ಇ.ಪಿ. ರೈಸ್‌ (ಎಡ್ವರ್ಡ್ ಪೀಟರ್ ರೈಸ್‌)

Home/Birthday/ಇ.ಪಿ. ರೈಸ್‌ (ಎಡ್ವರ್ಡ್ ಪೀಟರ್ ರೈಸ್‌)
Loading Events
This event has passed.

೨೬..೧೮೪೯ ೧೯೩೬ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅರಿಯುವ ಮೊದಲು ಕನ್ನಡ ಕವಿಗಳ ಕಾಲ, ದೇಶ, ಕೃತಿಗಳ ಬಗ್ಗೆ ತಿಳಿಯಬೇಕಾದ್ದು ಅವಶ್ಯ. ಈ ವಿವರಗಳನ್ನು ಚಾರಿತ್ರಿಕವಾಗಿ ಮೊತ್ತ ಮೊದಲು ದಾಖಲಿಸಿದವರೇ ಎಡ್ವರ್ಡ್ ಪೀಟರ್ ರೈಸ್‌. ಇವರ ‘A HISTORY OF KANARESE LITRERATURE’ ಪ್ರಕಟವಾದುದು ೧೯೧೫ ರಲ್ಲಿ. ಇ.ಪಿ. ರೈಸ್‌ ರವರು ಹುಟ್ಟಿದ್ದು ೧೮೪೯ ರ ಏಪ್ರಿಲ್‌ ೨೬ ರಂದು. ತಂದೆ ಬೆಂಜಮಿನ್‌ ಹೋಲ್ಟ್‌ ರೈಸ್‌. ಇಂಗ್ಲೆಂಡಿನಿಂದ ೧೯೩೬ ರಲ್ಲಿ ಧರ್ಮ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿ, ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಅನೇಕ ಕೃತಿಗಳನ್ನೂ ರಚಿಸಿದರು. ಇವರ ಆರು ಮಕ್ಕಳಲ್ಲಿ ಇಬ್ಬರು ಕರ್ನಾಟಕ ಚರಿತ್ರೆಗೆ ಮಹತ್ವದ ಕೊಡುಗೆ ನೀಡಿದವರು. ಒಬ್ಬರು ಶಾಸನ ಪಿತಾಮಹರೆನಿಸಿದ ಬೆಂಜಮಿನ್‌ ಲೂಯಿ ರೈಸ್‌ರವರು. ಇನ್ನೊಬ್ಬರು ಇ.ಪಿ. ರೈಸ್‌ರವರು. ಮೂರನೆಯವರು ಹೆನ್ರಿರೈಸ್‌ ಸ್ಕಾಟಿಷ್‌ ಮಿಷನ್‌ ಸಂಸ್ಥೆಯನ್ನೂ ಸೇರಿ ಉತ್ತಮ ಬೋಧಕರೆಂದು ಹೆಸರು ಪಡೆದವರು. ಇ.ಪಿ. ರೈಸ್‌ರವರು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ಧರ್ಮಪ್ರಚಾರ ಮಾಡಿದ್ದಲ್ಲದೆ ಬೈಬಲ್‌ನ ಭಾಷಾಂತರ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ, ಭಾಷೆಯ ಮೇಲಿನ ಪ್ರಭುತ್ವವನ್ನು ಪಡೆದರು. ನಂತರ ಇವರು ಇಂಗ್ಲಿಷ್‌ನಲ್ಲಿ ರಚಿಸಿದ ಕೃತಿ `A HISTORY OF KANARESE LITERATURE’ ಕೃತಿಯು ಕನ್ನಡ ಸಾಹಿತ್ಯವನ್ನೂ ಸಾಹಿತ್ಯ ಚರಿತ್ರೆಯ ಪರಿಕಲ್ಪನೆಯಲ್ಲಿ ಸಮಗ್ರವಾಗಿ ಪರಿಶೀಲಿಸಿ ರಚಿಸಿರುವ ಮೊಟ್ಟ ಮೊದಲ ಪ್ರಯತ್ನದ ಕೃತಿಯಾಗಿದೆ. ಈ ಕೃತಿಯಲ್ಲಿ ಶ್ರವಣಬೆಳಗೊಳದ ಒಂದು ಶಾಸನ, ಕವಿರಾಜ ಮಾರ್ಗದ ಪದ್ಯಗಳು, ವಚನಗಳಲ್ಲಿ-ಬಸವಣ್ಣ, ಉರಿಲಿಂಗಪೆದ್ದಿ, ಅಕ್ಕಮಹಾದೇವಿ ಮುಂತಾದವರ ರಚನೆಗಳು, ಸೋಮೇಶ್ವರ ಶತಕದ ಪದ್ಯಗಳು, ಪಂಪರಾಮಾಯಣದ ಭಾಗಗಳು, ಜೈಮಿನಿ ಭಾರತದ ಪದ್ಯಗಳು, ಹರಿದಾಸರ ಕೀರ್ತನೆಗಳಲ್ಲದೆ ತೆನಾಲಿರಾಮನ ಕತೆ ಮುಂತಾದವುಗಳೂ ಸೇರಿವೆ. ಇದಲ್ಲದೆ ತಂದೆಯವರಾದ ಬೆಂಜಮಿನ್‌ ರೈಸ್‌ರವರ ಬಗ್ಗೆ `BENJAMIN RICE OF FIFTY YEARS IN THE MASTER’S SERVICE’ ಕೃತಿಯಲ್ಲಿ ರೈಸ್‌ ಮನೆತನದ ಪೂರ್ವಿಕರು, ಅವರ ಹಿನ್ನೆಲೆ, ವಿದ್ಯಾಭ್ಯಾಸ, ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಮುಂತಾದವುಗಳನ್ನೂ ದಾಖಲಿಸಿದ್ದಾರೆ. ಇವರ ಮತ್ತೊಂದು ಪ್ರಮುಖ ಗ್ರಂಥವೆಂದರೆ ಮಹಾಭಾರತದ ಪಾತ್ರಗಳು ಕಲೆ, ಯುದ್ಧ, ಶಸ್ತ್ರಾಸ್ತ್ರ ವಿವರಗಳು, ಕಲ್ಪಯುಗಗಳು ಮುಂತಾದವುಗಳನ್ನು ವಿವರಿಸುವ ಗ್ರಂಥ ‘THE MAHABHARATHA ANALYSIS AND INDEX’. ಹೀಗೆ ಕನ್ನಡ ನಾಡು-ನುಡಿ ಸೇವೆಯಲ್ಲಿ ಹಲವಾರು ಮಂದಿ ವಿದೇಶಿಯರ ಕೊಡುಗೆಯ ಸಾಲು ಬಹುದೊಡ್ಡದೇ ಇದೆ. ತಂದೆ ಬೆಂಜಮಿನ್‌ ರೈಸ್‌ರವರ ನಿಧನದ ನಂತರ ಅವರು ಪ್ರಾರಂಭಿಸಿದ್ದ ಕಾರ್ಯಗಳನ್ನು ಮುಂದುವರೆಸಿದ್ದಲ್ಲದೆ ಕೆಲಕಾಲ ಲಂಡನ್‌ ಮಿಷನ್‌ ಹೈಸ್ಕೂಲಿನ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ ನಂತರ ೧೯೧೫ ರಲ್ಲಿ ಇಂಗ್ಲೆಂಡ್‌ಗೆ ತೆರಳಿದ ಇ.ಪಿ. ರೈಸ್‌ರು ೧೯೩೬ ರಲ್ಲಿ ಹ್ಯಾರೋ ಪಟ್ಟಣದಲ್ಲಿ ನಿಧನರಾದರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top