ಆರ್. ನರಸಿಂಹಾಚಾರ್

Home/Birthday/ಆರ್. ನರಸಿಂಹಾಚಾರ್
Loading Events

೯.೪.೧೮೬೦ ೬.೧೨.೧೯೩೬ ಹುಚ್ಚು ಹಾಸ್ಯ, ಚುಚ್ಚು ಹಾಸ್ಯ, ಪೆದ್ದುತನದ ಲೇವಡಿಗಳಿಂದ ಕೂಡಿದ ‘ಗಾಂಪರೊಡೆಯರು’ ಹಾಸ್ಯ ಕೃತಿಯನಷ್ಟೇ ಅಲ್ಲದೆ ಸಂಶೋಧಕರಾಗಿ, ಅನುವಾದಕರಾಗಿ, ಭಾಷಾ ವಿಜ್ಞಾನಿಯಾಗಿ ದುಡಿದ ಆರ್. ನರಸಿಂಹಾಚಾರ‍್ಯರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೊಪ್ಪಲು ಎಂಬ ಗ್ರಾಮದಲ್ಲಿ. ತಂದೆ ನಾರಾಯಣಾಚಾರ‍್ಯ, ಪ್ರಾರಂಭಿಕ ಶಿಕ್ಷಣ ತಂದೆಯಿಂದಲೇ. ಮುಂದೆ ಕಾಲೇಜು ಸೇರಿ ಎಂ.ಎ. ಪದವಿ ಪಡೆದು ಉದ್ಯೋಗಕ್ಕಾಗಿ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಹೈಸ್ಕೂಲುಗಳಲ್ಲಿ ಉಪಾಧ್ಯಾಯರಾಗಿ ದುಡಿದರು. ಮೈಸೂರಿನ ಪ್ರಾಕ್ತನ ಇಲಾಖೆಯಲ್ಲಿ ಲೂಯಿ ರೈಸರು ನಿರ್ದೇಶಕರಾಗಿದ್ದಾಗ ಅವರಿಗೆ ಸಹಾಯಕರಾಗಿ ಸೇರಿ ಅವರಿಂದ ಸಾಹಿತ್ಯ, ಸಂಶೋಧನೆಯ ಬಗ್ಗೆ ಪಡೆದ ಮಾರ್ಗದರ್ಶನ. ಲೂಯಿ ರೈಸರು ನಿವೃತ್ತರಾದಾಗ ಇವರೇ ಸಂಸ್ಥೆಯ ನಿರ್ದೇಶಕರಾದರು. ಸುಮಾರು ಸಾವಿರದ ಆರುನೂರು ಪುಟಗಳಲ್ಲಿ ಸಾವಿರದ ನೂರ ನಲವತ್ತೆಂಟು ಕವಿಗಳನ್ನೊಳಗೊಂಡ ೩ ಸಂಪುಟಗಳಲ್ಲಿ ‘ಕರ್ನಾಟಕ ಕವಿಚರಿತೆ’ ಇವರು ರಚಿಸಿದ ಆಚಾರ‍್ಯಕೃತಿ. ಈ ಕೃತಿಯ ರಚನೆಗಾಗಿ ಸುಮಾರು ೩೫ ವರ್ಷ ಶ್ರಮಿಸಿದರು. ಈ ಅದ್ಭುತ ಸಂಶೋಧನಕೃತಿ ಕವಿಗಳ ಕಾಲ, ಜೀವನವನ್ನು ತಿಳಿಸುವ ಮೊತ್ತಮೊದಲ ಕೃತಿ, ಯಾವುದೇ ಕನ್ನಡ ಸಾಹಿತ್ಯ ಚರಿತ್ರೆ ಕೃತಿಗೂ ಇದು ಆಧಾರ, ಆಕರ ಗ್ರಂಥ. ತಮಿಳಿನ ಅವ್ವೆಯಾರ, ತಿರುವಳ್ಳುವರ್ ಮೊದಲಾದ ಕವಿಗಳ ಕೃತಿಗಳಿಂದ, ಕ್ಷೇಮೇಂದ್ರ, ಭರ್ತ್ಸಹರಿ ಮೊದಲಾದ ಸಂಸ್ಕೃತ ಕವಿಗಳ ಕೃತಿಗಳಿಂದ ಆರಿಸಿ ಸಂಗ್ರಹಿಸಿ ಪ್ರಕಟಿಸಿದ ಗದ್ಯಕೃತಿ ‘ನೀತಿ ವಾಕ್ಯ ಮಂಜರಿ.’ ೧೯೨೩ರಲ್ಲಿ ಪ್ರಕಟಿಸಿದ ಶಾಸನ ಪದ್ಯ ಮಂಜರಿ ಮತ್ತೊಂದು ಅತ್ಯಪೂರ್ವ ಸಂಪಾದಿತ ಕೃತಿ. ಗಂಗ, ನೊಳಂಬ, ಚಾಳುಕ್ಯ, ರಾಷ್ಟ್ರಕೂಟ, ಚೋಳ, ಕಳಚೂರ‍್ಯ, ಸೇವುಣ, ಕೊಂಗಾಳ್ವ, ಹೊಯ್ಸಳ, ಸಾಂತರ, ಪಾಂಡ್ಯ, ವಿಜಯನಗರ ಮುಂತಾದ ರಾಜವಂಶಗಳ ಶಾಸನಗಳಿಂದ ಕೂಡಿದೆ. ಐದು ವಿಭಾಗಗಳಿಂದ ಕೂಡಿರುವ ‘ಕನ್ನಡ ಭಾಷಾ ಚರಿತೆ’ಯಲ್ಲಿ ದ್ರಾವಿಡ ಭಾಷೆ ಹುಟ್ಟು, ನಾಗರಿಕತೆ, ಪ್ರಭಾವ ಇವುಗಳನ್ನೊಳಗೊಂಡ ಕೃತಿ. ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಕನ್ನಡ ನಾಡಿಗೆ ಸಲ್ಲಿಸಿದ ಕೊಡುಗೆಗಾಗಿ “ಪ್ರಾಕ್ತನ ವಿಮರ್ಶ ವಿಚಕ್ಷಣ, ಕರ್ನಾಟಕ ಪ್ರಾಚ್ಯ ವಿದ್ಯಾವೈಭವ, ರಾವ್ ಬಹದ್ದೂರ್, ಅಭಿನವ ಕನ್ನಡ ಸೀಮಾಪುರುಷ, ಮಹೋಪಾಧ್ಯಾಯ” ಮುಂತಾದ ಬಿರುದುಗಳು ಸಂದಿವೆ. ಇವರು ಗತಿಸಿದ್ದು ೬.೧೨.೧೯೩೬ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಶ್ರೀಕಂಠ ಪುತ್ತೂರು – ೧೯೨೭ ಸೀತಾರಾಮಚಂದ್ರ – ೧೯೩೯ ಶ್ರೀ ಹರ್ಲೇಕರ್ – ೧೯೫೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top