ಅಶೋಕ ಬಾದರ ದಿನ್ನಿ

Home/Birthday/ಅಶೋಕ ಬಾದರ ದಿನ್ನಿ
Loading Events
This event has passed.

೬.೨.೧೯೫೧ ರಂಗಭೂಮಿಯ ಪ್ರಯೋಗಶೀಲ ನಾಟಕಗಳಿಗೆ ಹೊಸ ಆಯಾಮ ನೀಡಿದ ಅಶೋಕ ಬಾದರ ದಿನ್ನಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಅಚನೂರು. ತಂದೆ ರುದ್ರಗೌಡ ಬಾದರ ದಿನ್ನಿ, ತಾಯಿ ಗೌರಮ್ಮ. ಓದಿನ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಅಭಿನಯದ ಬಗ್ಗೆ ಮೂಡಿದ ಒಲವು. ಎಸ್.ಎಸ್.ಎಲ್.ಸಿ.ಯಲ್ಲಿ ಪಡೆದದ್ದು ೬ನೇ ರ್ಯಾಂಕ್. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಪದವಿ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪಡೆದ ಡಿಪ್ಲೊಮ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಗಳ ಮೇಲೆ ಪಡೆದ ಪ್ರಭುತ್ವ. ದೆಹಲಿಯಲ್ಲಿದ್ದಾಗಲೇ ಎನ್.ಎಸ್.ಡಿ.ಗಾಗಿ ಪ್ರಯೋಗಿಸಿದ ನಾಟಕಗಳಲ್ಲಿ ಅಲೋಕ್‌ನಾಥ್, ಅನುಪಮ ಖೇರ್, ಓಂಪುರಿ, ನಾಸಿರುದ್ದೀನ್ ಷಾ, ನೀನಾಗುಪ್ತ, ಮುಂತಾದವರೊಡನೆ ಅಭಿನಯ. ಇನ್ನೂರಕ್ಕೂ ಹೆಚ್ಚು ನಾಟಕಗಳ ನಿರ್ದೇಶನ. ಹಲವಾರು ಹವ್ಯಾಸಿ ರಂಗತರಬೇತಿ ಶಿಬಿರಗಳಲ್ಲಿ ವಹಿಸಿದ ಪ್ರಮುಖ ಪಾತ್ರ. ಪ್ರಖ್ಯಾತ ರಂಗಸಂಸ್ಥೆಗಳಿಗಾಗಿ ನಿರ್ದೇಶಕನಾಗಿ ಹೊತ್ತ ಹೊಣೆ. ಬೆನಕ, ರಂಗಸಂಪದ, ನಟರಂಗ, ಕಲಾಮಾಧ್ಯಮ, ಗೆಳೆಯರ ಬಳಗ, ಪ್ರತಿಮಾ ಸಭಾ, ಅಭಿನಯ, ತರಳ ಬಾಳು ಕಲಾ ಸಂಘ, ಬಾಪೂ ಕಲಾ ಲೋಕ, ಮುಂತಾದ ಸಂಸ್ಥೆಗಳಲ್ಲಿ ನಾಟಕಗಳ ನಿರ್ದೇಶನ. ಎ.ಎಸ್. ಮೂರ್ತಿಯವರೊಡನೆ ಅಭಿನಯ ತರಂಗ ನಾಟಕ ಶಾಲೆ ಸ್ಥಾಪನೆ. ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ‘ಎಸ್.ಜೆ.ಎಂ. ಸ್ಕೂಲ್ ಆಫ್ ಡ್ರಾಮಾ’ ಸ್ಥಾಪನೆ. ಕೇಂದ್ರೀಕೃತ ನಗರಗಳ ರಂಗಭೂಮಿ ಚಟುವಟಿಕೆಗಳನ್ನು ಹಳ್ಳಿಗಳಿಗೂ ವಿಸ್ತರಿಸಿ ಪ್ರೋತ್ಸಾಹಿಸಲು “ಶಿವಸಂಚಾರ-ಸಾಣೇಹಳ್ಳಿ” ಸಂಸ್ಥೆಯಡಿ ಏಳು ವರ್ಷಗಳ ದೀರ್ಘಸೇವೆ. ಮುನ್ನೂರಕ್ಕೂ ಹೆಚ್ಚು ಟಿ.ವಿ. ಧಾರಾವಾಹಿಗಳಲ್ಲಿ, ೮೦ ಚಲನ ಚಿತ್ರಗಳಲ್ಲಿ ಅಭಿನಯ. ಎರಡು ಕನ್ನಡ ಚಲನ ಚಿತ್ರಗಳ ನಿರ್ದೇಶನ. ಕಲೆ ಮತ್ತು ರಂಗಭೂಮಿ ಸೇವೆಗಾಗಿ ವಿಶ್ವ ಕನ್ನಡ ಸಮ್ಮೇಳನ, ತರಳಬಾಳು ಬೃಹನ್ಮಠ, ಚಿತ್ರದುರ್ಗದ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠ, ಯಡೆಯೂರು ಸಿದ್ಧಲಿಂಗೇಶ್ವರ ಬೃಹನ್ಮಠ, ಮಾಲೂರು ರಾಮಕೃಷ್ಣ ಆಶ್ರಮ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಶಿವಮೊಗ್ಗೆಯಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂತಾದುವುಗಳಿಂದ ಸಂದ ಹಲವಾರು ಪ್ರಶಸ್ತಿ, ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು : ಹ.ವೇ. ಲಕ್ಷ್ಮೀ ನಾರಾಯಣ – ೧೯೨೩ ಕೃಷ್ಣಮೂರ್ತಿ ಎಸ್. – ೧೯೫೦

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top