ಆನಂದಕಂದ

Home/Birthday/ಆನಂದಕಂದ
Loading Events
This event has passed.

೧೬-೪-೧೯೦೦ ೩೦-೧೦-೧೯೮೨ ಸಂಪಾದನೆ, ಸಂಶೋಧನೆಯಲ್ಲಿ ಶ್ರೇಷ್ಠರೆನಿಸಿದ ಆನಂದಕಂದರ ನಿಜನಾಮ ಬೆಟಗೇರಿ ಕೃಷ್ಣಶರ್ಮ. ಇವರು ಹುಟ್ಟಿದ್ದು ಗೋಕಾಕ ತಾಲ್ಲೂಕಿನ ಬೆಟಗೇರಿ. ತಂದೆ ಶ್ರೀನಿವಾಸರಾವ್, ತಾಯಿ ರಾಧಾಬಾಯಿ. ಪ್ರಾರಂಭಿಕ ಶಿಕ್ಷಣ ಬೆಟಗೇರಿಯಲ್ಲೇ. ಮುಲ್ಕಿ ಪರೀಕ ಪಾಸು ಮಾಡಿದ ನಂತರ ಪುಣೇಕರ ನರಸಿಂಹಾಚಾರ‍್ಯರಲ್ಲಿ ಶಿಷ್ಯತ್ವ. ೧೯೨೬ರಲ್ಲಿ ಬೆಂಗಳೂರಿನ ಆರ್ಯ ವಿದ್ಯಾಶಾಲೆಯ ಶಿಕ್ಷಕ ವೃತ್ತಿಯ ಹೊಣೆ. ಪುನಃ ಧಾರವಾಡಕ್ಕೆ ಹೋಗಿ ಗೆಳೆಯರ ಗುಂಪಿನ ಸಂಘಟನೆ. ಮನೋಹರ ಗ್ರಂಥಮಾಲೆಯ  ಪ್ರಾರಂಭಕ್ಕೆ  ಕಾರಣೀಭೂತರು. ೧೯೩೮ರಲ್ಲಿ ‘ಜಯಂತಿ’ ಪತ್ರಿಕೆ ಪ್ರಾರಂಭ. ಹಲವಾರು ಲೇಖಕರನ್ನು ಹುರಿದುಂಬಿಸಿ ಪತ್ರಿಕೆಗೆ ಬರೆಸಿದರು. ನೂರಾರು ಲೇಖಕರನ್ನು ಪತ್ರಿಕೆಯ ಮೂಲಕ ಪರಿಚಯಿಸಿದರು. ಸುಮಾರು ೨೦ ವರ್ಷ ಕಾಲ ಜಯಂತಿ ಪತ್ರಿಕೆಯ ಸಂಪಾದಕತ್ವದ ಹೊಣೆ. ಕೆಲ ಕಾಲ ಕರ್ನಾಟಕ ವಿಶ್ವವಿದ್ಯಾಲಯದ (ಧಾರವಾಡ) ಕನ್ನಡ ಅಧ್ಯಯನ ಪೀಠದಲ್ಲಿ  ಪ್ರಧಾನ ಸಂಶೋಧಕರ ಕಾರ‍್ಯ. ೧೯೩೩ರಲ್ಲಿ ಮೊಟ್ಟಮೊದಲ ಕಾದಂಬರಿ ‘ಸುದರ್ಶನ’ ಪ್ರಕಟ. ಮನೋಹರ ಗ್ರಂಥಮಾಲೆಯ ಪ್ರಥಮ ಕೃತಿ ಎಂಬ ಹೆಗ್ಗಳಿಕೆ. ಅಶಾಂತಿಪರ್ವ, ಮಗಳ ಮದುವೆ, ಮಲ್ಲಿಕಾರ್ಜುನ, ರಾಜಯೋಗಿ, ರಾಜಶೇಖರ ಮುಂತಾದ ಕಾದಂಬರಿಗಳು. ಪಂಚಗಂಗಾ, ಬೆಂದ ಹೃದಯ, ಬೆಳವಡಿ ಮಲ್ಲಮ್ಮ, ಮುಂಡರಗಿ ಗಂಡುಗಲಿ ಮೊದಲಾದ ನಾಟಕಗಳು. ಕರ್ನಾಟಕ ಜನಜೀವನ, ನಮ್ಮ ಸಂಸ್ಕೃತಿ ಪರಂಪರೆ, ಸಾಹಿತ್ಯವು ಸಾಗಿರುವ ದಾರಿ, ಸಾಹಿತ್ಯ ವಿಹಾರ ಮುಂತಾದ ವಿಮರ್ಶೆ, ಸಂಶೋಧನ ಕೃತಿಗಳು. ಕನ್ನಡ ಜನಪದ ಸಾಹಿತ್ಯ, ಬೀಸು ಕಲ್ಲಿನ ಹಾಡುಗಳು ಮೊದಲಾದ ಜನಪದ ಕೃತಿಗಳು. ಅಕ್ರೂರ ಚರಿತ್ರೆ, ಕನಕದಾಸರ ಭಕ್ತಿ ಗೀತೆಗಳು, ಹರಿಭಕ್ತಿ ಸಾಧನೆ, ಪೂಜಾತತ್ತ್ವ, ಆರ್ತಭಾವ, ಲೋಕನೀತಿ ಮುಂತಾದ ಸಂಪಾದಿತ ಕೃತಿಗಳು. ಚಂದ್ರಹಾಸ, ಬಸವಣ್ಣ, ಲವಕುಶ, ಭೀಷ್ಮ ಮೊದಲಾದ ಮಕ್ಕಳ ಸಾಹಿತ್ಯ ರಚನೆ. ಸಂದ ಪ್ರಶಸ್ತಿ ಗೌರವಗಳು-ಜಮಖಂಡಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ  ಅಧ್ಯಕ್ಷತೆ, ಕನ್ನಡದ ಸಣ್ಣಕಥೆಗಳ ಸಮ್ಮೇಳನದ ಅಧ್ಯಕ್ಷತೆ, ಮುಂಬೈ ಸರಕಾರದಿಂದ ‘ಮಗಳ ಮದುವೆ’ ಕಾದಂಬರಿಗೆ ಬಹುಮಾನ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ನಾಗಮಂಗಲದಲ್ಲಿ ೧೯೭೧ರಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ. ಅಖಿಲ ಕರ್ನಾಟಕ ವೈದ್ಯಕೀಯ ಸಮ್ಮೇಳನದ ಅಧ್ಯಕ್ಷತೆ, ಧರ‍್ಮಸ್ಥಳದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ-ಸನ್ಮಾನ. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್.   ಇದೇ ದಿನ ಹುಟ್ಟಿದ ಸಾಹಿತಿಗಳು : ಸದಾಶಿವ ಮೂರ್ತಿ – ೧೯೩೪ ಅನಸೂಯಾದೇವಿ – ೧೯೪೧ ಡಾ. ಓಂಪ್ರಕಾಶ್ – ೧೯೪೩ ರಾಘವೇಂದ್ರ ಪಾಟೀಲ – ೧೯೫೧ ಎಂ.ಆರ್. ಜಯಶ್ರೀ – ೧೯೫೨ ಟಿ.ಎಸ್. ನಾಗರಾಜಶೆಟ್ಟಿ – ೧೯೫೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top