Categories
asia

ಕಿರ್ಗಿಸ್ತಾನ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಅಪಾರ ಪ್ರಮಾಣದ ಜಲವಿದ್ಯುತ್ ಸಂಪನ್ಮೂಲ ಲಭ್ಯವಿರುವ, ಚಿನ್ನ ಮತ್ತು ಅಪರೂಪದ ಯುರೇನಿಯಂ ಖನಿಜಗಳನ್ನು ಒಡಲಲ್ಲಿ ಹೊಂದಿರುವ ನಿಸರ್ಗ ಸುಂದರ ದೇಶ ಕಿರ್ಗಿಸ್ತಾನ್ (Kyrgyzstan).ಮಧ್ಯ ಏಷಿಯಾ ಪ್ರದೇಶದಲ್ಲಿರುವ ಈ ದೇಶ ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ನೆಫಲೈನ್, ಪಾದರಸ , ಸೀಸ ಮತ್ತು ಸತುವು ಮುಂತಾದ ಸಂಪನ್ಮೂಲಗಳನ್ನು ಹೊಂದಿದೆ.ಈ ದೇಶದ ವಿಸ್ತೀರ್ಣ1,99,949ಚ.ಕಿ.ಮೀ. ಜನಸಂಖ್ಯೆ 2016ರ ಅಂದಾಜಿನಂತೆ 60.34 ಲಕ್ಷ ಮಾತ್ರ. ಹೋಲಿಸಿದಲ್ಲಿ ಜನಸಂಖ್ಯೆ ಕಡಿಮೆ. ಅಂದರೆ ಜನಸಾಂದ್ರತೆ ಪ್ರತಿ ಚ.ಕಿ.ಮೀ ಗೆ ಕೇವಲ 31.5 ಮಾತ್ರ. ದೇಶದ ಬಹುಭಾಗದಲ್ಲಿ ಟಿಯೆನ್ ಶಾನ್ (Tien shan) ಮತ್ತು ಪಮೀರ್ (pamir) ಪರ್ವತ ಶ್ರೇಣಿಗಳನ್ನು ಹೊಂದಿದ್ದು, ಶೇ.90ರಷ್ಟು ಭೂ ಪ್ರದೇಶ ಸಮುದ್ರಮಟ್ಟದಿಂದ 1500 ಮೀ. ಗೂ ಎತ್ತರದಲ್ಲಿರುವುದು ಕಿರ್ಗಿಸ್ತಾನದ ವೈಶಿಷ್ಟ್ಯ.

ಎತ್ತರದ ಹಿಮಚ್ಛಾದಿತ ಶಿಖರಗಳಿಂದ ಹರಿಯುವ ನದಿ ಮತ್ತು ತೊರೆಗಳಿಂದ ಈ ದೇಶದಲ್ಲಿ ನೀರು ಸಮೃದ್ಧವಾಗಿದೆ. ಚೈನಾ ಗಡಿಯಲ್ಲಿರುವ ವಿಕ್ಟರಿ ಶಿಖರ ಸಮುದ್ರಮಟ್ಟದಿಂದ 24,406 ಅಡಿ ಇದ್ದರೆ, ಕಜಕಸ್ತಾನ ಗಡಿಯಲ್ಲಿನ ಖಾನ್ ಟೆಂಗ್ರಿ ಶಿಖರದ ಎತ್ತರ 22,949 ಅಡಿ. ಕಿರ್ಗಿಸ್ತಾನದ ಬಹುತೇಕ ನದಿಗಳು ಸಿರ್ ದರಿಯಾ (Syr dariya) ನದಿಯನ್ನು ಸೇರಿಕೊಳ್ಳುತ್ತವೆ. ಕಿರ್ಗಿಸ್ತಾನ್ ದಲ್ಲಿ ಸುಮಾರು 2000 ಸರೋವರಗಳಿವೆ. ಈ ದೇಶದ ಉತ್ತರ ಭಾಗದಲ್ಲಿರುವ ಚು ಮತ್ತು ತಲಸ್ ನದಿ ಕಣಿವೆಗಳು ಮಾತ್ರ ತಗ್ಗು ಪ್ರದೇಶದಲ್ಲಿವೆ.

