Loading Events

« All Events

  • This event has passed.

ಉಷಾದಾತಾರ್

September 19, 2023

೧೯.೦೯.೧೯೪೭ ಭಾರತೀಯ ಹಲವಾರು ನೃತ್ಯ ಪ್ರಕಾರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಉಷಾದಾತಾರ್‌ರವರು ಹುಟ್ಟಿದ್ದು ಬೆಂಗಳೂರು. ತಾಯಿ ಸ್ನೇಹ ಪ್ರಭಾರವರಿಂದ ಪ್ರಾರಂಭದ ನೃತ್ಯ ಶಿಕ್ಷಣ. ಹತ್ತನೆಯ ವಯಸ್ಸಿನಲ್ಲಿಯೇ ಶಿಷ್ಯವೇತನ ಪಡೆದು ಕೇರಳ ಕಲಾ ಮಂಡಲಂ ನಿಂದ ಪಡೆದ ಭರತ ನಾಟ್ಯ ಶಿಕ್ಷಣ. ಆಂಧ್ರದ ಸಂಗೀತ ಅಕಾಡೆಮಿ ಸ್ಕೂಲ್‌ನಿಂದ ಕೂಚಿಪುಡಿ ಕಲಿಕೆ. ನಟರಾಜ ರಾಮಕೃಷ್ಣ ರವರಲ್ಲಿ ದೇವಾಲಯ ನೃತ್ಯ, ಮೈಸೂರು ಜೇಜಮ್ಮ ಮತ್ತು ಡಾ. ವೆಂಕಟಲಕ್ಷಮ್ಮ ನವರಿಂದ ಅಭಿನಯ ಶಿಕ್ಷಣ. ನಾಟ್ಯಾಚಾರ‍್ಯ ಸಿ.ಆರ್‌. ಆಚಾರ್ಯ ಅವರಲ್ಲಿ ಕೂಚಿಪುಡಿ, ನೀಲಕಂಠನ್‌ರವರಿಂದ ಪೂತನ ಮೋಕ್ಷಾಭಿನಯ ಕಲಿಕೆ. ಗುರುಶಿಷ್ಯ ಪರಂಪರೆಯ ಸಾಂಪ್ರದಾಯಕ ನೃತ್ಯ ಪ್ರಕಾರವನ್ನು ಉಳಿಸಲು ವಹಿಸುತ್ತಿರುವ ಅಪಾರ ಕಾಳಜಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೃತ್ಯ ವಿಭಾಗದಲ್ಲಿ ಪ್ರೊಫೆಸರಾಗಿ ಸಲ್ಲಿಸುತ್ತಿರುವ ಸೇವೆ. ಕಾರ್ತಿಕೇಯ ಕಲಾಕೇಂದ್ರದ ಮೂಲಕ ಶಿಷ್ಯರಿಗೆ ನೀಡುತ್ತಿರುವ ತರಬೇತಿ. ದೇಶ ವಿದೇಶಗಳಲ್ಲಿ ಸುಮಾರು ೧೦೦೦ ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ೧೯೬೩-೬೪ ರಲ್ಲಿ ಇಂಡೋಚೀನಾ ಯುದ್ಧದ ಸಮಯದಲ್ಲಿ ಭಾರತ ಸೈನಿಕ ರಂಜನೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ. ದೇವಾಲಯ ನೃತ್ಯ ಪ್ರಕಾರಕ್ಕೆ ಪುನರುಜ್ಜೀವಕೊಡಲು ವಿಶ್ವೇಶ್ವರಪುರಂ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ನಡೆಸಿಕೊಟ್ಟ ದೇವಾಲಯ ನೃತ್ಯ. ಸ್ವಿಜರ್‌ಲ್ಯಾಂಡ್‌, ಜಿನಿವಾ, ಇಟಲಿ, ಪಶ್ಚಿಮ ಜರ್ಮನಿಗಳಲ್ಲಿ ನೃತ್ಯಕಾರ‍್ಯಾಗಾರ, ಪ್ರಾತ್ಯಕ್ಷತೆ, ನೃತ್ಯ ಅಭಿನಯ. ಮಸ್ಕಾಟ್‌ನಿಂದ ಬಂದ ೨೫೦ ವಿದ್ಯಾರ್ಥಿಗಳಿಗೆ ನೀಡಿದ ನೃತ್ಯ ಶಿಕ್ಷಣ. ರಾಷ್ಟ್ರಪ್ರಶಸ್ತಿ ಪಡೆದ ಕಾಡು ಕುದುರೆ ಚಲನ ಚಿತ್ರವೂ ಸೇರಿ ಹಲವಾರು ಚಲನ ಚಿತ್ರಗಳಿಗೆ ನೃತ್ಯ ಸಂಯೋಜನೆ. ದೂರದರ್ಶನದಲ್ಲೂ ಹಲವಾರು ಬಾರಿ ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಸದಸ್ಯತ್ವ. ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು ಸುಕುಮಾರ್‌ – ೧೯೫೦ ರವೀಂದ್ರ ಎನ್. – ೧೯೫೪ ಕಾಂತಾಮಣಿ – ೧೯೬೦

* * *

Details

Date:
September 19, 2023
Event Category: