ಆರ್‌.ಕೆ. ನಾರಾಯಣಸ್ವಾಮಿ

Home/Birthday/ಆರ್‌.ಕೆ. ನಾರಾಯಣಸ್ವಾಮಿ
Loading Events
This event has passed.

..೧೯೧೪ ..೨೦೦೫ ಕರ್ನಾಟಕ ಸಂಗೀತಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರುದ್ರಪಟ್ಟಣ ಇವರು ಹುಟ್ಟಿದ ಸ್ಥಳ. ತಂದೆ ಕೃಷ್ಣ ಶಾಸ್ತ್ರಿಗಳು ತಾಯಿ ಸರಸಮ್ಮ. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಉದ್ದಾಮ ಪಂಡಿತರಷ್ಟೇ ಅಲ್ಲದೆ ಹಾಡುಗಾರಿಕೆ ಮತ್ತು ಪಿಟೀಲು ವಾದನದಲ್ಲೂ ನಿಪುಣರು. ಸಂಗೀತ ಇವರ ಮನೆತನಕ್ಕೆ ಬಂದ ಬಳುವಳಿ. ಐದನೆಯ ವಯಸ್ಸಿನಿಂದಲೇ ತಂದೆಯವರಿಂದಲೇ ಸಂಗೀತ ಪಾಠ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರಾಗಿ ಬಂದು ಸೇರಿದ್ದು ಮೈಸೂರು. ಓದಿದ್ದು ಇಂಟರ್‌ಮೀಡಿಯೇಟ್‌ವರೆಗೆ. ಸಂಗೀತದಲ್ಲಿ ಹೆಚ್ಚಿನ ತರಬೇತಿಗಾಗಿ ತೆರಳಿದ್ದು ಮದರಾಸಿಗೆ. ಸಂಗೀತ ವಿದ್ವಾಂಸರಾಗಿದ್ದ ಮುಸರಿ ಸುಬ್ರಹ್ಮಣ್ಯಂ ಅಯ್ಯರ್‌ ರವರಲ್ಲಿ ಸಂಗೀತಾಭ್ಯಾಸ. ತ್ಯಾಗರಾಜ ಪರಂಪರೆಯ ಸಂಪ್ರದಾಯ ಬದ್ಧ ಸಂಗೀತದ ಕಲಿಕೆ. ೧೯೪೫ ರಲ್ಲಿ ಮೈಸೂರಿಗೆ ಹಿಂದಿರುಗಿ ಉದ್ಯೋಗಕ್ಕೆ ಸೇರಿದ್ದು ಪ್ರಾಕ್ತತಶಾಸ್ತ್ರ, ಇಲಾಖೆ (DEPARTMENT OF ARCHAELOGY). ಗುರುಗಳ ರೀತಿಯ ಹಾಡುಗಾರಿಕೆ ರೂಢಿಗತ. ಅವಧಾನ ತಾಳಕಲೆಯ ಕರತಲಾಮಲಕ (ಎರಡು ಕೈಯಲ್ಲೂ ವಿವಿಧ ತಾಳ ಹಾಕುತ್ತಾ ಹಾಡುವ ಕಲೆ). ಚಿಕ್ಕ ವಯಸ್ಸಿನಿಂದಲೇ ನಡೆಸಿಕೊಟ್ಟ ಸಂಗೀತ ಕಚೇರಿಗಳು. ಬಿಡಾರಂ ಕೃಷ್ಣಪ್ಪ ರಾಮಮಂದಿರದಲ್ಲಿ ಸಿ.ವಿ.ರಾಮನ್ ಉದ್ಘಾಟಿಸಿದ ಪ್ರಥಮ ಸಂಗೀತ ಸಮ್ಮೇಳನದಲ್ಲಿ ಹಾಡುಗಾರಿಕೆ ಪಿಟೀಲು ಚೌಡಯ್ಯನವರಿಂದ ದೊರೆತ ಪ್ರಶಂಸೆ, ಪ್ರೋತ್ಸಾಹ. ೧೯೫೭ರಲ್ಲಿ ಮದರಾಸಿನ ಆರ್‌.ಕೆ.ಎನ್. ಮ್ಯೂಸಿಕ್ ಅಕಾಡಮಿಯಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ. ಹಲವಾರು ಸಂಗೀತ ದಿಗ್ಗಜರಿಂದ ದೊರೆತ ಪ್ರಶಂಸೆ. ತಮ್ಮ ಸಹೋದರ ಆರ್‌.ಕೆ. ರಾಮನಾಥ್‌ರೊಡಗೂಡಿ ಕಲ್ಲಿಕೋಟೆ ಸಹೋದರರೆಂಬ ಹೆಸರಿನಿಂದ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮಗಳು. ಆಕಾಶವಾಣಿಯಲ್ಲೂ ಹಲವಾರು ಬಾರಿ ನಡೆಸಿಕೊಟ್ಟ ಕಚೇರಿಗಳು. ಶಾಮಾಶಾಸ್ತ್ರಿಗಳ ಬಗ್ಗೆ ರೂಪಕವೊಂದನ್ನು ರಚಿಸಿ ಮೈಸೂರು ಆಕಾಶವಾಣಿಯಲ್ಲಿ ನಿರ್ದೇಶನ. ಸಂದ ಗೌರವಗಳು ಹಲವಾರು. ಕರ್ನಾಟಕ ಸಂಗೀತನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ, ಬೆಂಗಳೂರಿನ ತ್ಯಾಗರಾಜ ಗಾನ ಸಭಾದಿಂದ ಕಲಾಭೂಷಣ. ಮೈಸೂರಿನ ಗಾನಭಾರತಿ, ಜಿ.ಎಸ್.ಎನ್. ಸಂಗೀತ ಸಭಾ, ಬೆಂಗಳೂರಿನ ಕರ್ನಾಟಕ ಕಾಲೇಜ್ ಆಫ್ ಪರ್‌ಕಷನ್, ನಾದಾಂಜಲಿ, ಶ್ರೀಕಾಂತ ಸಂಗೀತ ಸಭಾ ಮುಂತಾದುವುಗಳಿಂದ ದೊರೆತ ಗೌರವ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು: ಕರಿಗಿರಿ ಆಚಾರ್ಯ.ಟಿ.ವಿ. – ೧೯೦೯ ಜಿ.ಎನ್. ಬಾಲಸುಬ್ರಹ್ಮಣ್ಯ- ೧೯೧೦ ಆರ್‌.ಡಿ.ಕಾಮತ್ – ೧೯೨೩ ಡಿಂಗ್ರಿ ನಾಗರಾಜ್‌೧೯೪೮ ವೆಂಕಟಪ್ಪ ಬಿ.ಎಂ,  ೧೯೪೯.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top