ಆರ್‌.ಕೆ. ಸೂರ್ಯನಾರಾಯಣ್

Home/Birthday/ಆರ್‌.ಕೆ. ಸೂರ್ಯನಾರಾಯಣ್
Loading Events
This event has passed.

೧೪.೦.೧೯೩೭ ೨೫.೧೨.೨೦೦೩ ಮೈಸೂರು ವೀಣೆಯ ಸೊಬಗನ್ನ, ವಿಶ್ವದಾದ್ಯಂತ ಪ್ರಚುರ ಪಡಿಸಿದ ಸೂರ್ಯನಾರಾಯಣ್ ರವರು ಹುಟ್ಟಿದ್ದು ಮೈಸೂರು. ತಂದೆ ವೀಣಾ ವಿದ್ವಾಂಸರಾಗಿದ್ದ ಆರ್‌.ಎಸ್.ಕೇಶವಮೂರ್ತಿ, ತಾಯಿ ವೆಂಕಟಲಕ್ಷ್ಮಮ್ಮ. ೧೫ನೇ ಶತಮಾನದಿಂದಲೂ ಸಂಗೀತ ಸೇವೆ ನಡೆಸಿಕೊಂಡು ಬಂದ ವಂಶದ ೨೫ನೆಯ ಕುಡಿ. ಕಿರಿಯ ವಯಸ್ಸಿನಲ್ಲೇ ತಂದೆಯವರಲ್ಲಿ ಸಂಗೀತಾಭ್ಯಾಸ. ೯ನೇ ವಯಸ್ಸಿನಲ್ಲಿ ಜಯಚಾಮರಾಜ ಒಡೆಯರ ಸಮ್ಮುಖದಲ್ಲಿ ಹಾಡಿ ಆಶ್ಚರ್ಯ ಚಕಿತರನ್ನಾಗಿಸಿದ ಬಾಲಕ. ೧೪ನೇ ವಯಸ್ಸಿನವರೆವಿಗೂ ಗಾಯನಾಭ್ಯಾಸ. ನಂತರ ಪ್ರಾರಂಭಿಸಿದ್ದು ವೀಣಾವಾದನ. ೧೯೫೭ ರಲ್ಲಿ ವಿದ್ವತ್ ಸಭೆಯಲ್ಲಿ ತಂದೆಯಿಂದ ಪಡೆದ ೩೫೦ ವರ್ಷ ಹಳೆಯದಾದ ಗಾಯತ್ರಿ ವೀಣೆ. ೨೧ನೇ ವಯಸ್ಸಿಗೇ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ನಡೆಸಿಕೊಟ್ಟ ವೀಣಾವಾದನ ಕಚೇರಿ. ಕೋಲ್ಕತ್ತಾ, ಹೈದರಾಬಾದ್, ಗೌಹತಿ ಮುಂತಾದ ಕಡೆಗಳಲ್ಲೂ ರಾಷ್ಟ್ರೀಯ ಜಾಲದಲ್ಲಿ ವೀಣಾವಾದನ ಪ್ರಸಾರ. ಹಲವಾರು ಬಾರಿ ವಿದೇಶಯಾತ್ರೆ. ೧೯೭೦ ರಲ್ಲಿ ಸಿಂಗಪುರ, ಮಲೇಷಿಯಾ, ಇಂಡೋನೇಷಿಯಾ, ಹಾಂಗಾಕಾಂಗ್, ಜಪಾನ್, ಸಿಲೋನ್ ಪ್ರವಾಸ. ೧೯೭೨ ರಲ್ಲಿ ಫಿಲಿಫೈನ್ಸ್, ಸಿಂಗಪೂರ್‌, ಸಿಲೋನ್, ಮಲೇಷಿಯಾ; ೧೯೭೪ ರಲ್ಲಿ ಮಧ್ಯಪ್ರಾಚ್ಯ ದೇಶಗಳು –  ಇರಾನ್, ಈಜಿಫ್ಟ್, ಯು.