ಇದರ ರಾಜಧಾನಿ ಬಿಶ್ಕೇಕ್ (Bishkek) ನಗರಕ್ಕೆ ಸೋವಿಯತ್ ಶಕೆಯಲ್ಲಿ ಫ್ರಂಜ್ (Frunze) ಎನ್ನುವ ಹೆಸರಿತ್ತು. ರಾಜಧಾನಿಯ ಜನಸಂಖ್ಯೆ 8.65 ಲಕ್ಷ. ಇಲ್ಲಿನ ಕರೆನ್ಸಿ ಸಾಮ್ (som) (KGS). ಚೈನಾದ ಪಶ್ಚಿಮಕ್ಕಿರುವ ಈ ದೇಶ, ಕಜಕಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್ ಗಡಿಗಳಿಗೆ ಹೊಂದಿಕೊಂಡಿದೆ.ಈ ದೇಶಕ್ಕೆ ಪುರಾತನ ಇತಿಹಾಸವಿದೆ. ಸುಮಾರು 5ವರ್ಷಗಳಿಗೂ ಹಿಂದಿನ ನಿಯಾಂಡರ್ಟಾಲ್ (neanderthal) ಮಾನವ ಇಲ್ಲಿನ ಬೋಜ್ ಬಾರ್ಮ್ಯಾಕ್ ಪರ್ವತದ ಗುಹೆಗಳಲ್ಲಿ ವಾಸಿಸುತ್ತಿದ್ದ ಬಗ್ಗೆ ಕುರುಹುಗಳು ದೊರೆತಿವೆ. ಜಗತ್ತಿನ ಎರಡನೇ ಅತಿದೊಡ್ಡ ಪರ್ವತ ಸರೋವರ- ಇಸ್ಸಿಕ್ ಕುಲ್ (Issyk kul) ನ ತಟದಲ್ಲಿ 5 ಸಾವಿರ ವರ್ಷಗಳ ಹಿಂದೆಯೇ ಬೇಟೆಯಾಡಿ ಬದುಕುತ್ತಿದ್ದ ಮನುಷ್ಯ ವಾಸವಾಗಿದ್ದುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಈಗಿನ ಕಿರ್ಗಿಸ್ತಾನ್ ಭೂಪ್ರದೇಶದಲ್ಲಿ ಕ್ರಿ.ಪೂ. ಎರಡನೇ ಶತಮಾನದಲ್ಲಿ ಮೊದಲ ರಾಜ್ಯ ಸ್ಥಾಪನೆಯಾಯಿತು.

ಕಿರ್ಗಿಸ್ತಾನ್ ಏಳನೇ ಶತಮಾನದಲ್ಲಿ ಟರ್ಕಿಯ ಖಾನೇಟ್ (turkic khanate) ಸಾಮ್ರಾಜ್ಯಕ್ಕೆ ಒಳಪಟ್ಟಿತು. 9ರಿಂದ 12ನೇ ಶತಮಾನದವರೆಗೆ ದಕ್ಷಿಣ ಸೈಬೀರಿಯಾ ಪ್ರದೇಶದಲ್ಲಿ ಕಿರ್ಗಿಸ್ ಖಾನೇಟ್ (kyrgyz khanate) ಆಡಳಿತ ನಡೆಸಿತು. ಮಂಗೋಲಿಯಾದ ಝೆಂಗಿಸ್ ಖಾನ್ (Genghis khan) ವಶಪಡಿಸಿಕೊಳ್ಳುವವರೆಗೂ ಅದು ಬಲಾಢ್ಯ ಸಾಮ್ರಾಜ್ಯವಾಗಿ ನಿಂತಿತ್ತು. ಝೆಂಗಿಸ್ ಖಾನ್ ಮಧ್ಯ ಏಷಿಯಾದ ವಿಶಾಲ ಭೂ ಪ್ರದೇಶವನ್ನು ಗೆದ್ದು, ನಂತರ ಅವುಗಳನ್ನು ಆಡಳಿತಕ್ಕನುಕೂಲವಾಗುವ ಹಾಗೆ ‘ಉಲುಸ್’ ಗಳೆಂದು ಭಾಗಗಳನ್ನಾಗಿ ಮಾಡಿ, ಅವುಗಳಿಗೆ ಮುಖ್ಯಸ್ಥರಾಗಿ ತನ್ನ ಮಕ್ಕಳನ್ನು ನೇಮಿಸಿದ. ಹಾಗೆ ಟ್ರಾನ್ಸೋಕ್ಸಿಯಾನ ಮತ್ತು ಕಿರ್ಗಿಸ್ ಪ್ರದೇಶಗಳು ಷಗಟಾಯ್ ಉಲುಸ್ (chagatai ulus) ಆಯಿತು. ಷಗಟಾಯ್ ಖಾನ್ ಆತನ ಝೆಂಗಿಸ್ ಖಾನನ ಎರಡನೇ ಮಗ. ಷಗಟಾಯ್ ಖಾನ್ ಸಾಮ್ರಾಜ್ಯದ ಪತನದ ನಂತರ ಅದು ಮಂಗೋಲಿಯಾದ ಮತ್ತೊಬ್ಬ ರಾಜ ತೈಮೂರನ ಆಡಳಿತವೂ ಇಲ್ಲಿ ನಡೆದಿದೆ.

ಹತ್ತೊಂಬತ್ತನೇ ಶತಮಾನದಲ್ಲಿ ಈ ಪ್ರದೇಶ ರಷ್ಯದ ಜಾರ್ (czar) ಚಕ್ರವರ್ತಿಗಳ ವಶವಾಯಿತು. 1855-63ರ ಅವಧಿಯಲ್ಲಿ ಕಿರ್ಗಿಸ್ತಾನದ ಉತ್ತರ ಭಾಗವನ್ನು ಮಾತ್ರ ಅವರು ಗೆದ್ದಿದ್ದರು. 1876-77ರಲ್ಲಿ ಕಿರ್ಗಿಸ್ತಾನದಲ್ಲಿ ನಡೆದ ಕ್ರಾಂತಿ ವಿಫಲಗೊಂಡ ನಂತರ ಇಡೀ ದೇಶ ಸಂಪೂರ್ಣ ರಷ್ಯಾ ಸಾಮ್ರಾಜ್ಯಕ್ಕೆ ಸೇರಿಕೊಂಡಿತು. 1917ರಲ್ಲಿ ನಡೆದ ರಷ್ಯಾ ಕ್ರಾಂತಿ ಸಂದರ್ಭದಲ್ಲಿ ಕಿರ್ಗಿಸ್ತಾನ, ಯುಎಸ್ಎಸ್ಆರ್ ಭಾಗವಾಯಿತು. ಯುಎಸ್ಎಸ್ಆರ್ ಪತನಗೊಂಡ ನಂತರ ಸ್ವತಂತ್ರಗೊಂಡ ಕಿರ್ಗಿಸ್ತಾನ್, 2 ಮಾರ್ಚ್ 1992ರಲ್ಲಿ ವಿಶ್ವಸಂಸ್ಥೆ ಸದಸ್ಯತ್ವ ಪಡೆಯಿತು.
ಇಂತಹ ವೈಶಿಷ್ಟ್ಯಪೂರ್ಣ ದೇಶದ ನಿವ್ವಳ ದೇಶೀಯ ಉತ್ಪನ್ನ (GDP) 2014ರಲ್ಲಿ 7404ದಶಲಕ್ಷ ಅಮೇರಿಕನ್ ಡಾಲರ್. ತಲಾ ನಿವ್ವಳ ದೇಶೀಯ ಉತ್ಪನ್ನ 1267 ಡಾಲರ್. ಆರ್ಥಿಕತೆಯಲ್ಲಿ ಕೃಷಿಯ ನಿವ್ವಳ ಮೌಲ್ಯವರ್ಧನೆ (GVA) 2005ರಲ್ಲಿ ಶೇ.31.3ರಷ್ಟಿದ್ದು, 2014ರಲ್ಲಿ ಶೇ.16.6ಕ್ಕೆ ಇಳಿದಿದೆ. ಕೈಗಾರಿಕೆಯ ನಿವ್ವಳ ಮೌಲ್ಯವರ್ಧನೆ ಶೇ.28.2ರಷ್ಟು ಹಾಗೂ ಸೇವಾವಲಯದ್ದು ಶೇ.57.6ರಷ್ಟಿದೆ. ಕಾರ್ಮಿಕ ಬಲದ ಶೇ.8.6ರಷ್ಟು ನಿರುದ್ಯೋಗವಿದೆ. 2015ರಲ್ಲಿ 1441.1ದಶಲಕ್ಷ ಅಮೇರಿಕನ್ ಡಾಲರ್ ರಷ್ಟು ರಫ್ತು, 4068.1 ದಶಲಕ್ಷ ಅಮೇರಿಕನ್ ಡಾಲರ್ ಆಮದು ವಹಿವಾಟು ನಡೆದಿದೆ. ಅಂದರೆ ರಫ್ತಿನ ಪ್ರಮಾಣ ಕಡಿಮೆ ಇರುವುದು ದೇಶದ ಮೇಲೆ ಆರ್ಥಿಕ ಹೊರೆ ಇದೆ. ಸ್ವಿಜರ್ ಲ್ಯಾಂಡ್, ಕಜಕಸ್ತಾನ್ ಮತ್ತು ರಷ್ಯನ್ ಫೆಡರೇಶನ್ ಗಳ ಜೊತೆ ಹೆಚ್ಚಿನ ರಫ್ತು ಹಾಗೂ ರಷ್ಯನ್ ಫಡರೇಷನ್, ಚೈನಾ ಹಾಗೂ ಕಜಕಸ್ತಾನದ ಜೊತೆ ಆಮದು ವಹಿವಾಟು ಇರಿಸಿಕೊಂಡಿದೆ. 2015ರಲ್ಲಿ ಈ ದೇಶದ ಒಟ್ಟು ಜನಸಂಖ್ಯೆಯ ಶೇ.35.7ರಷ್ಟು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರು. ಶಿಕ್ಷಣಕ್ಕೆ ಒಟ್ಟು ಜಿಡಿಪಿಯ ಶೇ.6.8ರಷ್ಟು ಹಾಗೂ ಆರೋಗ್ಯಕ್ಕೆ ಶೇ.6.5ರಷ್ಟು ವೆಚ್ಚ ಮಾಡಲಾಗುತ್ತಿದೆ. ಇಂಟರ್ನೆಟ್ ಬಳಕೆದಾರರ ಪ್ರಮಾಣ ಕೇವಲ ಶೇ.28.3ರಷ್ಟು ಮಾತ್ರ.

ಸಾಕಷ್ಟು ಪ್ರಮಾಣದಲ್ಲಿ ಶ್ರೀಮಂತ ಖನಿಜಗಳನ್ನು ಹೊಂದಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಜಿಡಿಪಿ ಹೆಚ್ಚಿಸಿಕೊಳ್ಳಬೇಕಾಗಿರುವುದು, ಅಕ್ಕ ಪಕ್ಕದ ದೇಶಗಳೊಡನೆ ಇರುವ ನದಿ ನೀರಿನ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕಾಗಿರುವುದು ಪ್ರಸ್ತುತ ಕಿರ್ಗಿಸ್ತಾನದ ಮುಂದಿರುವ ಸವಾಲುಗಳು.

[/fusion_text][/fusion_builder_column][/fusion_builder_row][/fusion_builder_container]