ಅ.ನ. ರಾಮಣ್ಣ

Home/Birthday/ಅ.ನ. ರಾಮಣ್ಣ
Loading Events
This event has passed.

೦೨.೦೩.೧೯೪೦ ವೃತ್ತಿ ರಂಗಭೂಮಿಯಿಂದ ಹಿಡಿದು ಆಧುನಿಕ ನಾಟಕಗಳವರೆಗೆ ಹಲವಾರು ವಿಭಿನ್ನ ಪಾತ್ರಗಳ ಮೂಲಕ ರಂಗಭೂಮಿಗೆ ಕೊಡುಗೆ ನೀಡಿರುವ ರಾಮಣ್ಣ ಹುಟ್ಟಿದ್ದು ಮಂಡ್ಯ ಜಿಲ್ಲೆಗೆ ಸೇರಿದ ಹದಮಗೆರೆ ಗ್ರಾಮ. ತಂದೆ ನರಸಯ್ಯ, ತಾಯಿ ನರಸಮ್ಮ. ಓದಿದ್ದು ಎಸ್.ಎಸ್.ಎಲ್.ಸಿ., ಎಚ್.ಎ.ಎಲ್.ನಲ್ಲಿ ದೊರೆತ ಉದ್ಯೋಗ, ಹಳ್ಳಿಯಲ್ಲಿ ನಡೆಯುತ್ತಿದ್ದ ಬಯಲು ನಾಟಕಗಳಿಂದ ಪಡೆದ ಪ್ರೇರಣೆ. ಸ್ಕೂಲಿನಲ್ಲಿದ್ದಾಗಲೇ ಸಣ್ಣ ಪುಟ್ಟ ಪಾತ್ರದಿಂದ ನಾಟಕದತ್ತ ವಾಲಿದ ಮನಸ್ಸು. ಕೆ.ಆರ್. ನಗರದ ಸಂತೆ ಸರಗೂರು ಅನಂತರಾಯರ ಕಲಾ ಪ್ರೋತ್ಸಾಹದಿಂದ ‘ರಾಯರ ಸೊಸೆ’ ಸಾಮಾಜಿಕ ನಾಟಕದಲ್ಲಿ ವಹಿಸಿದ ಪ್ರಮುಖ ಪಾತ್ರ. ಹೆಸರಾಂತ ಹರಿಕಥಾ ವಿದ್ವಾನ್ ಗುರುರಾಜುಲುನಾಯ್ಡು, ಗವಾಯಿ ರಂಗಸ್ವಾಮಿ, ದಾಶರಥ ದೀಕ್ಷಿತ್, ಎಂ.ಎಲ್. ಶ್ರೀನಿವಾಸಮೂರ್ತಿ ಇವರುಗಳ ಜೊತೆ ಅನೇಕ ನಾಟಕಗಳಲ್ಲಿ ಪಾತ್ರಧಾರಿ. ವೃತ್ತಿ ರಂಗಭೂಮಿಯ ನಾಟಕಗಳಲ್ಲೂ ವಹಿಸಿದ ಪಾತ್ರ. ಹಾರ್ಮೋನಿಯಂ ಕೃಷ್ಣರಾಯರ ಕಾಳಿದಾಸ, ಸುಭದ್ರಾಪರಿಣಯ, ಕುರುಕ್ಷೇತ್ರ, ಶ್ರೀಕೃಷ್ಣ ಗಾರುಡಿ, ರಾಮಾಂಜನೇಯ ಯುದ್ಧ ನಾಟಕಗಳಲ್ಲದೆ ಸಾಮಾಜಿಕ ನಾಟಕಗಳಾದ ದೇವದಾಸಿ, ಮಕ್ಮಲ್ ಟೋಪಿ, ಸಂಸಾರ ನೌಕೆ, ಎಚ್ಚಮನಾಯಕ, ಸಿಡಿಲಮರಿ, ಅಳಿಯದೇವರು, ಸದಾರಮೆ, ದಿವ್ಯದರ್ಶನ, ಪಂಚಭೂತ, ಮೀನಿನ ಹೆಚ್ಚೆ ನಾಟಕಗಳಲ್ಲೂ ಪ್ರಮುಖ ಪಾತ್ರ. ಹಿರಣ್ಣಯ್ಯ ಮಿತ್ರಮಂಡಲಿಯ ಭಕ್ತ ಕಬೀರ ಇವರಿಗೆ ಮಾನ್ಯತೆ ತಂದುಕೊಟ್ಟ ನಾಟಕ. ಜಿ.ವಿ. ಶಿವಾನಂದರ ನಿರ್ದೇಶನದ ಭಗವದಜ್ಜುಕೀಯ, ೩೬ ಅಲ್ಲ ೬೩, ಕಾಕೋಳು ಸರೋಜರಾವ್‌ರವರ ರಮಾರಮಣ, ಶಾಮಣ್ಣನ ಚಿರೋಟಿ ನಾಟಕಗಳು. ಮಲ್ಲೇಶ್ವರ ಸೇವಾಶ್ರಮದ ಮಕ್ಕಳಿಗಾಗಿ ಕೃಷ್ಣ ಪಾರಿಜಾತ, ರಾಮಾಂಜನೇಯ ಯುದ್ಧ, ಕೃಷ್ಣಗಾರುಡಿ ನಿರ್ದೇಶಿಸಿದ ನಾಟಕಗಳು. ಮುಸುರಿ ಕೃಷ್ಣಮೂರ್ತಿ, ನರಸಿಂಹರಾಜು, ಬಾಲಕೃಷ್ಣ, ಉದಯಕುಮಾರ್, ಕಲ್ಯಾಣಕುಮಾರ್ ನಾಟಕಗಳಲ್ಲಿ ಖಾಯಂ ನಟ. ಸುಭದ್ರಾಪರಿಣಯದ ಅರ್ಜುನನ ಪಾತ್ರಕ್ಕೆ ದೊರೆತ ನಟರತ್ನಾಕರ ಬಿರುದು. ೨೦೦೫ರಲ್ಲಿ ಶಾಸಕರ ದಿನಾಚರಣೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕರಿಗಷ್ಟೇ ಸೀಮಿತವಾಗಿದ್ದರೂ ವಾಟಾಳರ ಅಪೇಕ್ಷೆಯಂತೆ ಸಂಭಾಷಣೆಯಿಲ್ಲದೆ ನಟನೆಯಿಂದಲೇ ಎಲ್ಲರ ಗಮನ ಸೆಳೆದದ್ದು ವಿಶೇಷವಾಗಿತ್ತು.   ಇದೇ ದಿನ ಹುಟ್ಟಿದ ಕಲಾವಿದರು : ಮೇಲಗಿರಿಗೌಡ ನಿಂಗನಗೌಡ ಪಾಟೀಲ – ೧೯೧೬ ಕೆ.ಜೆ. ವೆಂಕಟಾಚಾರ್ – ೧೯೩೯ ತುಮಕೂರು ಲಕ್ಷ್ಮಣದಾಸ್ – ೧೯೪೬ ಆರ್.ಎ. ರಮಾಮಣಿ – ೧೯೫೦ ವಿ. ನಳಿನಿ – ೧೯೬೩

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top