ಕೆ., ಯುರೋಪ್, ಅಮೆರಿಕಾ, ಕೆನಡ; ೧೯೮೧ ರಲ್ಲಿ ಜರ್ಮನಿ, ಹಾಲೆಂಡ್, ಸ್ವಿಜರ್‌ಲ್ಯಾಂಡ್; ೧೯೮೪ ರಲ್ಲಿ ಉತ್ತರ ಅಮೆರಿಕಾ, ಕೆನಡಾ, ದ. ಆಫ್ರಿಕಾ, ೧೯೯೧ ರಲ್ಲಿ ಜರ್ಮನಿ, ಹಾಲೆಂಡ್, ಸ್ವಿಜರ್‌ಲ್ಯಾಂಡ್ ಹೀಗೆ ಪ್ರಪಂಚದಾದ್ಯಂತ ನಡೆಸಿಕೊಟ್ಟ ವೀಣಾವಾದನ ಕಚೇರಿಗಳು. ೧೯೬೬ ರಲ್ಲಿ ರಾಷ್ಟ್ರಪತಿಭವನದಲ್ಲಿ ವೀಣಾವಾದನ ಕಚೇರಿ, ರಾಷ್ಟ್ರಪತಿ ರಾಧಾಕೃಷ್ಣನ್‌ರವರಿಂದ ಪ್ರಶಂಸೆ. ಮಲಯ ಮಾರುತ, ರಾಮಾನುಜಾಚಾರ್ಯ ಚಲನ ಚಿತ್ರಗಳಲ್ಲೂ ನಟನೆ. ೧೯೭೦ ರಲ್ಲಿ ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ವಾಗ್ಗೇಯಕಾರರಾಗಿಯೂ ಕೃತಿ ರಚನೆಗಾರಂಭ. ಸ್ವರಜತಿ, ನವಗ್ರಹ ಕೀರ್ತನೆ, ರಾಗಮಾಲಿಕೆ, ತಿಲ್ಲಾನ ಹಾಗೂ ಜಾವಳಿಗಳನ್ನೊಳಗೊಂಡ ರಚನೆಗಳ ಸಂಖ್ಯೆಯೇ ಸುಮಾರು ನಾನ್ನೂರಕ್ಕೂ ಹೆಚ್ಚು. ೧೯೭೫ ರಲ್ಲಿ ವಿಜಯದಶಮಿಯಂದು ಶೃಂಗೇರಿ ಜಗದ್ಗುರುಗಳಿಂದ ವೈಣಿಕ ವಿಶಾರದ ಬಿರುದು, ೧೯೯೯ ರಲ್ಲಿ ತ್ಯಾಗರಾಜ ಗಾನ ಸಭಾ ಟ್ರಸ್ಟ್ ಸಂಗೀತೋತ್ಸವದ ಅಧ್ಯಕ್ಷ ಪದವಿ. ಭಾರತ ವೈಣಿಕರತ್ನ, ಭಾರತ ವೈಣಿಕ ವಿದ್ಯಾಭಾಸ್ಕರ, ಗಾನಾಮೃತ ವೈಣಿಕ, ಇಸೈ ತೆಂಡ್ರಲ್, ಗುರು ಸೇವಾ ಚತುರ, ಗಾಯತ್ರಿ ವೀಣಾ ವಿವಸ್ವಂತ, ಇಸೈಮನ್ನನ್, ಕಲಾಪೂರ್ಣ, ಕಲೈಮಾಮಣಿ, ನಾದಜ್ಯೋತಿ, ಸಂಗೀತ ವಿದ್ಯಾಭಾಸ್ಕರ, ವೈಣಿಕ ಶಿಖಾಮಣಿ, ವೀಣಾ ಸಾಮ್ರಾಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ೪೦ ಕ್ಕೂ ಹೆಚ್ಚು ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಬಿ.ವಿ.ನಂಜುಂಡಯ್ಯ- ೧೯೨೯ ಬಾನಂದೂರು ಕೆಂಪಯ್ಯ – ೧೯೫೧ ಜೈಕುಮಾರ್‌.ಜಿ. – ೧೯೬೦.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top