾಗುವ ಧಾನ್ಯಗಳ ಪೈಕಿ ಅರ್ಧದಷ್ಟು ಇದೇ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅಮೇರಿಕದ ಮಧ್ಯಪಶ್ಚಿಮ ಪ್ರದೇಶದಲ್ಲಿ ಕಂಡುಬರುವಂತಹ ವಾತಾವರಣವೇ ಇಲ್ಲೂ ಇರುವ ಕಾರಣ, ಇಲ್ಲಿ ಗೋದಿ ಬೆಳೆಯನ್ನು ಪರಿಚಯಿಸಲಾಯಿತು.

ಜಪಾನ್- ಮೌಂಟ್ ಫುಜಿ

ಪ್ರಾಕೃತಿಕ ವೈಪರೀತ್ಯದ ಸನ್ನಿವೇಶಗಳ ನಡುವೆಯೂ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದಿರುವುದು ಮತ್ತು ಚಾರಿತ್ರಿಕ ಹಿನ್ನಡೆಗಳಿಂದ ಮೇಲೆದ್ದು ಬಂದಿರುವುದು, ಇಡೀ ಜಗತ್ತೇ ಜಪಾನ್ ಕಡೆಗೆ ಬೆಕ್ಕಸಬೆರಗಾಗಿ ನೋಡುವಂತೆ ಮಾಡಿದೆ.ಹನ್ನೆರಡನೇ ಶತಮಾನದಲ್ಲಿ ತೋಕುಗವಾಗಳ ಆಡಳಿತ ಉದಯವಾಗುವವರೆಗೆ ದುರ್ಬಲ ರಾಜರ ಕೈಗೆ ಜಪಾನ್ ಆಡಳಿತ ಸಿಕ್ಕಿತು. ಕ್ರಿ.ಶ.1542ರಲ್ಲಿ ಅಲ್ಲಿಗೆ ಪಾಶ್ಚಿಮಾತ್ಯರು ಪ್ರವೇಶ ಪಡೆದುಕೊಳ್ಳಲು ಪ್ರಯತ್ನಿಸಿದರಾದರೂ, ತೋಕುಗವಾಗಳು ಅದಕ್ಕೆ ಅವಕಾಶ ನೀಡಲಿಲ್ಲ. ನಂತರ ಡಚ್ಚರು ನಾಗಸಾಕಿಯನ್ನು ತಮ್ಮ ವಸಾಹತು ಮಾಡಿಕೊಂಡರು. ಕ್ರಿ.ಶ.1639ರಿಂದ ಜಪಾನೀಯರು ಹೊರಗಿನ ದೇಶಗಳಿಗೆ ಪ್ರವಾಸ ಮಾಡದಂತೆ ವಿಧಿಸಲಾಯಿತು (ನಾಗಸಾಕಿ ಹೊರತುಪಡಿಸಿ). 1853ರಲ್ಲಿ ಜಪಾನ್ ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ, ಸಂಯುಕ್ತ ರಾಷ್ಟ್ರಗಳ ಯುದ್ಧನೌಕೆ ಯೋಕೊಹಾಮೋಗೆ ಬಂದವು. ಇದಕ್ಕೆ ಜಪಾನ್ ಮಣಿಯಿತು. ಅದಾದ ನಂತರ ಕೇವಲ 50 ವರ್ಷಗಳಲ್ಲಿ ಜಪಾನ್ ಪಾಶ್ಚಿಮತ್ಯೀಕರಣ ನಡೆಯಿತು.ಕ್ರಿ.ಶ.1894-95ರಲ್ಲಿ ಚೈನಾ, ಕ್ರಿ.ಶ.1904-05ರಲ್ಲಿ ರಷ್ಯ ವಿರುದ್ಧ ನಡೆದ ಯುದ್ಧಗಳಲ್ಲಿ ಜಪಾನ್ ಜಯಗಳಿಸಿತು. ಕ್ರಿ.ಶ.1941ರಲ್ಲಿ ಚೈನಾ ಮೇಲೆ ದಾಳಿ ನಡೆಸಿ, ಎರಡನೇ ಮಹಾಸಮರದಲ್ಲಿ ಭಾಗಿಯಾಯಿತು. ಶರಣಾಗುವಂತೆ ಜಪಾನ್ ಗೆ ಅಮೇರಿಕ ಎಚ್ಚರಿಕೆ ನೀಡಿದಾಗಲೂ, ಜಪಾನ್ ಮಣಿಯಲಿಲ್ಲ. ಆಗ ಮೊದಲು ಹಿರೋಷಿಮಾ ಮೇಲೆ ಅಣುಬಾಂಬ್ ಎಸೆಯಲಾಯಿತು. ಆದಾಗ್ಯೂ ಜಪಾನ್ ಬಗ್ಗದಿದ್ದಾಗ ನಾಗಸಾಕಿ ನಗರ ಅಣುಬಾಂಬ್ ದಾಳಿಗೆ ತುತ್ತಾಯಿತು.
