ಆರ್.ಕೆ. ಶ್ರೀಕಂಠನ್

Home/Birthday/ಆರ್.ಕೆ. ಶ್ರೀಕಂಠನ್
Loading Events
This event has passed.

೧೪.೦೧.೧೯೨೦ ಸಿರಿಕಂಠದ ಆರ್.ಕೆ. ಶ್ರೀಕಂಠನ್ ರವರು ಹುಟ್ಟಿದ್ದು ಸಂಕ್ರಾಂತಿಯ ದಿವಸ ರುದ್ರಪಟ್ಟಣದಲ್ಲಿ. ಜೀವನದುದಕ್ಕೂ ಸಾಧಿಸಿದ್ದು ಸಂಗೀತ ಸಂಕ್ರಾಂತಿ. ತಂದೆ ಕೃಷ್ಣ ಶಾಸ್ತ್ರಿಗಳು ಪ್ರಬುದ್ಧ ಕಲಾವಿದರು, ತಾಯಿ ಸಣ್ಣಕ್ಕನವರೂ ಸೊಗಸಾದ ಹಾಡುಗಾರರು. ಸಂಗೀತಗಾರರ ಮನೆತನ. ತಂದೆಯವರಿಂದಲೇ ಸಂಗೀತ ಶಿಕ್ಷಣ ಆರಂಭ. ಆದರೂ ಸಾಮಾನ್ಯ ಜ್ಞಾನ ಗಳಿಸಲು ಸೇರಿದ್ದು ಸದ್ವಿದ್ಯ ಪಾಠಶಾಲೆ, ಬನುಮಯ್ಯ ಪ್ರೌಢಶಾಲೆ, ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ಪ್ರತಿ ಶುಕ್ರವಾರ, ಶನಿವಾರ ಭಜನೆ ಕಾರ್ಯಕ್ರಮಗಳಲ್ಲಿ ಭಾಗಿ, ಹದಿಮೂರರ ಹರೆಯದಲ್ಲೇ ಕಚೇರಿ ನೀಡಲು ಪ್ರಾರಂಭ. ಉಪಾಕರ್ಮದ ಸಮಾರಂಭವೊಂದರಲ್ಲಿ ಹಾಡಿ ಭೇಷ್ ಎನ್ನಿಸಿಕೊಂಡ ಹುಡುಗ. ಬಿಡಾರಂ ಕೃಷ್ಣಪ್ಪನವರ ಕಚೇರಿ ಕೇಳಲು ಮಧ್ಯಾಹ್ನದಿಂದಲೇ ಅಜ್ಞಾತವಾಸ ಆರಂಭಿಸಿ ಹೇಗೋ ನುಸುಳಿಕೊಂಡು ಹೋಗಿ ಶೋತೃಗಳೊಡನೆ ಸೇರಿಕೊಳ್ಳುತ್ತಿದ್ದರು. ಮನೆಗೆಬಂದು ಹೋಗುತ್ತಿದ್ದ ದಿಗ್ಗಜರಾದ ಕೇಳ್ಲಪಲ್ಲಿ ಅನಂತ ಕೃಷ್ಣಶರ್ಮ, ಟೈಗರ್ ವರದಾಚಾರ್ಯರು, ಗಮಕಿ ರಾಮಕೃಷ್ಣ ಶಾಸ್ತ್ರಿಗಳಂಥ ವಿದ್ವಾಂಸರ ಸಂಪರ್ಕದಿಂದ ಕುದುರಿದ ಸಂಗೀತ. ಮೈಸೂರು ಸಂಸ್ಥಾನ ರೇಡಿಯೋ ಕೇಂದ್ರದಲ್ಲಿ ಸಂಗೀತದ ಗುರುವಾಗಿ ಉದ್ಯೋಗ ಪ್ರಾರಂಭ. ನಂತರ ಬೆಂಗಳೂರು ಆಕಾಶವಾಣಿಗೆ, ಬಾನುಲಿಗಾಗಿ ಹಾಡಿದ, ನಿರ್ದೇಶಿಸಿದ ಅಸಂಖ್ಯ ಕಾರ್ಯಕ್ರಮಗಳು. ಬೇಂದ್ರೆ, ಗುಂಡಪ್ಪ, ಪು.ತಿ.ನ., ಎಸ್.ವಿ.ಪಿ. ಮುಂತಾದ ಕವಿಗಳ ಕವಿತೆಗಳಿಗೂ ರಾಗ ತಾಳದ ಉಡುಗೆ. ಕರ್ನಾಟಕದ ಸಂಗೀತದ ಮಾಧುರ್ಯವನ್ನು ವಿದೇಶದಲ್ಲೂ ಮೆರೆಸಿದ ಹೆಗ್ಗಳಿಕೆ. ಪಿಟ್ಸ್ ಬರ್ಗ್ ವೆಂಕಟೇಶ್ವರ ದೇವಸ್ಥಾನದ ಆಹ್ವಾನದ ಮೇರೆಗೆ ಹೋಗಿ ಹಾಡಿದ್ದಲ್ಲದೆ ಟೊರೆಂಟೊ, ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಆರು ತಿಂಗಳು ಬೋಧನೆ. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ, ಗಾನ ಭಾಸ್ಕರ, ಗುರುಸೇವಾ ಮಂಡಲಿಯಿಂದ ಗಾನಕಲಾ ಪ್ರವೀಣ, ಸರಸ್ವತಿ ಗಾನಸಭಾದಿಂದ ಕರ್ನಾಟಕ ಸಂಗೀತರತ್ನ, ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾರತ್ನ ಪ್ರಶಸ್ತಿ, ಟಿ.ಟಿ.ಕೆ. ಸ್ಮಾರಕ ಪ್ರಶಸ್ತಿ, ಪಾಲ್ಘಟ್ ಸುಬ್ರಹ್ಮಣ್ಯ ಪಿಳ್ಳೆ ಪ್ರಶಸ್ತಿ, ಲಯಕಲಾ ನಿಪುಣ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನಕಪುರಂದರ ಪ್ರಶಸ್ತಿ, ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು : ಮಲ್ಲಯ ಸ್ವಾಮಿ ಅಥಣಿ – ೧೯೧೮ ಸುಶೀಲಮ್ಮ – ೧೯೩೫ ನಾಗಮಂಗಲಯ್ಯ – ೧೯೪೨ ರಾಮಕೃಷ್ಣಚಾರ್ – ೧೯೪೬ ಪದ್ಮಜಾ ಪ್ರಕಾಶ್ – ೧೯೫೦

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top