ಶ್ರೀಲಂಕಾ
ಪರ್ವತ ಪ್ರದೇಶಗಳು, ನಯನ ಮನೋಹರ ನದಿ, ಜಲಪಾತಗಳು, ನಡುವಿನ ಪ್ರಸ್ಥಭೂಮಿ, ಉಬ್ಬು ತಗ್ಗುಗಳ ಭೂ ಪ್ರದೇಶ, ಸುತ್ತಲೂ ಕರಾವಳಿ ಹೊಂದಿರುವ ಸುಂದರ ದ್ವೀಪ ಶ್ರೀಲಂಕ.ಮರಳುಭರಿತ ಕರಾವಳಿಯಲ್ಲಿ ತೆಂಗು ಬೆಳೆಯಲಾಗುತ್ತದೆ. ಜಗತ್ತಿನ ಐದನೇ ಅತಿ ಹೆಚ್ಚು ತೆಂಗು ಬೆಳೆಯುವ ದೇಶ ಇದು. ಪರ್ವತ ಪ್ರದೇಶಗಳಲ್ಲಿ ಟೀ ಮತ್ತು ರಬ್ಬರ್ ಹಾಗೂ ಮಹಾವೇಲಿ ನದಿ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.ಇಂದ್ರನೀಲಮಣಿ, ಪುಷ್ಯರಾಗ, ಮಾಣಿಕ್ಯ ಮುಂತಾದ ಮಣಿಗಳು ಇಲ್ಲಿ ಯಥೇಚ್ಛವಾಗಿ ದೊರೆಯುತ್ತವೆ. ಜೊತೆಗೆ ಗ್ರಾಫೈಟ್ ಮತ್ತು [...]
ಜಪಾನ್
ಅನೇಕ ಸಣ್ಣ ಪುಟ್ಟ ದ್ವೀಪಗಳು ಹಾಗೂ ಮುಖ್ಯವಾದ ನಾಲ್ಕು ದ್ವೀಪಗಳಿಂದ ಕೂಡಿದ, ದ್ವೀಪ ಸಮೂಹ ರಾಷ್ಟ್ರ ಜಪಾನ್. ಈ ದೇಶದ ವಿಸ್ತೀರ್ಣ ಹೆಚ್ಚಿಲ್ಲದಿದ್ದರೂ, ಸಾಧನೆ ಕಡಿಮೆಯದ್ದಲ್ಲ.ಜಪಾನಿನಲ್ಲಿ ಶೇ.86ರಷ್ಟು ಜನ ಶಿಂಟೋ ಮತ್ತು ಬೌದ್ಧ ಧರ್ಮವನ್ನು ಅನುಸರಿಸುತ್ತಾರೆ. ಜಪಾನಿ ಜನಾಂಗವನ್ನು ಹೊರತುಪಡಿಸಿದರೆ ಇಲ್ಲಿರುವ ಇತರೆ ಜನಾಂಗದವರಾದ ಕೊರಿಯನ್ನರು, ಚೀನಿಯರು, ಜನಾಂಗಗಳು ಪ್ರಮಾಣ ಶೇಕಡಾ ಎರಡರಷ್ಟು ಮಾತ್ರ.ಅಂದಾಜಿನಂತೆ 3,77,930 ಚ.ಕಿ. ವಿಸ್ತೀರ್ಣ ಹೊಂದಿದ್ದು, ಜನಸಂಖ್ಯೆ 12.63 ಕೋಟಿ. ರಾಜಧಾನಿ ಟೋಕ್ಯೋದ ಜನಸಂಖ್ಯೆ 2015 [...]
ಚೈನಾ
ವಿಶಾಲ ಭೂ ಪ್ರದೇಶ ಮತ್ತು ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿ, ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಚೈನಾ ದೇಶಕ್ಕೆ ವರ್ತಮಾನದಷ್ಟೇ ಉಜ್ವಲ ಇತಿಹಾಸವೂ ಇದೆ. ವಿವಿಧ ಭಾಷೆ, ಜನಾಂಗಗಳಿಂದ ಕೂಡಿದೆ.ಚೈನಾದ ವಿಸ್ತೀರ್ಣ 95,96,961 ಚ.ಕಿ.ಮೀ. ಜನಸಂಖ್ಯೆ 2016ರ ಅಂದಾಜಿನಂತೆ 138,23,23,000. ಜನಸಾಂದ್ರತೆ 2016ರಲ್ಲಿ ಪ್ರತಿ ಚ.ಕಿ ಗೆ 147.2, ಈ ದೇಶದ ಕರೆನ್ಸಿ ರೆಮಿನ್ಬಿ (ಸಿಎನ್ ವೈ). ರಾಜಧಾನಿ ಬೀಜಿಂಗ್.ಮ್ಯಾಂಡರಿನ್ ಚೈನೀಸ್ ಅಧಿಕೃತ ಭಾಷೆಯಾಗಿರುವ ಈ ದೇಶದಲ್ಲಿ ಯೂ(ಕಾಂಟೋನೀಸ್), [...]
