Categories
asia

ರಿಪಬ್ಲಿಕ್ ಆಫ್ ಮ್ಯಾನ್ಮಾರ್

[fusion_builder_container hundred_percent=”no” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” video_preview_image=”” border_color=”” border_style=”solid” margin_top=”” margin_bottom=”” padding_top=”” padding_right=”” padding_bottom=”” padding_left=”” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಭಾರತಕ್ಕೆ ಹೊಂದಿಕೊಂಡಂತೇ ಇದ್ದು, ತನ್ನ ವಿಶಿಷ್ಟ ಸಾಂಪ್ರದಾಯವನ್ನು ಉಳಿಸಿಕೊಂಡಿರುವ ನೈರುತ್ಯ ಏಷ್ಯಾದ ಬೌದ್ಧ ದೇಶ ರಿಪಬ್ಲಿಕ್ ಆಫ್ ಮ್ಯಾನ್ಮಾರ್. ಇದನ್ನು ಬರ್ಮಾ ಎಂತಲೂ ಕರೆಯಲಾಗುತ್ತದೆ.676577 ಚ.ಕಿ. ವಿಸ್ತೀರ್ಣ ಹೊಂದಿರುವ ಈ ದೇಶದ ಅಂದಾಜು ಜನಸಂಖ್ಯೆ 2016ರಲ್ಲಿ 5 ಕೋಟಿ 43 ಲಕ್ಷ. ಪ್ರತಿ ಚ.ಕಿ. ಜನಸಾಂದ್ರತೆ ಪ್ರತಿ ಚ.ಕಿ ಗೆ 83.2. ರಾಜಧಾನಿ ನಾಯ್ ಪ್ಯು ಟಾ. ರಾಜಧಾನಿಯ ಜನಸಂಖ್ಯೆ 10 ಲಕ್ಷ 30 ಸಾವಿರ. ಇಲ್ಲಿನ ಕರೆನ್ಸಿ ಕ್ಯಾಟ್ (ಎಂಎಂಕೆ).

                                                                       

ಇದನ್ನು ಬರ್ಮಾ ಅಂತಲೂ ಕರೆಯಲಾಗುತ್ತದೆ. ಬರ್ಮಾದ ಬಹಳಷ್ಟು ಪ್ರದೇಶಗಳು ಒಂದು ಕಾಲದಲ್ಲಿ ಭಾರತೀಯ ರಾಜರಿಂದ ಆಳಲ್ಪಟ್ಟಿವೆ. ಭಾರತ ಹಾಗೂ ಚೈನಾ ಎರಡೂ ದೇಶಗಳಿಂದ ಪ್ರಭಾವಿತಗೊಂಡಿರುವ ದೇಶ ಮ್ಯಾನ್ಮಾರ್. ಭಾರತ, ಬಾಂಗ್ಲಾದೇಶ ಮತ್ತು ಚೈನಾ, ಲಾವೋಸ್ ಮತ್ತು ಥೈಲ್ಯಾಂಡ್ ಗಳಿಂದ ಸುತ್ತುವರಿದಿರುವ ಈ ದೇಶದ ಅಧಿಕೃತ ಭಾಷೆ ಬರ್ಮೀಸ್.
ಈ ದೇಶದಲ್ಲಿ 13,000 ವರ್ಷಗಳ ಹಿಂದೆ ಮನುಷ್ಯ ವಾಸ ಮಾಡುತ್ತಿದ್ದ ಎನ್ನುವುದಕ್ಕೆ ಪುರಾವೆಗಳು ದೊರೆತಿವೆ. ಕ್ರಿ.ಪೂ.6000 ದಿಂದ ಕ್ರಿ.ಪೂ.10000 ವರ್ಷಗಳ ಹಿಂದೆ, ನವಶಿಲಾಯುಗದ ಕಾಲದಲ್ಲಿ ಟೌಂಗ್ಯಿ ಗುಹೆಗಳ ಬಳಿ, ಪ್ರಾಣಿಗಳ ಸಾಕಾಣಿಕೆ ಹಾಗೂ ಕಲ್ಲಿನ ಆಯುಧಗಳ ಬಳಕೆ ಕುರಿತು ಕುರುಹುಗಳು ದೊರೆತಿವೆ. ಕ್ರಿ.ಪೂ.1500ರಲ್ಲಿ ಈ ಪ್ರದೇಶದಲ್ಲಿ ಜನ ಅಕ್ಕಿ ಬೆಳೆಯುತ್ತಿದ್ದುದು, ಕೋಳಿ ಮತ್ತು ಹಂದಿಗಳನ್ನು ಸಾಕುತ್ತಿದ್ದುದಕ್ಕೆ ಪುರಾವೆಗಳಿವೆ. ಕ್ರಿ.ಪೂ.500ರಿಂದ ಕ್ರಿ.ಪೂ.200ರ ಅವಧಿಯಲ್ಲಿಯೇ ಇಲ್ಲಿನ ಜನ ಚೈನಾದೊಂದಿಗೆ ಅಕ್ಕಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.
ಚೈನಾದಿಂದ ಭಾರತದ ನಡುವಿನ ರಸ್ತೆಯ ಹಾದಿಯಲ್ಲಿ ಬರ್ಮಾ ಇತ್ತು. ನಾಲ್ಕನೇ ಶತಮಾನದ ವೇಳೆಗೆ ಇರ್ರವಾಡಿ ಕಣಿವೆ, ದಕ್ಷಿಣ ಭಾರತದ ಬೌದ್ಧರಿಂದ ಪ್ರಭಾವಿತವಾಗಿತ್ತು.ತುಂಬಾ ವರ್ಷಗಳ ಹಿಂದೆಯೇ ಥೆರವಾಡ ಬೌದ್ಧಮತವನ್ನು ಅನುಸರಿಸುತ್ತಿದ್ದ, ಟಿಬೆಟೋ-ಬರ್ಮಾ ಭಾಷೆಗಳನ್ನು ಮಾತನಾಡುತ್ತಿದ್ದ ಜನ ಇಲ್ಲಿ ವಾಸಿಸುತ್ತಿದ್ದ ಕುರಿತು ದಾಖಲೆಗಳಿವೆ. ಒಂಬತ್ತನೇ ಶತಮಾನದಲ್ಲಿ ಇರ್ರವಾಡಿ ಕಣಿವೆಯಲ್ಲಿ ಬಾರ್ಮಾರ್ ಜನ ಪ್ರವೇಶಿಸಿ, ಬಾಗನ್ ಸಾಮ್ರಾಜ್ಯ ಸ್ಥಾಪಿಸಿದ್ದರು. ಕ್ರಿ.ಶ.1044ರಿಂದ 1287ರವರೆಗೆ ಅದು ಆಡಳಿತ ನಡೆಸಿತು.
1287ರಲ್ಲಿ ಮೊದಲ ಮಂಗೋಲಿಯನ್ ದಾಳಿಯನ್ನು ಬರ್ಮಾ ಎದುರಿಸಬೇಕಾಯಿತು. 1510ರಿಂದ 1752ರವರೆಗೆ ಟೌಂಗೂ ರಾಜಮನೆತನದ ಆಡಳಿತ, ಸಣ್ಣ ಪುಟ್ಟ ರಾಜರನ್ನೆಲ್ಲ ಒಗ್ಗೂಡಿಸಿ, ಬರ್ಮಾವನ್ನು ಒಂದು ಏಕೀಕೃತ ದೇಶವನ್ನಾಗಿ ಮಾಡಿತು. ನೈರುತ್ಯ ಏಷ್ಯಾದ ಅತ್ಯಂತ ವಿಶಾಲ ದೇಶವಾಗಿ ಅದು ಆಡಳಿತ ನಡೆಸಿತು. ನಂತರ ಬಂದ ಕೊನ್ಬೌಂಗ್ ಸಾಮ್ರಾಜ್ಯ ಮಣಿಪುರದವರೆಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡರು. ಅಷ್ಟು ಹೊತ್ತಿಗೆ ಬ್ರಿಟಿಷರು ಕ್ರಮೇಣ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಾ ಬಂದಿದ್ದರು. ಅವರೊಂದಿಗೂ ಕೊನ್ಬೌಂಗ್ ರಾಜರು ಯುದ್ಧ ಮಾಡಬೇಕಾಗಿ ಬಂದಿತು. 1824ರಲ್ಲಿ ಮೊದಲ ಆಂಗ್ಲೋ-ಬರ್ಮಾ ಯುದ್ಧ, 1882ರಲ್ಲಿ ಎರಡನೇ ಆಂಗ್ಲೋ ಬರ್ಮಾ ಮತ್ತು 1985ರಲ್ಲಿ ಮೂರನೇ ಯುದ್ಧ ಜರುಗಿತು. ಅವುಗಳಲ್ಲಿ ಬರ್ಮಾದ ಕಡೆಯ ರಾಜ ಥಿಬಾ ಸೋತು, ಭಾರತಕ್ಕೆ ದೇಶಾಂತರ ಬಂದ ನಂತರ, ಬರ್ಮಾವನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಳ್ಳಲು ಬ್ರಿಟಿಷರು ಯಶಸ್ವಿಯಾದರು.
ಬ್ರಿಟಿಷರು ಬರ್ಮಾವನ್ನು ಭಾರತದ ಒಂದು ಪ್ರಾಂತ್ಯವಾಗಿ ಮಾಡಿ, ರಂಗೂನನ್ನು (ಈಗಿನ ಯಂಗೂನ್) ರಾಜಧಾನಿಯನ್ನಾಗಿ ಮಾಡಿಕೊಂಡರು. ಬ್ರಿಟಿಷರ ಆಡಳಿತ ಬರ್ಮಾದ ಸಾಮಾಜಿಕ ಚಿತ್ರಣವನ್ನು ಬದಲಿಸಿತು. ಭಾರತದಲ್ಲಿ ನಡೆದಂತೆ ಅಲ್ಲಿಯೂ 20ರ ದಶಕದಲ್ಲಿ ಕರನಿರಾಕರಣೆ ಚಳುವಳಿ ನಡೆಯಿತು. ಸ್ವಾತಂತ್ರ್ಯ ಚಳವಳಿ, ಉಪವಾಸ ಸತ್ಯಾಗ್ರಹಗಳು ನಡೆದವು. 1937ರಲ್ಲಿ ಭಾರತದಿಂದ ಬರ್ಮಾವನ್ನು ಬೇರ್ಪಡಿಸಿದ ಬ್ರಿಟಿಷರು, ಆ ದೇಶಕ್ಕೆ ಪ್ರತ್ಯೇಕ ಸಂವಿಧಾನವನ್ನು ರಚಿಸಿದರು. ವಸಾಹತುಶಾಹಿ ಸರ್ಕಾರವನ್ನು ಕಿತ್ತೊಗೆಯಲು ರಂಗೂನ್ ನಲ್ಲಿ ಹೋರಾಟ ನಡೆಯಿತು. ಈ ಸಮಯದಲ್ಲಿ ಚೈನಾದಿಂದ ಪ್ರಭಾವಿತಗೊಂಡು ಕಮ್ಯುನಿಷ್ಟ್ ಪಕ್ಷ ಬೆಳೆದುನಿಂತಿತು.
