ಉಗ್ರಾಣ ಮಂಗೇಶರಾವ್

Home/Birthday/ಉಗ್ರಾಣ ಮಂಗೇಶರಾವ್
Loading Events

೧೫-೯-೧೮೯೩ ೧೧-೧೨-೧೯೭೩ ಉತ್ತಮ ಶಿಕ್ಷಕ, ಕವಿ, ಸಾಹಿತಿ ಮಂಗೇಶರಾಯರು ಹುಟ್ಟಿದ್ದು ಕುಂದಾಪುರದಲ್ಲಿ. ತಂದೆ ಉಗ್ರಾಣ ಶಿವರಾಯರು. ಕುಂದಾಪುರ ಮುನ್ಸೀಫ್ ಕೋರ್ಟಿನಲ್ಲಿ ಗುಮಾಸ್ತರು. ತಂದೆಯ ವೃತ್ತಿ ವರ್ಗಾವಣೆಯಿಂದ ಇವರ ಶಿಕ್ಷಣ ಉಡುಪಿ, ಕುಂದಾಪುರ, ಪುತ್ತೂರು, ಮಂಗಳೂರುಗಳಲ್ಲಿ. ಓದಿದ್ದು ಮೆಟ್ರಿಕ್‌ವರೆಗೆ. ಗಣಪತಿ ಹೈಸ್ಕೂಲಿನಲ್ಲಿ ಶಿಕ್ಷಕರ ತರಬೇತು ಪಡೆದು ಸೇಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ನೌಕರಿ ಆರಂಭ. ಇವರ ಬೋಧನಾ ಸಾಮರ್ಥ್ಯ ಮೆಚ್ಚಿದ ಪಂಜೆಯವರು ಪುತ್ತೂರಿನಲ್ಲಿ ಆರಂಭಗೊಂಡ ಸೆಕೆಂಡರಿ ಶಾಲೆಗೆ ಸೇರಲು ಪ್ರೋತ್ಸಾಹ. ೧೯೧೬ರಲ್ಲಿ ಶಾಲೆಗೆ ಸೇರಿ ೧೯೪೮ರಲ್ಲಿ ನಿವೃತ್ತಿಯವರೆಗೆ ಸಲ್ಲಿಸಿದ ಸಾರ್ಥಕ ಸೇವೆ. ಅಧ್ಯಯನ, ಅಧ್ಯಾಪನ ಋಷಿಮಾನ್ಯ ಆಜ್ಞೆಗಳೆಂಬ ಭಾವನೆಯಿಂದ ಇಳಿ ವಯಸ್ಸಿನಲ್ಲಿಯೂ ಪಾಲಿಸಿದವರು. ಹಳೆಗನ್ನಡ ಸಾಹಿತ್ಯ ಕರತಲಾಮಲಕ. ರಾಗವಾಗಿ ಓದಿ ಅರಸಿಕರಲ್ಲೂ ರಸಸ್ವಾದವನ್ನುಂಟು ಮಾಡುವ ಚಾಕಚಕ್ಯತೆ, ಇಂಗ್ಲಿಷ್‌ನಲ್ಲೂ ಪಾಂಡಿತ್ಯ. ವಿಮರ್ಶೆ ಹಾಗೂ ವಿದ್ವತ್‌ಪೂರ್ಣ ಭಾಷಣಗಳಲ್ಲಿ ಸೂರೆಗೊಂಡ ಜನಮನ. ನಾರಾಯಣ ಕವಿಯ ಉತ್ತರ ರಾಮಚರಿತೆಯ ಸಂಶೋಧನೆ. ಕೌಶಿಕ ರಾಮಾಯಣವನ್ನು ಕಾರಂತರೊಡನೆ ಸೇರಿ ಸಂಪಾದಿಸಿದರು. ಐವತ್ತು ಪದ್ಯಗಳು ಇಂಗ್ಲಿಷ್‌ನಿಂದ ಅನುವಾದ. ಮಕ್ಕಳಿಗಾಗಿ ಬರೆದ ಹಕ್ಕಿಯ ಜಗತ್ತು, ಹಾಸಿಗೆ, ಜನನ-ಮರಣ, ಬಾರೆನ್ನ ಮುದ್ದಿನ ಗಿಣಿ. ದೀರ್ಘಕವನಗಳಾದ-ಕತೆಯಲ್ಲದ ಕಥೆ, ಕುರುಡರ ಕಥೆ, ನಿದ್ದೆ, ಶಾಂತತೆ ಮೊದಲಾದ ನವೋದಯ ಕವನಗಳ ರಚನೆ. ಸಣ್ಣಕಥೆಗಳ ಆರಂಭದ ಹೆಜ್ಜೆಯ ಕಾಲದಲ್ಲಿ ಕಾಮರೂಪ, ಕನಕಾಂಗಿ, ಚಿಕ್ಕೊಡೆಯರು, ಎಚ್ಚಣ್ಣ ಮೊದಲಾದ ೧೫ ಕಥೆಗಳು. ಹೂಬರ್ಟ್ ಆರ್ಥರ್, ಸೊಹ್ರಾಬ್ ರುಸ್ತುಂ. ಮೊದಲಾದ ಏಳು ಸಂವಾದಗಳು. ಮಾರ್ಕೊಪೋಲೋ, ಟೈಟಾನಿಕ್ ಮುಳುಗತಕ್ಕದ್ದಲ್ಲ, ಮಗಳಿಗೆ ಬರೆದ ಪ್ರವಾಸದ ಓಲೆಗಳು ಮೊದಲಾದ ಪ್ರಬಂಧಗಳು. ವಿದೂಷಕ ಸಾಮ್ರಾಜ್ಯ, ಲೋಭಿ ಪ್ರಹಸನವೆಂಬ ನಾಟಕಗಳು. ಪಠ್ಯಪುಸ್ತಕವಾಗಿದ್ದ ಹಳಗನ್ನಡ ಕಾವ್ಯದ ಆಯ್ದ ಭಾಗಗಳು, ಸಾಹಿತ್ಯ ಮಣಿಮಾಲೆ, ಸಾಹಿತ್ಯ ವಿಹಾರ. ಒಂದರಿಂದ ಎಂಟನೆಯ ತರಗತಿವರೆಗೆ ಹಲವಾರು ಪಠ್ಯಗಳು. ತಾಡವಾಲೆಗಳಿಂದ ಸಂಶೋಸಿ ಪ್ರಕಟಿಸಿದ ಭರತೇಶ ವೈಭವದ ಕರ್ತೃ ರತ್ನಾಕರವರ್ಣಿ ಮೂಡಬಿದರೆಯವನೆಂದು ಸಾಬೀತು ಪಡಿಸಿದ್ದು. ಯಕ್ಷಗಾನ, ತಾಳಮದ್ದಲೆ, ಸಂಗೀತದ ಮೇಲಿದ್ದ ಆಸಕ್ತಿ. ‘ಸರ್ವೆಂಟಿಸ್ ಡಾನ್ ಕ್ವಿಕ್ಸೋಟ್’ನ ಇಂಗ್ಲಿಷ್ ಕಾದಂಬರಿ ಅನುವಾದ. ಶಿಕ್ಷಣದ ಉನ್ನತಿಗಾಗಿ ಮಾಡಿದ ತ್ಯಾಗ. ಹಲವಾರು ಕಟ್ಟಡಗಳು, ಕ್ರೀಡಾಂಗಣಗಳು, ಉಗ್ರಾಣ ಮಂಗೇಶರಾಯರಿಂದ ಆರಂಭ. ರೋಟರಿ ಸಂಸ್ಥೆಯ ಪ್ರಥಮಾಧ್ಯಕ್ಷರಾಗಿ ಸಲ್ಲಿಸಿದ ಸೇವೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸರ್.ಎಂ.ವಿ. – ೧೮೬೦-೧೪.೪.೧೯೬೨ ರೋಹಿಡಿಕರ್ – ೧೯೧೫ ಭಾಸ್ಕರ ಪಡುಬಿದ್ರಿ – ೧೯೩೯ ಸುಶೀಲ ಹೊನ್ನೇಗೌಡ – ೧೯೪೯ ಪ್ರೇಮಾ ಸಿರ್ಸೆ – ೧೯೫೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top