Loading Events

« All Events

  • This event has passed.

ಆರ್.ಸಿ. ಭೂಸನೂರಮಠ

December 9, 2023

೯-೧೨-೧೯೨೫ ೫-೭-೨೦೦೬ ಅಕಾರದಲ್ಲಿದ್ದು ಸಾಹಿತ್ಯ ಕೃಷಿಯಲ್ಲಿ ತೊಡಗುವವರು ವಿರಳವೇ. ಕೆಲಸದ ಒತ್ತಡದಿಂದ ಸಾಹಿತ್ಯ ರಚನೆಗೆ ಸಮಯಾಭಾವ. ಆದರೆ ಭೂಸನೂರ ಮಠರವರು ಇದಕ್ಕೊಂದು ಅಪವಾದ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕೌಜಲಗಿಯಲ್ಲಿ. ತಂದೆ ಚನ್ನವೀರಯ್ಯ, ತಾಯಿ ಚನ್ನವೀರಮ್ಮ. ಪ್ರಾರಂಭಿಕ ಶಿಕ್ಷಣ ಕೌಜಲಗಿ. ತುತ್ತಿಗೆ ಬಡತನವಿದ್ದರೂ ಬುದ್ಧಿಗೆ ಬಡತನವಿರಲಿಲ್ಲ. ೧೯೩೯ರಲ್ಲಿ ಹಿಂದಿ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ. ಡಾ. ಮೆಹತಾ ಸುವರ್ಣ ಪದಕ ಪಡೆದವರು. ರಾಣಿ ಬೆನ್ನೂರು ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ಹೋದರೆ ಆ ಸ್ಕೂಲಿನ ಆಡಳಿತಾಕಾರಿ ಸಿದ್ದಪ್ಪನವರಿಂದ ಮುಂದೆ ಓದಲು ಪ್ರಚೋದನೆ. ೧೯೪೨ರ ಸ್ವಾತಂತ್ರ್ಯ ಚಳವಳಿಗೆ ಸಿಕ್ಕಿ ಸೆರೆವಾಸ. ಸೆರೆಮನೆಯಲ್ಲಿ ವೇಳೆ ಕಳೆಯಲು ವಚನಗಳ ಪಠನ. ಕೇಳುತ್ತಿದ್ದ ಜೊತೆಗಾರ ಮುಸ್ಲಿಮ್ ಕೈದಿಯ ಬದುಕಿಗೆ ತೋರಿದ ಬೆಳಕು. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಒಂದನೆಯ ಸ್ಥಾನದಿಂದ ತೇರ್ಗಡೆ. ೧೯೪೮ರಲ್ಲಿ ಕರ್ನಾಟಕ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿ. ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ನೌಕರಿಗ ಸೇರಿದ ನಂತರ ಎಂ.ಎ. (ಇಂಗ್ಲಿಷ್) ಪದವಿ. ೧೯೬೧ರಲ್ಲಿ ಪಬ್ಲಿಕ್ ಸರ್ವೀಸ್ ಕಮೀಷನ್ ಪರೀಕ್ಷೆಯಲ್ಲಿ ತೇರ್ಗಡೆ. ಗೋವ, ಭೂಪಾಲ್, ಇಂಫಾಲ (ಮಣಿಪುರ), ಅಗರ್ತಲ (ತ್ರಿಪುರ) ಮುಂತಾದ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ. ಬೆಂಗಳೂರು ಆಕಾಶವಾಣಿ ಕೇಂದ್ರದ ಅಸಿಸ್ಟೆಂಟ್ ಸ್ಟೇಷನ್ ಡೈರೆಕ್ಟರಾಗಿ ನೇಮಕ. ೧೯೬೫ರಲ್ಲಿ ಯುದ್ಧದ ಸುದ್ದಿ ಸಂಗ್ರಹಕ್ಕೆ ತೆರಳಿದ್ದು ಇಂಫಾಲಗೆ, ಸಾವು ನೋವುಗಳಿಗಂಜದೆ, ಬಾಂಬ ದಾಳಿಯನ್ನು ಲೆಕ್ಕಿಸದೆ ತಾಜಾಸುದ್ದಿ ರವಾನೆ. ಇಂದಿರಾಗಾಂಯವರಿಂದ ದೊರೆತ ಮೆಚ್ಚುಗೆ. ಬಿಡುವಿಲ್ಲದ ಕೆಲಸದ ನಡುವೆಯೂ ರಚಿಸಿದ ಕೃತಿಗಳು. ಕವನ ಸಂಕಲನ-ಜೇಂಗೊಡ, ಕನಸಿನ ರಾಣಿ. ನಾಟಕ-ಭಕ್ತಿ ಭಂಡಾರಿ ಮತ್ತು ಇತರ ನಾಟಕಗಳು. ಹಿಂದಿ ಭಾಷೆಯಲ್ಲಿ-ಪ್ಯಾರಕೆ ಬೇಂಟ್ (ಏಕಾಂಕ ನಾಟಕಗಳ ಸಂಗ್ರಹ). ಹಲವಾರು ಪ್ರಶಸ್ತಿ ಗೌರವಗಳು. ಜೇಂಗೊಡ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಹಿಂದಿ ಏಕಾಂಕ ನಾಟಕ ಸಂಗ್ರಹಕ್ಕೆ ಮಧ್ಯಪ್ರದೇಶ ಸರಕಾರದ ಮಾಧವರಾವ್ ಸಪ್ರೆ ಬಹುಮಾನ, ಭಕ್ತಿ ಭಂಡಾರಿ ಹಿಂದಿ ಏಕಾಂಕ ನಾಟಕ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಯು. ತರಗತಿಗಳಿಗೆ ಪಠ್ಯ ಪುಸ್ತಕವಾಗಿ ಆಯ್ಕೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಸ್.ಪಿ. ಪದ್ಮಪ್ರಸಾದ್ – ೧೯೪೯ ಲೀಲಾ ಗರಡಿ – ೧೯೫೧

Details

Date:
December 9, 2023
Event Category: