Loading Events

« All Events

ಆಲೂರು ವೆಂಕಟರಾವ್

July 12

೧೨-೭-೧೮೮೦ ೨೫-೨-೧೯೬೪ ಪತ್ರಿಕೋದ್ಯಮಿ, ಸಾಹಿತಿ, ಕರ್ನಾಟಕ ಕುಲಪುರೋಹಿತ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ ವೆಂಕಟರಾಯರು ಹುಟ್ಟಿದ್ದು ಬಿಜಾಪುರದಲ್ಲಿ. ಇವರ ವಂಶಜರು ಧಾರವಾಡದ ಬಳಿಯ ಆಲೂರಿಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯರು ಶಿರಸ್ತೇದಾರರು, ತಾಯಿ ಭಾಗೀರಥಿಬಾಯಿ. ಪ್ರಾರಂಭಿಕ ಶಿಕ್ಷಣ ಧಾರವಾಡದಲ್ಲಿ. ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿ. ಧಾರವಾಡದಲ್ಲಿ ವಕೀಲಿ ವೃತ್ತಿ ಪ್ರಾರಂಭ. ಆನೆಗೊಂದಿ, ಹಂಪಿಗೆ ಭೇಟಿ. ಕರ್ನಾಟಕದ ಪ್ರಾಚೀನ ವೈಭವವನ್ನು ಕಲ್ಪನೆಗೆ ತಂದುಕೊಂಡು, ಕರ್ನಾಟಕದ ಏಕೀಕರಣಕ್ಕೆ ದುಡಿಯಲು ತೀರ‍್ಮಾನ. ಕರ್ನಾಟಕದ ವೀರರತ್ನಗಳು. ಕರ್ನಾಟಕದ ಸೂತ್ರಗಳು, ಕರ್ನಾಟಕತ್ವದ ವಿಕಾಸ. ನಾಡಿಗ ಸಂಬಂಸಿದ ಇತರ ಗ್ರಂಥಗಳ ಪ್ರಕಟಣೆ. ಇದಲ್ಲದೆ ವಿದ್ಯಾರಣ್ಯ ಚರಿತ್ರೆ, ಕನ್ನಡಿಗರ ಭ್ರಮನಿರಸನ ನಾಟಕ ಪ್ರಕಟಿತ. ಬಾಲಗಂಗಾಧರ ತಿಲಕರ ಗೀತಾರಹಸ್ಯವನ್ನು ಅದೇ ಹೆಸರಿನಿಂದ ಕನ್ನಡಕ್ಕೆ ಅನುವಾದ. ಗೀತಾಪ್ರಕಾಶ, ಗೀತಾಪರಿಮಳ, ಗೀತಾ ಸಂದೇಶ ಗ್ರಂಥಗಳು ಪ್ರಕಟ. ಶ್ರೀಮಧ್ವಾಚಾರ‍್ಯರ ಪೂರ್ಣ ಬ್ರಹ್ಮವಾದ ಗ್ರಂಥ ಪ್ರಕಾಶನ. ಧಾರವಾಡದ ಗ್ರಂಥ ಪ್ರಕಟಣಾ ಮಂದಿರ, ಕರ್ನಾಟಕ ಇತಿಹಾಸ ಮಂಡಳಿ, ಕರ್ನಾಟಕ ಸಾಹಿತ್ಯ ಪರಿಷತ್ತು, ಕರ್ನಾಟಕ ವಿಶ್ವವಿದ್ಯಾಲಯ ಮುಂತಾದುವುಗಳನ್ನು ಸ್ಥಾಪಿಸಲು ಪಟ್ಟ ಶ್ರಮ. ಪತ್ರಿಕಾರಂಗದಲ್ಲೂ ಸೇವೆ. ‘ವಾಗ್ಭೂಷಣ’, ‘ಜಯಕರ್ನಾಟಕ’ ಪತ್ರಿಕೆ ಮತ್ತು ಕರ್ಮವೀರ ಪತ್ರಿಕೆ ಸಂಪಾದಕತ್ವ. ಇವರ ನಾಡುನುಡಿಯ ಸೇವೆಗೆ ಸಂದ ಹಲವಾರು ಗೌರವಗಳು. ಹೈದರಾಬಾದ್ ಕನ್ನಡಿಗರಿಂದ ‘ಕರ್ನಾಟಕ ಕುಲಪುರೋಹಿತ’ ಬಿರುದು. ಬೆಂಗಳೂರು ನಗರ ಸಭೆಯಿಂದ ಸನ್ಮಾನ. ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ. ೧೯೫೬ರ ರಾಜ್ಯೋದಯದ ಹಂಪಿ ಭುವನೇಶ್ವರಿ ಪೂಜೆಯ ಪೌರೋಹಿತ್ಯ. ಕನ್ನಡ ನಾಡು ನುಡಿಯ ಮೇಲ್ಮೈಗಾಗಿ ಶ್ರಮಿಸುತ್ತಿದ್ದ ಆಲೂರರು ನಿಧನರಾದದ್ದು ಫೆ. ೨೫ರ ೧೯೬೪ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸೀತಾಸುತ – ೧೯೩೭ ಶ್ರೀಧರ ರಾಯಸಂ – ೧೯೪೬ ಮೀನಾಕ್ಷಿರಾವ್ – ೧೯೪೩ ಬಸುಬೇವಿನಗಿಡದ – ೧೯೬೪

Details

Date:
July 12
Event Category: