Loading Events

« All Events

ಆರ್.ಎನ್‌. ತ್ಯಾಗರಾಜನ್‌

July 15

೧೫.೭.೧೯೪೩ ಹಾಡುಗಾರಿಕೆಯಲ್ಲಿ ರುದ್ರಪಟ್ಟಣ ಸಹೋದರರೆಂದೇ ಪ್ರಖ್ಯಾತರಾಗಿರುವ ವಲ್ಲಿ ತ್ಯಾಗರಾಜನ್‌ರವರು ಹುಟ್ಟಿದ್ದು ಹಾಸನ. ತಂದೆ ಸಂಗೀತ ವಿದ್ವಾಂಸರಾದ ಆರ್.ಕೆ. ನಾರಾಯಣಸ್ವಾಮಿ, ತಾಯಿ ಸಾವಿತ್ರಮ್ಮ. ತಂದೆಯಿಂದಲೇ ಸಂಗೀತದ ಮೊದಲಪಾಠ. ಚಿಕ್ಕಪ್ಪಂದಿರಾದ ಆರ್.ಕೆ. ವೆಂಕಟರಮಣ ಶಾಸ್ತ್ರಿ, ಆರ್.ಕೆ. ಶ್ರೀಕಂಠನ್‌ ರವರಿಂದ ಮುಂದುವರೆದ ಶಿಕ್ಷಣ. ಸಂಗೀತ ವಿದ್ವಾಂಸರಾದ ರಾಮನಾಡ ಕೃಷ್ಣನ್‌, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆಲತ್ತೂರು ಸಹೋದರರು, ಜಿ.ಎನ್‌.ಬಿ. ಯವರ ಮಾರ್ಗದರ್ಶನ. ದೇಶಾದ್ಯಂತ ನೀಡಿದ ಸಂಗೀತ ಕಚೇರಿಗಳು. ಚೆನ್ನೈನ ಮ್ಯೂಸಿಕ್‌ ಅಕಾಡಮಿ, ಕೃಷ್ಣಗಾನಸಭಾ , ನಾರದಗಾನಸಭಾ, ತಿರುವನಂತಪುರದ ಸ್ವಾತಿ ತಿರುನಾಳ್‌ ಸಂಗೀತ ಸಭಾ, ನವರಾತ್ರಿ ಮಂಟಪ, ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಸಭಾ, ಮಲ್ಲೇಶ್ವರಂ ಸಂಗೀತ ಸಭಾ, ಮೈಸೂರಿನ ಅರಮನೆಯ ದರ್ಬಾರ್ ಹಾಲ್‌, ಆಕಾಶವಾಣಿ ಸಂಗೀತ ಸಮ್ಮೇಳನ, ದೂರದರ್ಶನದ ಕಾರ್ಯಕ್ರಮಗಳಲ್ಲಿ ನೀಡಿದ ಸಂಗೀತ ಕಾರ್ಯಕ್ರಮಗಳು. ಹಲವಾರು ಬಾರಿ ವಿದೇಶಯಾತ್ರೆ. ಸಿಂಗಾಪುರ್, ಕೌಲಾಲಂಪುರ್, ಯು,ಎಸ್‌.ಎ. ಪಿಟ್ಸ್ ಬರ್ಗನ ವೆಂಕಟೇಶ್ವರ ದೇವಾಲಯ, ಅಮೆರಿಕಾದ ಮೆರಿಲ್ಯಾಂಡ್‌ನಲ್ಲಿ ಗಾಯನ, ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳಲ್ಲಿ ಭಾಗಿ, ವಾಸುದೇವಾಚಾರ್ಯರ ಕೃತಿಗಳು, ಪುರಂದರದಾಸರ ಕೃತಿಗಳು, ಜಯಚಾಮರಾಜ ಒಡೆಯರ ಕೃತಿಗಳು, ಉತ್ತಕ್ಕಾಡ್‌ ವೆಂಕಟಸುಬ್ಬ ಅಯ್ಯರ್ ಮುಂತಾದವರ ಕೃತಿಗಳ ಸಿ.ಡಿ, ಕ್ಯಾಸೆಟ್‌ ಬಿಡುಗಡೆ. ಹಲವಾರು ನಿಯತ ಕಾಲಿಕೆಗಳಿಗೆ ಸಂಗೀತದ ಬಗ್ಗೆ ಬರೆದ ಲೇಖನಗಳು. ಆಕಾಶವಾಣಿ, ಚೆನ್ನೈನ ಕೃಷ್ಣಗಾನಸಭಾ, ಮ್ಯೂಸಿಕ್‌ ಅಕಾಡಮಿ ಬಹುಮಾನ; ಮುಸುರಿ ಸುಬ್ರಹ್ಮಣ್ಯ ಪ್ರಶಸ್ತಿ, ಪೊನ್ನಯ್ಯಪಿಳ್ಳೆ, ಸಬೇಶ್‌ ಅಯ್ಯರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಗಾನ ಸುಧಾಕರ, ಗಾನ ಕಲಾ ತಿಲಕ, ಸಂಗೀತ ಕಲಾ ತಪಸ್ವಿ ಮುಂತಾದ ಮುಖ್ಯವಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಬಾಗಲೂರು ಕೃಷ್ಣಮೂರ್ತಿ- ೧೯೧೨ ಚೆಲುವರಾಜ್‌.ಎನ್‌.ಎಲ್‌ – ೧೯೨೮ ಮೂರ್ತಿ ದೇತಾಜೆ – ೧೯೫೨ ಗಿರೀಶ್‌. ಎಚ್‌ – ೧೯೭೨

* * *

Details

Date:
July 15
Event Category: