Loading Events

« All Events

  • This event has passed.

ಆರ್‌. ಸತ್ಯಕುಮಾರ್

October 26

೨೬.೧೦.೧೯೫೮ ಮೃದಂಗ, ಘಟಂ ವಾದನದಲ್ಲಿ ಪ್ರಖ್ಯಾತರಾಗಿರುವ ಸತ್ಯಕುಮಾರ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ  ರುದ್ರಪಟ್ಟಣಂ ಆರ್‌.ಜಿ.ಕಾಮಚಂದ್ರ ಪ್ರಖ್ಯಾತ ವೇಣುವಾದಕರು ಹಾಗೂ ಗಾಯಕರು, ತಾಯಿ ಅನ್ನಪೂರ್ಣಮ್ಮ, ಓದಿದ್ದು ಪಿ.ಯು.ವರೆಗೆ, ಸಂಗೀತ ತಂದೆಯಿಂದ ಬಂದ ಬಳುವಳಿಯಾದ್ದರಿಂದ ಕಲಿತದ್ದು ಮೃದಂಗ ಮತ್ತು ಘಟಂವಾದನ, ವಿದ್ವಾನ್ ಶ್ರೀ ರಾಜಾಚಾರ್‌, ಆನೂರು ರಾಮಕೃಷ್ಣ, ಆರ್‌.ಎ.ಜಯಗೋಪಾಲ್‌, ಟಿ.ಎ.ಎಸ್‌. ಮಣಿಯವರಲ್ಲಿ ಪಡೆದ ಶಿಕ್ಷಣ. ಡೋಲಕ್‌ ನುಡಿಸುವುದರಲ್ಲೂ ಪಡೆದ ಪರಿಣತಿ. ಅಯನಾರ್‌ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲಿ ಮೃದಂಗ ಶಿಕ್ಷಕರಾಗಿ ಹಲವಾರು ಶಿಷ್ಯರಿಗೆ ನೀಡಿದ ತರಬೇತಿ. ನಾಗಪುರದ ದಕ್ಷಿಣ ವಲಯ ಸಂಗೀತ ಸ್ಪರ್ಧೆ, ಚಿಕ್ಕಮಗಳೂರು, ಧಾರವಾಡಗಳಲ್ಲಿ ನಡೆದ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಹೊತ್ತ ಜವಾಬ್ದಾರಿ. ಕರ್ನಾಟಕ ಗಾನ ಕಲಾ ಪರಿಷತ್‌, ನಾಗಪುರದ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ, ರಮ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ದಸರಾ ಉತ್ಸವ, ಅಯನಾರ್‌ ಕಲಾ ಶಾಲೆಯ ಸಂಗೀತೋತ್ಸವ, ದೆಹಲಿಯ ಅಪ್ನಾ ಉತ್ಸವ, ಭೂಪಾಲ್‌ನಲ್ಲಿ ನಡೆದ ಆಲ್‌ ಇಂಡಿಯಾ ಮ್ಯೂಸಿಕ್‌ ಸೆಮಿನಾರ್‌, ಹಂಪಿ ಪುರಂದರ ಉತ್ಸವ, ಮುಂತಾದೆಡೆಗಳಲ್ಲಿ ಮೃದಂಗ, ಘಟಂ, ಡೋಲಕ್‌ ನುಡಿಸಿ ಗಳಿಸಿದ ಜನ ಪ್ರಿಯತೆ. ಲಯಲಹರಿ ಪರ್‌ಕಷನ್‌ ಗುಂಪಿನ ಸದಸ್ಯರಾಗಿ ರಾಷ್ಟ್ರಪತಿ ಭವನದಲ್ಲಿ ನೀಡಿದ ಸಂಗೀತ ಕಾರ್ಯಕ್ರಮ. ಎರಡುಬಾರಿ ವಿದೇಶ ಯಾತ್ರೆ. ವೀಣಾ ಮಾಂತ್ರಿಕರೆನಿಸಿದ್ದ ವೇಮುಮುಕುಂದ್‌ರೊಡನೆ ಸಹವಾದಕರಾಗಿ ಜರ್ಮನಿ, ಸ್ವಿಜರ್‌ಲ್ಯಾಂಡ್‌, ಇಟಲಿ ಮುಂತಾದೆಡೆ ನೀಡಿದ ಕಾರ್ಯಕ್ರಮ. ೨೦೦೧ ರಲ್ಲಿ ನಾದತರಂಗಿಣಿಯ ಉಷಾಚಾರ್‌ ಆಹ್ವಾನದ ಮೇರೆಗೆ ಸಂಗೀತ ವಿದುಷಿ ಎಂ.,ಎಸ್‌.ಶೀಲರೊಡನೆ ವಾಷಿಂಗ್‌ಟನ್‌. ಡಿ.ಸಿ, ಚಿಕಾಗೋ, ನಾರ್ಥ್‌ಕರೋಲಿನ, ಪಿಟ್ಸ್‌ಬರ್ಗ್‌, ಕ್ಲೀವ್‌ಲ್ಯಾಂಡ್‌ ಮುಂತಾದೆಡೆ ನೀಡಿದ ಕಾರ್ಯಕ್ರಮ. ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನ. ಅಯನಾಕ್‌ ಶಾಲೆಯ ಶಿಷ್ಯರ ಅಚ್ಚುಮೆಚ್ಚಿನ ಮೃದಂಗದ ಅಧ್ಯಾಪಕರು.   ಇದೇದಿನಹುಟ್ಟಿದಕಲಾವಿದರು ಡಾ. ಶಚಿದೇವಿ. ಟಿ – ೧೯೪೦ ಕನಕ ಸ್ವಾಮಿ – ೧೯೪೧

* * *

Details

Date:
October 26
Event Category: