Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಇಂದಿರಾ ಹೆಗ್ಗಡೆ – ಕಣಜ

ಇಂದಿರಾ ಹೆಗ್ಗಡೆ

Home/Birthday/ಇಂದಿರಾ ಹೆಗ್ಗಡೆ
Loading Events

೧೪-೩-೧೯೪೯ ಯಶಸ್ವಿ ಮಹಿಳಾ ಉದ್ಯಮಿ, ಸಾಹಿತಿ, ಸಂಶೋಧಕಿ ಇಂದಿರಾ ಹೆಗ್ಗಡೆಯವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಳಿಯ ಎಳತ್ತೂರು ಗುತ್ತು ಎಂಬಲ್ಲಿ. ತಂದೆ ರಾಜುಸೆಟ್ಟಿ, ತಾಯಿ ಸಿಂಧು ಸೆಡ್ತಿ. ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಶಿಂಮತೂರಿನ ದಡ್ಡಿಕಿರೆ ಶಾಲೆ. ಹೈಸ್ಕೂಲಿಗೆ ಸೇರಿದ್ದು ಲಿಟ್ಲ್‌ಫ್ಲವರ್ ಗರ್ಲ್ಸ್ ಹೈಸ್ಕೂಲು ಕಿನ್ನಗೋಳಿಯಲ್ಲಿ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಹಾಗೂ ಕನ್ನಡ ಎಂ.ಎ. ಪದವೀಧರೆ. ಎಮ್.ಎಚ್. ಕೃಷ್ಣಾ ಇನ್‌ಸ್ಟಿಟ್ಯೂಟ್ ಮತ್ತು ಮಿಥಿಕ್ ಸೊಸೈಟಿಯಲ್ಲಿ ಓದಿದ್ದು ಇಂಡಾಲಜಿ. ಸೈನಿಕ ಎಸ್.ಆರ್.ಹೆಗ್ಗಡೆಯವರೊಡನೆ ಮದುವೆ. ಹೈದ್ರಾಬಾದ್, ಬೆಂಗಳೂರು, ಅಸ್ಸಾಂ, ಹೀಗೆ ಸುತ್ತಿ ಸುತ್ತಿ ಕಡೆಗೆ ಬಂದು ತಲುಪಿದ್ದು ಬೆಂಗಳೂರು. ಪತಿಯವರ ನಿವೃತ್ತಿ. ಒಳಗೆ ಸುಪ್ತವಾಗಿದ್ದ ಬರವಣಿಗೆಗೆ ಪ್ರಚೋದನೆ ಎಂಬಂತೆ ಸಾಹಿತ್ಯಾಸಕ್ತ, ಸದಾ ಓದಿನ ಗೀಳಿನ ಪತಿಯಿಂದಲೇ ಕಥೆ ಬರೆಯಲು ಛಾಲೆಂಜ್. ಬರೆದ ಕಥೆ ‘ನೆನಪಿನ ಕಾಣಿಕೆ’ (೧೯೮೩) ಪ್ರಕಟ. ಖುಷಿಯಿಂದ ಬರೆದದ್ದು ಹಲವಾರು. ಕೃತಿಗಳೂ ಪ್ರಕಟಿತ-ಮೋಹಿನಿಯ ಸೇಡು, ಪುರುಷರೇ ನಿಮಗೆ ನೂರು ನಮನಗಳು, ಬದುಕು (ಮೂರು ಕಥಾ ಸಂಕಲನಗಳು). ಅಮಾಯಕಿ, ಒಡಲುರಿ, ಮಂಥನ, ಬದಿ (ಕಾದಂಬರಿಗಳು). ಕಾವ್ಯಗಳ ಪುಟದಿಂದೆದ್ದು ನಿಲ್ಲು-ಕವನ ಸಂಕಲನ. ಸಂಪಾದಿತ-ಕೆಲವು ಲಲಿತ ಪ್ರಬಂಧಗಳು. ಸೈನಿಕ ಪತ್ನಿಯಾಗಿ ನೋಡಿ ಅನುಭವಿಸಿದ ಅನುಭವಾಧಾರಿತ ಕಥನ ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಕೃತಿ ಪ್ರಕಟಿತ. ಇದರ ಜೊತೆಗೆ ಮತ್ತೊಂದು ವಿಶೇಷತೆ-ಡಾಕ್ಟರೇಟ್ ಪಡೆಯದಿದ್ದರೂ ಮಾಡಿದ ಸಂಶೋಧನೆ. ಆದಿಚುಂಚನಗಿರಿ ಮಹಾಸಂಸ್ಥಾನಮಠ ಒಕ್ಕಲಿಗರ ಅಧ್ಯಯನ ಪೀಠದ ಸಂಪಾದಕ ಮಂಡಲಿ ಸದಸ್ಯೆ. ಡಾ. ಎಂ. ಚಿದಾನಂದ ಮೂರ್ತಿಯವರ ಮಾರ್ಗದರ್ಶನದಲ್ಲಿ ಮಾಡಿದ ಸ್ವತಂತ್ರ ಸಂಶೋಧನೆ. ‘ಬಂಟರ ಅಧ್ಯಯನ’. ಅವಲೋಕನ, ಪ್ರಶ್ನಾವಳಿ, ಸಂದರ್ಶನ, ಸಂಶೋಧನಾ ತಂತ್ರಗಳನ್ನು ಬಳಸಿ, ಮಾಹಿತಿ ಕ್ರೋಢೀಕರಿಸಿ ರಚಿಸಿದ ಗ್ರಂಥ ‘ಬಂಟರು-ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಕನ್ನಡ ಪುಸ್ತಕ ಪ್ರಾಕಾರದಿಂದ ಪ್ರಕಟಿತ. ಅರಸಿ ಬಂದ ಪ್ರಶಸ್ತಿಗಳು-ವಸುದೇವ ಭೂಪಾಲಂ ಪ್ರಶಸ್ತಿ, ಅಂಬರೀಷ್ ಪ್ರಶಸ್ತಿ, ‘ಬೆಳಗಾವಿ ಸಾಹಿತ್ಯ ಪುರಸ್ಕಾರ’ ಅತ್ತಿಮಬ್ಬೆ ಪುರಸ್ಕಾರ, ಅನಂತರಂಗ ಸಂಶೋಧನಾ ಪ್ರಶಸ್ತಿ, ಬೇಕಲ್ ಸಾಂತನಾಯಕ ಪ್ರತಿಷ್ಠಾನ ‘ಅಪ್ಪ ಪ್ರಶಸ್ತಿ’ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಸುಮಿತ್ರಾ. ಎಲ್.ಜಿ. – ೧೯೩೪ ಯಶೋಧರ ಭಟ್ – ೧೯೩೪ ಎಚ್.ವಿ. ನರಸಿಂಹಮೂರ್ತಿ – ೧೯೪೬ ಎನ್. ರಾಘವೇಂದ್ರ – ೧೯೫೫ ಅನಿತಾ ಹುಳಿಯಾರ್ – ೧೯೬೮ ಎಚ್.ಎಸ್. ರೇಣುಕಾ ಪ್ರಸಾದ್ – ೧೯೩೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top