ಅಖಂಡೇಶ್ವರ ಎಂ. ಪತ್ತಾರ

Home/Birthday/ಅಖಂಡೇಶ್ವರ ಎಂ. ಪತ್ತಾರ
Loading Events
This event has passed.

೧೩.೦೫.೧೯೬೫ ಗ್ವಾಲಿಯರ್‌ ಘರಾನ ಪದ್ಧತಿಯ ಹಿಂದೂಸ್ಥಾನಿ ಸಂಗೀತದಲ್ಲಿ ಪ್ರತಿಭಾವಂತ ಕಲಾವಿದರೆನಿಸಿರುವ ಅಖಂಡೇಶ್ವರ ಪತ್ತಾರರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಡವಾಲ ಕಲ್ಲಾಪುರ. ತಂದೆ ಮಲ್ಲೇಶಪ್ಪ, ತಾಯಿ ಯಮುನಾಬಾಯಿ. ಸಂಗೀತ ಶಿಕ್ಷಣದಲ್ಲಿ ಬಿ.ಎ. ಮತ್ತು ಗಾಯನ ವಿದ್ವತ್ (ಎಂ.ಎ.) ಪದವಿ. ತಂದೆಯವರಲ್ಲಿಯೇ ಮೊದಲ ಸಂಗೀತದ ಪಾಠ. ನಂತರ ಪಂ. ಪುಟ್ಟರಾಜ ಗವಾಯಿಗಳಲ್ಲಿ ಗಾಯನ, ಹಾರ‍್ಮೋನಿಯಂ ಮತ್ತು ತಬಲ ವಾದನಗಳಲ್ಲಿ ಪಡೆದ ಉನ್ನತ ಶಿಕ್ಷಣ. ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗಿ. ಪಟ್ಟದಕಲ್ಲು ನವರಸ ಪುರ ಚಾಲುಕ್ಯ ಸಾಮ್ರಾಜ್ಯೋತ್ಸವ, ದಸರಾ ಯುವ ಸಂಗೀತೋತ್ಸವ, ಮುಧೋಳದಲ್ಲಿ ನಡೆದ ೬೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಸಂಗೀತ ನೃತ್ಯ ಅಕಾಡಮಿ ಸಂಯೋಜಿಸಿದ್ದ ಸಂಗೀತೋತ್ಸವಗಳಲ್ಲಿ ಪಾತ್ರ. ಇದಲ್ಲದೆ ಗದಗ, ಗುಲಬರ್ಗಾ, ಧಾರವಾಡ, ಬೆಳಗಾವಿ, ಗುಳೇದಗುಡ್ಡ, ಮಹಾಲಿಂಗಪುರ, ತಾಳೀಕೋಟೆ, ಇಳಕಲ್ಲು ಚಿತ್ರದುರ್ಗ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ಹಲವಾರು ಕಾರ್ಯಕ್ರಮಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ. ಗುಳೇದ ಗುಡ್ಡದಲ್ಲಿ ಸಂಗೀತೋತ್ಸವ, ದೆಹಲಿಯ ಎಚ್.ಆರ್‌.ಡಿ. ಯೋಜನೆಯಡಿ ಗ್ರಾಮೀಣ ಅಭ್ಯರ್ಥಿಗಳಿಗೆ ಸಂಗೀತ ತರಬೇತಿ ಶಿಬಿರ, ಪ್ರವಾಸೋದ್ಯಮ ಮತ್ತು ಸಂಸ್ಕೃತ ಇಲಾಖೆಯ ಸಚಿವಾಲಯದ ಆಶ್ರಯದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ಸಂಗೀತ ತರಬೇತಿ ಶಿಬಿರ. ಅಮೀನಗಡ ಸಂಗಮೇಶ ಪದವಿ ಪೂರ್ವ ಕಾಲೇಜಿನ ಶಿಬಿರದಲ್ಲಿ ಗೌರವ ಸಂಗೀತ ಉಪನ್ಯಾಸಕರಾಗಿ, ಬಾಗಲಕೋಟೆ ಬಸವೇಶ್ವರ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಗೌರವ ಸಂಗೀತ ಶಿಕ್ಷಕರಾಗಿ ಸಲ್ಲಿಸಿದ ಸೇವೆ. ಸಂದ ಪ್ರಶಸ್ತಿ ಗೌರವಗಳು ಹಲವಾರು. ಗದುಗಿನ ವೀರೇಶ್ವರ ಪುಣ್ಯಾಶ್ರಮ, ಗುಳೇದ ಗುಡ್ಡದ ಚಂದ್ರಶೇಖರ ಶಿವಾಚಾರ್ಯಮಹಾಸ್ವಾಮಿಗಳಿಂದ, ಶರಣ ಸಂಗಮ ಸಮಾರಂಭದಲ್ಲಿ ಗಾನ ಭೂಷಣ, ಸಂಗೀತ ಸಾಹಿತ್ಯ ಕಲಾ ಚತುರ ಬಿರುದು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಸಂಗೀತ ವಿದ್ವಾನ್, ಮೈಸೂರು ದಸರಾ ಯುವ ಸಂಗೀತೋತ್ಸವ ಪ್ರಶಸ್ತಿ, ತಾಲ್ಲೂಕುಮಟ್ಟದ ಆದರ್ಶ ಸಂಗೀತ ಶಿಕ್ಷಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು ಗೊರೂರು ಅನಂತರಾಜು – ೧೯೬೧ ಹುಮಾಯೂನ್ ಎಂ. ಹರಲಾಪುರ – ೧೯೬೩ ರೇಣುಕಾಬಾಲಿ ಉದಯ ಕುಮಾರ್‌ – ೧೯೬೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top