ಎರಡನೇ ಮಹಾಯುದ್ಧದಲ್ಲಿ ಸ್ಥಳೀಯ ಬೌದ್ಧ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧವಾಗಿ ಮತ್ತು ಜಪಾನ್ ಪರವಾಗಿ ನಿಂತರು. ಹೀಗಾಗಿ ಬ್ರಿಟಿಷರು ಅರಕಾನ್ ಪ್ರದೇಶದಲ್ಲಿನ ರೋಹಿಂಗ್ಯಾಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿ, ಜಪಾನಿಯರ ವಿರುದ್ಧ ಹೋರಾಡುವಂತೆ ಪ್ರಚೋದಿಸಿದರು. ಆ ಸಮಯದಲ್ಲಿ ಅಲ್ಲಿ ಒಂದು ಅಂತರ್ಯುದ್ಧವೇ ನಡೆಯಿತು. ಬ್ರಿಟಿಷರ ಕ್ರಮ ಅಲ್ಲಿನ ಬುಡಕಟ್ಟು ಜನಾಂಗಗಳ ನಡುವೆ ವೈಮನಸ್ಯ ಬಿತ್ತಿ, ಪರಸ್ಪರ ಕತ್ತಿ ಮಸೆಯುವಂತೆ ಮಾಡಿತು. 1948ರಲ್ಲಿ ಬ್ರಿಟಿಷರು ದೇಶ ಬಿಟ್ಟು ಹೋದರೂ, ಈ ಜನಾಂಗೀಯ ಕಲಹ ಇದುವರೆಗೆ ನಿಂತಿಲ್ಲ. ಮ್ಯಾನ್ಮಾರ್ ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶ ಹಿಂದುಳಿಯಲು ಇದೂ ಒಂದು ಕಾರಣ.
ಬರ್ಮಾಗೆ ಸ್ವಾತಂತ್ರ್ಯ ಬಂದ ನಂತರ ಕೆಲವು ವರ್ಷಗಳ ಕಾಲ ಪ್ರಜಾಪ್ರಭುತ್ವ ನೆಲೆಸಿ, ನಂತರ ಮಿಲಿಟರಿ ಆಡಳಿತ ಕಂಡಿತು. ಬರ್ಮಾ ದೇಶದ ಪಿತಾಮಹ ಎಂದು ಕರೆಸಿಕೊಳಲ್ಪಡುವ ಆಂಗ್ ಸಾನ್ ಮಗಳು ಆಂಗ್ ಸಾನ್ ಸೂ ಕಿ, ಪ್ರಜಾಪ್ರಭುತ್ವ ಪರ ಸುದೀರ್ಘ ಹೋರಾಟವನ್ನು ನಡೆಸಿದರು. ಈ ಹಿನ್ನೆಲೆಯಲ್ಲಿ 1980ರಿಂದ 2010ರವರೆಗಿನ 21 ವರ್ಷದ ಅವಧಿಯಲ್ಲಿ ಆಂಗ್ ಸಾನ್ ಸೂ ಕಿ 15 ವರ್ಷಗಳ ಕಾಲ ಗೃಹಬಂಧನಕ್ಕೆ ಒಳಪಟ್ಟಿದ್ದರು. ಅವರು ವಿದೇಶಿ ವ್ಯಕ್ತಿ ಮಿಖಾಯಿಲ್ ಅವರನ್ನು ಮದುವೆಯಾಗಿದ್ದು, ಆ ಕಾರಣಕ್ಕೆ ಅಧ್ಯಕ್ಷೀಯ ಪಟ್ಟಕ್ಕೆ ಅವರು ಅಭ್ಯರ್ಥಿಯಾಗಲು ಸಾಧ್ಯವಿರಲಿಲ್ಲ. ಆದರೆ 2015ರಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿದರು. ನಂತರ ಸ್ಟೇಟ್ ಕೌನ್ಸಿಲರ್ (ಸರ್ಕಾರದ ಮುಖ್ಯಸ್ಥೆ ಅಥವಾ ಪ್ರಧಾನಮಂತ್ರಿ ಸ್ಥಾನ) ಎನ್ನುವ ಹುದ್ದೆಯನ್ನು ಅಲಂಕರಿಸಿದರು.
ಈ ದೇಶದ ನಿವ್ವಳ ದೇಶೀಯ ಉತ್ಪಾದನೆ (ಜಿಡಿಪಿ) 2005ರಲ್ಲಿ 11931 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, 2014 ರಲ್ಲಿ 41445 ದಶಲಕ್ಷ ಅಮೇರಿಕನ್ ಡಾಲರ್ ಗೇರಿದೆ. 2005ರಲ್ಲಿ ಜಿಡಿಪಿ ಬೆಳವಣಿಗೆ ಶೇ.13.5ರಷ್ಟಿದ್ದು, 2014ರಲ್ಲಿ ಶೇ.8.7ರಷ್ಟು ಹೆಚ್ಚಿನ ಪ್ರಮಾಣದಲ್ಲಿರುವುದೇ ಇದಕ್ಕೆ ಕಾರಣ.2014ರಲ್ಲಿ ಆರ್ಥಿಕತೆಯ ನಿವ್ವಳ ಮೌಲ್ಯವರ್ಧನೆ(ಜಿವಿಎ)ಯಲ್ಲಿ ಕೃಷಿಯ ಪಾಲು ಶೇ.27.9, ಕೈಗಾರಿಕೆ ಪಾಲು ಶೇ.34.5 ಹಾಗೂ ಸೇವೆಗಳು ಮತ್ತು ಇತರೆ ಗಳಲ್ಲಿ ಶೇ.37.7ರಷ್ಟಿತ್ತು. ನಿರುದ್ಯೋಗದ ಪ್ರಮಾಣ 2014ರಲ್ಲಿ ಕೇವಲ ಶೇ.4.6ರಷ್ಟು ಮಾತ್ರ ಎನ್ನುವುದು ಗಮನಾರ್ಹ ಸಂಗತಿ. ನಗರದಲ್ಲಿ ವಾಸಿಸುವವರ ಜನಸಂಖ್ಯೆ ಹೆಚ್ಚಾಗುತ್ತಿದ್ದು, 2015ರಲ್ಲಿ ನಗರ ಜನಸಂಖ್ಯೆ ಶೇ.34.1ರಷ್ಟು ಮಾತ್ರ.
ಬರ್ಮಾ ದೇಶದಲ್ಲಿನ ಅವಲಂಬಿತರ ಅನುಪಾತ ಅಂದರೆ 15ರಿಂದ 64 ವರ್ಷ ವಯಸ್ಸಿನ ಪ್ರತಿ 100 ಜನಕ್ಕೆ, 14ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಹೆಚ್ಚಿನವರ ಸಂಖ್ಯೆ ಕೇವಲ 49. ಶಿಕ್ಷಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಮಹತ್ವ ಹೆಚ್ಚಿಗೆ ನೀಡುತ್ತಿದ್ದು, ಶೇ.100ರಷ್ಟು ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ.ಬಾಂಗ್ಲಾದೇಶದಿಂದ ಒಳನುಸುಳುಕೋರರ ಸಮಸ್ಯೆ ಇದ್ದು, ರೋಹಿಂಗ್ಯಾಗಳ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿರುವುದು ಸ್ಥಳೀಯರಲ್ಲಿ ದುಗುಡ ಹೆಚ್ಚಿಸಿದೆ. ಭಯೋತ್ಪಾದಕರ ಸಮಸ್ಯೆ ದೇಶವನ್ನು ಕಾಡುತ್ತಿದೆ. ಈಶಾನ್ಯ ದಿಕ್ಕಿನಲ್ಲಿ ಸಶಸ್ತ್ರ ಕಮ್ಯುನಿಸ್ಟ್ ಚಳುವಳಿಯೂ ನಡೆದಿದೆ. ಇವೆಲ್ಲದರ ನಡುವೆ ಆರ್ಥಿಕ ಅಭಿವೃದ್ಧಿ ಮುಂದುವರಿಸಿಕೊಂಡು ಹೋಗಬೇಕಾಗಿರುವುದೇ ಬರ್ಮಾ ಮುಂದಿರುವ ಸವಾಲು.
          

[/fusion_text][/fusion_builder_column][/fusion_builder_row][/fusion_builder_container]