ಭೂತಾನ್
ಹಿಮಾಲಯ ಪರ್ವತ ಶ್ರೇಣಿಗಳ ಮಧ್ಯೆ ಆಧುನಿಕ ನಾಗರಿಕತೆಯಿಂದ ಒಂದು ಹೆಜ್ಜೆ ದೂರವೇ ಉಳಿದಿರುವ ದಕ್ಷಿಣ ಏಷಿಯಾದ ಪುಟ್ಟ ದೇಶ ಭೂತಾನ್. ರಾಜಪ್ರಭುತ್ವ ಹೊಂದಿರುವ ಇಲ್ಲಿ ಟಿಬೆಟನ್ ಬೌದ್ಧ ಧರ್ಮ (lamaistic Buddhism) ಅನುಸರಿಸುವ ಜನ ಹೆಚ್ಚು. ಅಂದರೆ ಇಲ್ಲಿನ ಬೌದ್ಧದರ್ಮ, ಸ್ಥಳೀಯ ಬುಡಕಟ್ಟು ಸಂಪ್ರದಾಯಗಳನ್ನೂ ಅಳವಡಿಸಿಕೊಂಡಿದೆ. ಹಿಂದುಗಳೂ ಸಹ ಶೇ,25ರಷ್ಟು ಸಂಖ್ಯೆಯಲ್ಲಿದ್ದಾರೆ.ಜಗತ್ತಿನಲ್ಲಿಯೇ ಅತಿ ಹೆಚ್ಚು ಜನ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವ ದೇಶ ಎನ್ನುವುದು ಭೂತಾನ್ ವಿಶೇಷತೆ. ಕೇವಲ ಶೇ.6ರಷ್ಟು [...]
ಆಫ್ಘಾನಿಸ್ತಾನ
ಹೆಚ್ಚಾಗಿ ಪರ್ವತ ಪ್ರದೇಶಗಳು ಮತ್ತು ಒಣಭೂಮಿಯನ್ನೇ ಹೊಂದಿರುವ ಆಫ್ಘಾನಿಸ್ತಾನ, ಅನೇಕ ಕಾರಣಗಳಿಂದ ಸದಾ ಸುದ್ದಿಯಲ್ಲಿದೆ.ದಕ್ಷಿಣ ಏಷಿಯಾದ ಈ ದೇಶ, ಪಾಕಿಸ್ತಾನ, ಇರಾನ್, ತುರ್ಕ್ ಮೆನಿಸ್ತಾನ್, ಉಜ್ಬೇಕಿಸ್ತಾನ್, ತಜಕಿಸ್ತಾನ್ ಮತ್ತು ಚೈನಾ ದೇಶಗಳ ಗಡಿಗೆ ಹೊಂದಿಕೊಂಡಿದೆ. 6,52,864 ಚ.ಕೀ.ವೀಸ್ತೀರ್ಣ ಹೊಂದಿದ್ದು, 2016ರಲ್ಲಿ ಅಂದಾಜು ಜನಸಂಖ್ಯೆ 3 ಕೋಟಿ 33 ಲಕ್ಷ ಮಾತ್ರ. ರಾಜಧಾನಿ ಕಾಬೂಲ್ ನಗರದ ಅಂದಾಜು ಜನಸಂಖ್ಯೆ 2015ರಲ್ಲಿ 46ಸಾವಿರ. ದೇಶದ ಉತ್ತರ ಮತ್ತು ನೈರುತ್ಯ ದಿಕ್ಕಿನಲ್ಲಿ ಬಯಲು ಪ್ರದೇಶವನ್ನು ಹೊಂದಿದ್ದು, [...]
ರಷ್ಯನ್ ಫೆಡರೇಷನ್
ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ವಿಸ್ತೀರ್ಣದ ಭೂಪ್ರದೇಶ ಹೊಂದಿದ್ದು, ಅದಕ್ಕೆ ಹೋಲಿಸಿದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ, ಜೊತೆಗೆ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಅಗ್ರಣಿಯಾಗಿದ್ದು, ಸಾಟಿಯಿಲ್ಲದ ತಾಂತ್ರಿಕತೆ ಮತ್ತು ಅಪಾರ ಮಿಲಿಟರಿ ಶಕ್ತಿಯಿಂದ ಬಲಾಢ್ಯ ಎನ್ನಿಸಿಕೊಂಡಿರುವ ದೇಶ ರಷ್ಯನ್ ಫೆಡರೇಷನ್ (Russian Federation). ಎರಡು ಶಕ್ತಿಕೇಂದ್ರಗಳನ್ನು ಹೊಂದಿರುವ ಈ ಜಗತ್ತಿನಲ್ಲಿ ಅಮೇರಿಕ ಒಂದು ಕೇಂದ್ರವಾಗಿದ್ದರೆ, ಮತ್ತೊಂದು ಕೇಂದ್ರ ರಷ್ಯಾ.ಪೂರ್ವ ಯೂರೋಪಿನ ಈ ದೇಶದ ವಿಸ್ತೀರ್ಣ 1,70,98,246 ಚ.ಕಿ.ಮೀ. ಇಷ್ಟೊಂದು ವಿಶಾಲ ಭೂಪ್ರದೇಶಕ್ಕೆ ಹೋಲಿಸಿದಲ್ಲಿ [...]