Loading Events

« All Events

  • This event has passed.

ಆರ್.ಎನ್. ದೊರೆಸ್ವಾಮಿ

December 12, 2023

೧೨-೧೨-೧೯೧೬ ೧೭-೮-೨೦೦೨ ಸಂಗೀತ ಕ್ಷೇತ್ರದ ಕಲಾರತ್ನರೆನಿಸಿದ್ದ ದೊರೆಸ್ವಾಮಿಯವರು ಹುಟ್ಟಿದ್ದು ರುದ್ರಪಟ್ಟಣದಲ್ಲಿ. ತಂದೆ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ನಾಲಾವೆಂಕಟರಾಮಯ್ಯ, ತಾಯಿ ಸಾವಿತ್ರಮ್ಮ, ಸಂಗೀತ ತಾಯಿಯಿಂದ ಹರಿದುಬಂದ ಬಳುವಳಿ. ಸೇಲಂ ದೊರೆಸ್ವಾಮಿ ಅಯ್ಯಂಗಾರ್ಯರಲ್ಲಿ ಸಂಗೀತದ ಪ್ರಥಮ ಶಿಕ್ಷಣ, ಹಾಡುಗಾರಿಕೆಗೆ ಒಗ್ಗದೆ ವೀಣೆ ವೆಂಕಟಗಿರಿಯಪ್ಪನವರಲ್ಲಿ ಕೈಗೊಂಡ ಶಿಷ್ಯವೃತ್ತಿ, ಗುರುಗಳ ಜೊತೆಯಲ್ಲಿ ಉತ್ತರ ಭಾರತ ಪ್ರವಾಸದ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ, ಮದರಾಸಿನ ಆಲ್ ಇಂಡಿಯಾ ರೇಡಿಯೋದಲ್ಲಿ ಹಲವಾರು ಬಾರಿ ಕಾರ್ಯಕ್ರಮಗಳ ಪ್ರಸಾರ. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕೆಲಕಾಲ ಸಂಗೀತ ಅಧ್ಯಾಪಕರಾಗಿ, ಕರ್ನಾಟಕ ಸರಕಾರ ನಡೆಸುವ ಸಂಗೀತ ಪರೀಕ್ಷಾ ಮಂಡಲಿಯ ಮುಖ್ಯ ಪರೀಕ್ಷಕರಾಗಿ, ಸಂಗೀತ ಕಲಾಭಿವರ್ಧಿನಿ ಸಭಾ ಸಂಸ್ಥೆಯ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ. ಭಾರತೀಯ ಸಂಗೀತ ವಾದ್ಯಗಳು ಸಾಕ್ಷ್ಯಚಿತ್ರಕ್ಕಾಗಿ ಗುರುಗಳೊಡನೆ ನಡೆಸಿಕೊಟ್ಟ ವೀಣಾವಾದನ ಕಚೇರಿ. ಟಿ. ಚೌಡಯ್ಯನವರೊಡನೆ ದೊರೆತ ಹಲವಾರು ಅವಕಾಶಗಳು. ರಾಮೋತ್ಸವ, ಗಣೇಶೋತ್ಸವಗಳಲ್ಲಿ ನಡೆಸಿಕೊಟ್ಟ ಗಾಯನ, ವೀಣಾವಾದನ ಕಚೇರಿ. ಮೈಸೂರಿನ ಸರಸ್ವತಿ ಗಾನ ಕಲಾಮಂದಿರದ ತ್ಯಾಗರಾಜ ಆರಾಧನಾ ಮಹೋತ್ಸವದಲ್ಲಿ ವೈಣಿಕ ವಿದ್ಯಾವಾರಿಧಿ ಪ್ರಶಸ್ತಿ, ಕಲಾಭಿವರ್ಧಿನಿ ಸಭಾದಿಂದ ಗಾನರತ್ನಾಕರ, ಬಿ. ದೇವೇಂದ್ರಪ್ಪನವರ ಹನುಮಜ್ಜಯಂತಿ ಉತ್ಸವದಲ್ಲಿ ವೈಣಿಕ ಪ್ರವೀಣ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಬೆಂಗಳೂರಿನ ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮತ್ತು ಸಂಗೀತ ಕಲಾರತ್ನ ಬಿರುದು, ರಾಜ್ಯೋತ್ಸವ ಪ್ರಶಸ್ತಿ, ಚೌಡಯ್ಯ ಸ್ಮಾರಕ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು : ಚಿನ್ನಪ್ಪ ಬಿ.ಎನ್. – ೧೯೧೨ ಸೀತಾಮರಾಜು ಬಿ.ಎಂ. – ೧೯೨೫ ನ. ರತ್ನ – ೧೯೩೪

* * *

Details

Date:
December 12, 2023
Event Category: