ಅನು ಪಾವಂಜೆ

Home/Birthday/ಅನು ಪಾವಂಜೆ
Loading Events
This event has passed.

೧೯.೦೨.೧೯೭೧ ತೈಲವರ್ಣ, ಜಲವರ್ಣ, ಬೆಳಕು-ನೆರಳು ಚಿತ್ರಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಅನು ಪಾವಂಜೆಯವರು ಹುಟ್ಟಿದ್ದು ಮಂಗಳೂರು. ತಂದೆ ಪಾವಂಜೆ ಕೃಷ್ಣಮೂರ್ತಿ, ತಾಯಿ ಶಾರದ. ಸಾಮಾನ್ಯ ವಿದ್ಯಾಭ್ಯಾಸ ಬಿ.ಎ. ಪದವಿ. ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಬೆಳೆದ ವಿಶೇಷ ಒಲವು. ಕೇರಳದ ರಾಜಾ ರವಿವರ್ಮನ ಸ್ನೇಹಿತರೇ ಇವರ ಅಜ್ಜ ಗೋಪಾಲಕೃಷ್ಣಯ್ಯ. ನಾಲ್ಕು ತಲೆಮಾರಿನಿಂದಲೂ, ವಂಶ ಪಾರಂಪರ್ಯವಾಗಿ ಹರಿದುಬಂದ ಚಿತ್ರಕಲಾ ಪರಿಣತಿ. ಚಿತ್ರಕಲೆಯಲ್ಲಿ ಪ್ರಾವೀಣ್ಯತೆ ಸಾಧಿಸಿದ್ದು ಚಿಕ್ಕಪ್ಪ ಎಂ.ಆರ್. ಪಾವಂಜೆಯವರಿಂದ. ರೇಖಾಚಿತ್ರ, ವರ್ಣಚಿತ್ರ, ತೈಲವರ್ಣ, ಪೆನ್ಸಿಲ್ ಗೆರೆಯ ಚಿತ್ರಗಳು ಮುಂತಾದ ಎಲ್ಲ ಪ್ರಕಾರಗಳಲ್ಲಿಯೂ ತೋರಿದ ಸಾಧನೆ. ಕೇಂದ್ರೀಕರಿಸಿ ಸಾಧಿಸಿದ್ದು ಕಪ್ಪು ಬಿಳುಪು ಮತ್ತು ವರ್ಣಕಲೆಯ ಪ್ರಾವೀಣ್ಯತೆ. ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಗೆ ಒತ್ತುಕೊಟ್ಟು ಕಲಿತು ವಿವೇಚನಾಶೀಲ ಬಣ್ಣದ, ಚಿನ್ನದ ಕುಸುರಿ ಕೆಲಸದಲ್ಲಿ ಸಾಧಿಸಿ ತೋರಿಸಿದ ಅಗಾಧ ಪ್ರತಿಭೆ. ಏರ್ಪಡಿಸಿದ ಹಲವಾರು ಏಕವ್ಯಕ್ತಿ ಪ್ರದರ್ಶನಗಳು. ಕರ್ನಾಟಕ ಲಲಿತಕಲಾ ಅಕಾಡಮಿ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಏರ್ಪಡಿಸಿದ ರಾಷ್ಟ್ರಮಟ್ಟದ ಕಲಾಪ್ರದರ್ಶನಗಳು ಮುಖ್ಯವಾದುವುಗಳು. ಸಾಂಘಿಕ ಪ್ರದರ್ಶನಗಳಾದ ಬೆಳಗಾಂ, ಮಂಗಳೂರು, ಬೆಂಗಳೂರಿನ ರಾಷ್ಟ್ರೀಯ ಕಲಾಮೇಳ, ವೆಂಕಟಪ್ಪ ಆರ್ಟ್ ಗ್ಯಾಲರಿ, ಚಿತ್ರಸಂತೆ, ಉಡುಪಿ, ಮೈಸೂರು, ಮಂಗಳೂರಿನಲ್ಲಿ ಗಣೇಶನ ಗಣ-ರೂಪ ಪ್ರದರ್ಶನ, ಮುಂಬಯಿಯ ಮಾನ್‌ಸೂನ್ ಮೇಳ ಮುಂತಾದುವುಗಳಲ್ಲಿ ಭಾಗಿ. ಹಲವಾರು ಕಲಾ ಶಿಬಿರಗಳಲ್ಲಿ ವಹಿಸಿದ ಪ್ರಮುಖ ಪಾತ್ರ. ಹುಬ್ಬಳ್ಳಿಯಲ್ಲಿ ನಡೆದ ಕಲಾಮೇಳದಲ್ಲಿ ವಿಶೇಷ ಬಹುಮಾನ, ಮಂಗಳೂರಿನ ಜಾಯ್ಸಿ ಕ್ಲಬ್‌ನಿಂದ ವಿಶೇಷ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಇವರು ರಚಿಸಿದ ಮದರ್ ತೆರೆಸಾ, ಅಬ್ದುಲ್ ಕಲಾಂ ಆಜಾದ್ ಚಿತ್ರಗಳು ಮಂಗಳೂರಿನಲ್ಲಿ, ಗಣೇಶನ ಚಿತ್ರ ನೇಪಾಳದ ರಾಜ ಬೀರೇಂದ್ರರಲ್ಲಿ, ಮುದ್ಗಲ ಪುರಾಣ ಆಧಾರಿತ ೩೨ ಗಣೇಶನ ಚಿತ್ರಗಳು ಅಮೆರಿಕದ ಸುನಂದಾ ಜೈನ್ ಮುಂತಾದವರ ಪ್ರಮುಖ ಸಂಗ್ರಹಾಲಯಗಳಲ್ಲಿವೆ.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top