ಜಪಾನಿನ ನಿವ್ವಳ ದೇಶೀಯ ಉತ್ಪನ್ನ 2010ರಲ್ಲಿ 54,98,719 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, ಜಾಗತಿಕ ಆರ್ಥಿಕ ಹಿನ್ನೆಡೆಯ ಹಿನ್ನೆಲೆಯಲ್ಲಿ 2014ರಲ್ಲಿ 46,02,419 ದಶಲಕ್ಷ ಅಮೇರಿಕನ್ ಡಾಲರ್ ಗೆ ಕುಸಿದಿದೆ. ಶೇಕಡಾವಾರು ಜಿಡಿಪಿ 2010ರಲ್ಲಿ 4.7ರಷ್ಟಾಯಿತು, 2014ರಲ್ಲಿ ಶೇ.-0.1 ಋಣಾತ್ಮಕ ಬೆಳವಣಿಗೆ ಕಂಡುಬಂದಿದೆ.2014ರಲ್ಲಿ ನಿವ್ವಳ ಮೌಲ್ಯವರ್ಧನೆಯಲ್ಲಿ (ಜಿವಿಎ) ಕೃಷಿಯ ಪಾಲು ಕೇವಲ ಶೇ.1.2ರಷ್ಟಿತ್ತು. ಕೈಗಾರಿಕೆಯ ಪಾಲು ಶೇ.26.8 ರಷ್ಟಿತ್ತು. ಹಾಗೂ ಸೇವೆ ಮತ್ತು ಇತರೆಗಳ ಪಾಲು ಶೇ.72ರಷ್ಟು ಹೊಂದಿತ್ತು. ಅಂದರೆ ದೇಶದ ಶೇ,98ರಷ್ಟು ಜನ ಕೈಗಾರಿಕೆ ಮತ್ತು ಸೇವೆಯ ಉದ್ಯೋಗವನ್ನೇ ಅವಲಂಬಿಸಿದ್ದಾರೆ.
ಇಷ್ಟೊಂದು ಅಧಿಕ ಪ್ರಮಾಣದ ಜಿಡಿಪಿ ಹೊಂದಬೇಕೆಂದರೆ, ನಿರುದ್ಯೋಗ ಅತ್ಯಂತ ಕಡಿಮೆ ನಿರುದ್ಯೋಗ ಇಲ್ಲಿರುವುದನ್ನು ಕಾಣಬಹುದು. ಒಟ್ಟು ಕಾರ್ಮಿಕ ಬಲದ ಶೇಕಡಾವಾರು ನಿರುದ್ಯೋಗ (ಅಂದಾಜು) 2005ರಲ್ಲಿ 4.4, 2010ರಲ್ಲಿ 4.9 ಮತ್ತು 2014ರಲ್ಲಿ 3.5. ಕಾರ್ಮಿಕ ಬಲದ ಭಾಗವಹಿಸುವಿಕೆ ಜನಸಂಖ್ಯೆಯಲ್ಲಿ ಶೇಕಡಾವಾರು 2005ರಲ್ಲಿ ಮಹಿಳೆಯರು 48.4, ಪುರುಷರು 73.3, 2010ರಲ್ಲಿ ಮಹಿಳೆಯರು 49.4, ಪುರುಷರು 71.7, 2014ರಲ್ಲಿ ಮಹಿಳೆಯರು 49,3 ಮತ್ತು ಪುರುಷರು 70.5.ಆಮದು, ರಫ್ತು 2015ರಲ್ಲಿ ಜಪಾನ್ ನಿಂದ ಆದ ಒಟ್ಟು ರಫ್ತಿ ವಹಿವಾಟು ಪೈಕಿ ಅಮೇರಿಕಾಗೆ ಶೇ.20.2, ಚೈನಾಗೆ ಶೇ.17.5 ಮತ್ತು ರಿಪಬ್ಲಿಕ್ ಆಫ್ ಕೊರಿಯದೊಂದಿಗೆ ಶೇ.7ರಷ್ಟು ನಡೆದಿದ್ದರೆ, ಚೈನಾದಿಂದ ಶೇ.25.6, ಅಮೇರಿಕದಿಂದ 10.9 ಮತ್ತು ಆಸ್ಟ್ರೇಲಿಯಾದಿಂದ ಶೇ.5.6ರಷ್ಟು ಆಮದು ಮಾಡಿಕೊಂಡಿದೆ.ಸಾಮಾಜಿಕ ಸೂಚಕಗಳು
2010ರಿಂದ 2015ರ ಅವಧಿಯಲ್ಲಿ ಜನಸಂಖ್ಯೆ ವಾರ್ಷಿಕ ಬೆಳವಣಿಗೆ ದರ ಋಣಾತ್ಮಕವಾಗಿದ್ದು, -.1 ಹೊಂದಿತ್ತು. ನಗರ ಜನಸಂಖ್ಯೆ 2015ರಲ್ಲಿ ಶೇ.93.5 ಹೊಂದಿದ್ದು, ಈ ಅವಧಿಯಲ್ಲಿ ಜನಸಂಖ್ಯೆ ಕಡಿಮೆಯಾಗಿದ್ದು, ಬಹುತೇಕ ಜನ ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ. ಆಯುಷ್ಕಾಲ 2010-2015ರ ರ ಅವಧಿಯಲ್ಲಿ ಮಹಿಳೆಯರು 86.5 ಮತ್ತು ಪುರುಷರು 80 ವರ್ಷಗಳನ್ನು ಹೊಂದಿದ್ದರು. ಹೀಗಾಗಿ ಅವಲಂಬಿತರ ಅನುಪಾತ ಸಹಜವಾಗಿಯೇ ಹೆಚ್ಚಾಗಿದೆ. 15-64 ವರ್ಷ ವಯಸ್ಸಿನ ಪ್ರತಿ ನೂರು ಜನರಿಗೆ 14ವರ್ಷ ಕೆಳಗಿನವರು ಮತ್ತು 65ವರ್ಷಕ್ಕೂ ಮೇಲ್ಪಟ್ಟವರ ಸಂಖ್ಯೆ 65. ಜಿಡಿಪಿಯ ಶೇ.10.2ರಷ್ಟು ಆರೋಗ್ಯಕ್ಕೆ, ಶೇ.3.8ರಷ್ಟು ಶಿಕ್ಷಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಶೇ.90.6ರಷ್ಟು ಜನ ಇಂಟರ್ ನೆಟ್ ಬಳಸುತ್ತಿದ್ದಾರೆ. ಬಯಲು ಪ್ರದೇಶ ಶೇ.68.5ರಷ್ಟು ಅರಣ್ಯ ಪ್ರದೇಶವಿದೆ. ಶೇ.100ರಷ್ಟು ಜನ ಉತ್ತಮ ಕುಡಿಯುವ ನೀರನ್ನು ಬಳಸುತ್ತಿದ್ದಾರೆ.ಮೇಲಿನ ಅಂಕಿಅಂಶಗಳಿಂದ ಜಪಾನಿನ ಪ್ರಸ್ತುತ ಸ್ಥಿತಿಗತಿ ತಿಳಿದುಬರುತ್ತದೆ.