Loading Events

« All Events

  • This event has passed.

ಆರ್.ಆರ್. ದಿವಾಕರ್

September 30, 2023

೩೦-೯-೧೮೯೪ ೧೫-೧-೧೯೯೦ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಅಧ್ವರ್ಯು, ಸಾಹಿತಿ, ಪತ್ರಕರ್ತ ರಂಗರಾವ್ ರಾಮಚಂದ್ರ ದಿವಾಕರ್‌ರವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ರಾಮಚಂದ್ರ, ತಾಯಿ ಸೀತಾ. ಧಾರವಾಡ, ಬೆಳಗಾವಿ, ಪುಣೆ, ಮುಂಬಯಿಯಲ್ಲಿ ಶಿಕ್ಷಣ. ಎಂ.ಎ. ಪದವೀಧರರು. ಕೆಲಕಾಲ ಇಂಗ್ಲಿಷ್ ಅಧ್ಯಾಪಕರಾಗಿ ಉದ್ಯೋಗ. ನಂತರ ಎಲ್.ಎಲ್.ಬಿ. ಪದವಿ ಪಡೆದರೂ ಟಿಳಕ, ಅರವಿಂದರ ಪ್ರಭಾವ. ಗಾಂಜಿಯ ಕರೆಗೆ ಆರಿಸಿಕೊಂಡದ್ದು ಸ್ವಾತಂತ್ರ್ಯ ಹೋರಾಟ. ಅಸಹಕಾರ ಚಳವಳಿ, ಸತ್ಯಾಗ್ರಹ, ಚಲೇಜಾವ್ ಚಳವಳಿಯಲ್ಲಿ ಭಾಗಿ. ಕರ್ನಾಟಕ ಏಕೀಕರಣಕ್ಕಾಗಿ ಪಟ್ಟಶ್ರಮ. ಸಂವಿಧಾನ ರೂಪಕರಾಗಿ, ೧೯೪೮-೫೨ರಲ್ಲಿ ಕೇಂದ್ರ ಸರಕಾರದ ಸುದ್ದಿ ಖಾತೆಯ ಮಂತ್ರಿಯಾಗಿ, ಬಿಹಾರದ ರಾಜ್ಯಪಾಲರಾಗಿ (೧೯೫೨-೫೭), ರಾಜ್ಯ ಸಭೆಯ ಸದಸ್ಯರಾಗಿ (೧೯೬೨-೬೮) ಸಲ್ಲಿಸಿದ ಸೇವೆ. ಪತ್ರಿಕಾ ರಂಗದಲ್ಲಿಯೂ ಗಣನೀಯವಾದ ಸೇವೆ. ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರು.ಬಹುಮುಖ ಲೇಖನ ವ್ಯವಸಾಯ, ಗಾಂ ಕೃತಿಗಳು ಮತ್ತು ತತ್ತ್ವ, ಕರ್ನಾಟಕ ಏಕೀಕರಣ, ಧರ್ಮ, ತತ್ತ್ವಶಾಸ್ತ್ರ, ಸಾಹಿತ್ಯ, ಇತಿಹಾಸ ವಿಷಯ ಕುರಿತು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಕೃತಿರಚನೆ. ಸೆರೆಮನೆಯಲ್ಲಿದ್ದಾಗ ಪೌರಸ್ತ್ಯ-ಪಾಶ್ಚಾತ್ಯ ತತ್ತ್ವಜ್ಞಾನ ಹಾಗೂ ಅಧ್ಯಾತ್ಮಿಕ ಅನುಭಾವ-ಸೆರೆಮನೆಯಲ್ಲಿ ತಮಗಾದ ಅನುಭವದ ಗ್ರಂಥ ‘ಸೆರೆಯ ಮರೆಯಲ್ಲಿ’ ರಚನೆ. ಆಗಮ ಮತ್ತು ತಾಂತ್ರಿಕ ಪರಂಪರೆಯನ್ನು ಅಭ್ಯಸಿಸಿ ರಚಿಸಿದ ಗ್ರಂಥಗಳು ಭಗವದ್ಗೀತೆ ಮತ್ತು ಉಪನಿಷತ್ತುಗಳು-ವಚನಶಾಸ್ತ್ರ ರಹಸ್ಯ-ಕನ್ನಡದ ಶಿವಶರಣರ ವಚನಗಳನ್ನು ಕುರಿತು ಬರೆದ ಗ್ರಂಥ. ರಾಮಕೃಷ್ಣ ಪರಮಹಂಸ ಮತ್ತು ಅರವಿಂದರ ಬಗ್ಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಗ್ರಂಥ ರಚನೆ. ಎಂ.ಆರ್. ಶ್ರೀಯವರ ‘ನಾಗರಿಕ’ ಗ್ರಂಥವನ್ನು ಹಿಂದಿಗೆ ಅನುವಾದ. ಉಪನಿಷತ್ ಪ್ರಕಾಶ, ಉಪನಿಷತ್ ಕಥಾವಳಿ, ಗೀತೆಯ ಗುಟ್ಟು, ಕರ್ಮಯೋಗ, ಹರಿಭಕ್ತ ಸುಧೆ, ಮಹಾತ್ಮರ ಮನೋರಂಗ ಇವು ಮುಖ್ಯ ಕೃತಿಗಳು. ಇಂಗ್ಲಿಷ್‌ನಲ್ಲಿ ಬರೆದ ಗ್ರಂಥಗಳು-ಸತ್ಯಾಗ್ರಹ, ಗ್ಲಿಂಪ್ಸಸ್ ಆಫ್ ಗಾಂಜಿ, ಉಪನಿಷದ್ ಇನ್ ಸ್ಟೋರಿ ಅಂಡ್ ಡಯಲಾಗ್, ಮಹಾಯೋಗಿ, ಭಗವಾನ್ ಬುದ್ಧ ಮುಂತಾದುವು. ಸಂಪಾದಿತ-ಬಿಹಾರ್ ಥ್ರೂ ದಿ ಏಜಸ್, ಕರ್ನಾಟಕ ಥ್ರೂ ದಿ ಏಜಸ್. ಜೀವನ ದರ್ಶನ ಕೃತಿಗಳು-ಅಂತರಾತ್ಮನಿಗೆ ಮತ್ತು ವಿಶ್ವಾತ್ಮನಿಗೆ. ಇವರ ಸಾಹಿತ್ಯ ಕೊಡುಗೆಯನ್ನು ಗೌರವಿಸಿದ ಕನ್ನಡ ನಾಡು ಬಳ್ಳಾರಿಯ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ತೋರಿದ ಗೌರವ. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಟಿ.ಜಿ. ಸಿದ್ದಪ್ಪಾಜಿ – ೧೯೧೪ ವರದರಾಜ ಅಯ್ಯಂಗಾರ್ – ೧೯೨೧ ಡಾ. ನಿರುಪಮಾ – ೧೯೩೩ ಸು. ರಂಗಸ್ವಾಮಿ – ೧೯೪೭-೯.೪.೨೦೦೪

Details

Date:
September 30, 2023
Event Category: