Loading Events

« All Events

  • This event has passed.

ಅಂಕಲ್‌ ಶ್ಯಾಂ

August 4, 2023

೪.೮.೧೯೪೩ ರಂಗಭೂಮಿಯ ಸಂಘಟನಾ ಕಾರ್ಯದಲ್ಲಿ ಯಶಸ್ವಿ ರಂಗಕರ್ಮಿ ಎನಿಸಿರುವ ಎಂ.ಎಸ್‌. ಶಾಮಸುಂದರ್ ಹುಟ್ಟಿದ್ದು ಮೈಸೂರು. ತಂದೆ ಶಂಕರಪ್ಪ, ತಾಯಿ ಸುಬ್ಬಮ್ಮ. ಬಿ.ಕಾಂ. ಪದವಿಯ ನಂತರ ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ. ಹವ್ಯಾಸಕ್ಕಾಗಿ ತೊಡಗಿಸಿಕೊಂಡಿದ್ದು ರಂಗಭೂಮಿ ಕಾರ್ಯಕಲಾಪಗಳಲ್ಲಿ, ಮಂಡ್ಯದ ಕೃಷಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಾಟಕದ ಬಗ್ಗೆ ಆಸಕ್ತಿ ಮೂಡಿಸಿ ಪ್ರದರ್ಶಿಸಿದ ಹಲವಾರು ನಾಟಕಗಳು. ಎಪ್ಪತ್ತರ ದಶಕದ ನಾಟಕಗಳ ಸುವರ್ಣ ಸಮಯದಲ್ಲಿ ವಿಭಿನ್ನ ರೀತಿಯ ಪ್ರಯೋಗಗಳಿಂದ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಮಂಜು, ನಾಗರಾಜ್‌, ಪುರುಷೋತ್ತಮ್‌, ಗುರುಪ್ರಸಾದ್‌, ಜಗದೀಶ್‌, ರಮೇಶ್‌ರಾವ್‌ ಮುಂತಾದವರೊಡನೆ ೧೯೮೦ ರಲ್ಲಿ ಕಟ್ಟಿದ್ದು ಅಂತರಂಗ. ಇಂದಿಗೂ ಅದರ ಕಾರ್ಯದರ್ಶಿ ಜವಾಬ್ದಾರಿ. ನಾಟಕೋತ್ಸವ, ಸಂಘಟನಾಉತ್ಸವ, ರಂಗ ಸುಗ್ಗಿ, ಮಹಾ ಯಾತ್ರೆ, ರಜತ ಪ್ರದರ್ಶನ ಮುಂತಾದ ಕಾರ್ಯಕ್ರಮಗಳ ರೂವಾರಿ. ಮಕ್ಕಳಿಗಾಗಿ ಆಯೋಜಿಸಿದ ರಂಗ ಶಿಬಿರಗಳು, ಮಕ್ಕಳ ನಾಟಕಗಳ ಪ್ರದರ್ಶನ. ರಾಜ್ಯಾದ್ಯಾಂತ ಪ್ರದರ್ಶಿಸಿದ ನಾಟಕಗಳು. ಹೊರರಾಜ್ಯದಲ್ಲೂ ನಾಟಕ ಪ್ರದರ್ಶನ. ‘ಅಂತರಂಗ’ ಪ್ರದರ್ಶಿಸಿದ ನಾಟಕಗಳು. ಮಹಾಯಾತ್ರೆ, ಸಾಕ್ಷಿ, ಬೇಟೆ, ಸಮಯ ಸಾಧಕರು, ಕಾಲ, ಹುತ್ತದಲ್ಲಿ ಹುತ್ತ, ಹಾವಿಲ್ಲದ ಹುತ್ತ, ಮೌಲ್ಯಗಳು ಪ್ರಮುಖವಾದುವು. ಮೇಕಪ್‌ ನಾಣಿಯವರ ಆಶಯದಂತೆ ಪ್ರಾರಂಭಿಸಿದ ಹಾಸ್ಯಮೇಳ. ೧೯೯೭ ರಲ್ಲಿ ಹಾಸ್ಯ ಬರಹಗಾರ ರಾಮ್ಸ್ ಮಿಗೆ ಸನ್ಮಾನ. ೨೦೦೨ ರಿಂದ, ೨ ದಿನದ ಹಾಸ್ಯ ಕಾರ್ಯಕ್ರಮ, ಹಾಸ್ಯ ಭಾಷಣ, ನಾಟಕ ಪ್ರೇಕ್ಷಕರಿಗೆ ನೀಡುತ್ತಿರುವ ರಸದೌತಣ. ಸಮಯ ಸಾಧಕರು, ಅಕ್ಕರೆ, ಜ್ವಾಲೆ, ಗೋರಿಗಳ ನಡುವೆ, ಅಪ್ಪನ ಅವಾಂತರ (ಕಿರುಪ್ರಹಸನ), ಸ್ವತಃ ರಚಿಸಿದ ನಾಟಕಗಳು. ಬಾವಿ ನಾಟಕದಲ್ಲಿ ನಟರು ಗೈರು ಹಾಜರಾದಾಗ ಬೇರೆ ಬೇರೆ ಪ್ರದರ್ಶನಗಳಲ್ಲಿ ೮ ಪಾತ್ರಗಳನ್ನು ನಿರ್ವಹಿಸಿದ ಖ್ಯಾತಿ. ಕ್ರಿಯಾಶೀಲ ರಂಗಕರ್ಮಿಗೆ ಯಲಹಂಕಾ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಕನ್ನಡ ಸಂ ಪ್ರಶಸ್ತಿ’, ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ, ೨೦೦೨ ರಲ್ಲಿ ಕರ್ನಾಟಕ ನಾಟಕ ಅಕಾಡಮಿಯಿಂದ ಸಂದ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು: ಪಿ. ಸೀತಾರಾಮರಾಯರು – ೧೯೧೫ ಸರಸ್ವತಿ. ಬಿ. ಬೆಂಗಳೂರು -೧೯೪೯

* * *

Details

Date:
August 4, 2023
Event Category: