Loading Events

« All Events

  • This event has passed.

ಉಷಾನವರತ್ನರಾಂ

November 23, 2023

೨೩-೧೧-೧೯೩೯ ೧-೧೦-೨೦೦೦ ಸಂಪಾದಕಿ, ಅಂಕಣಗಾರ್ತಿ, ಅಧ್ಯಾಪಕಿಯಾಗಿ ಹೆಸರು ಗಳಿಸಿದ ಉಷಾರವರು ಹುಟ್ಟಿದ್ದು ಬೆಂಗಳೂರು. ತಂದೆ  ಎಂ.ವಿ. ಸುಬ್ಬರಾವ್, ತಾಯಿ ಶಾಂತಾ. ಪ್ರಾರಂಭಿಕ ಶಿಕ್ಷಣ ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜ. ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪಡೆದ ಬಿ.ಎ. ಪದವಿ. ಪತ್ರಿಕೋದ್ಯಮದಲ್ಲಿ ಡಿಪ್ಲೊಮ. ಹುಟ್ಟಿದ ಮನೆಯಲ್ಲಿ ಸದಾ ಸಾಹಿತ್ಯದ ವಾತಾವರಣ, ವಿದ್ಯಾರ್ಥಿನಿಯಾಗಿದ್ದಾಗಲೇ ಬರೆದ ಲೇಖನಗಳು ಮೈಸಿಂಡಿಯಾದಲ್ಲಿ ಪ್ರಕಟಿತ. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿ, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿ ಕೆಲಕಾಲ. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ ೨೭ ವರ್ಷ ಸಲ್ಲಿಸಿ ಸೇವೆ. ಅನಾರೋಗ್ಯದ ನಿಮಿತ್ತ ಸ್ವಯಂ ನಿವೃತ್ತಿ. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ಮಂಡಲಿಯಲ್ಲಿ ಕಾರ್ಯ ನಿರ್ವಹಣೆ. ಪದವಿ ಜೊತೆಗೆ ಕಲಿತದ್ದು ಫ್ರೆಂಚ್ ಹಾಗೂ ಜರ್ಮನ್ ಭಾಷೆಗಳು. ಪ್ಯಾರಿಸ್ಸಿಗೆ ತೆರಳ ಬೇಕಾಗಿದ್ದ ನವರತ್ನರಾಂ ಫ್ರೆಂಚ ಕಲಿಯಲು ಉಷಾರ ಬಳಿಗೆ ಬಂದು ಗುರುವನ್ನೇ ಬಾಳಸಂಗಾತಿಯನ್ನಾಗಿ ಮಾಡಿಕೊಂಡರು. ಮದುವೆಯ ನಂತರ ಉಷಾಗೆ ಕನ್ನಡದಲ್ಲಿ ಬರೆಯಲು ಪ್ರೋತ್ಸಾಹ. ಉಷಾನವರತ್ನರಾಂರವರ ಮೊದಲ ಕಾದಂಬರಿ ‘ಹೊಂಬಿಸಿಲು.’ ಸುಧಾ ವಾರಪತ್ರಿಕೆಯಲ್ಲಿ ಪ್ರಕಟ, ಅಪಾರ ಜನಮೆಚ್ಚುಗೆ. ಬರೆದ ಕಾದಂಬರಿಗಳು ಹಲವಾರು. ಹೊಂಬಿಸಿಲು, ಬಲಿದಾನ, ಪ್ರೀತಿಸಿ ನೋಡು, ಸಮರ್ಪಣೆ, ಬಂಗಾರದ ಜಿಂಕೆ, ನಾಳೆಯು ಬರಲಿ ಚಲನಚಿತ್ರಗಳಾದ ಕಾದಂಬರಿಗಳು. ದೂರದರ್ಶನದಲ್ಲಿ ಧಾರಾವಾಹಿಯಾದ ಕೃತಿಗಳು-ಕೃಷ್ಣಾ ನೀ ಬೇಗನೆ ಬಾರೋ, ಮನೆಯೇ ಬೃಂದಾವನ, ಇಲ್ಲೇ ಸ್ವರ್ಗ, ಹೊಸರಾಗ. ಮೆಗಾ ಧಾರಾವಾಹಿಯಾಗಿ ಈಟಿವಿಯಲ್ಲಿ ಪ್ರಸಾರವಾದ ‘ನಿರಂತರ’ ಇವರ ಕಥೆಯಾಧಾರಿತ. ಹಲವಾರು ಕಥೆ ಕಾದಂಬರಿಗಳು ತಮಿಳು, ಮಲೆಯಾಳಂ, ತೆಲುಗು, ಪಂಜಾಬಿ ಭಾಷೆಗೂ ಭಾಷಾಂತರ. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಫೋಟೋ ಕಾಮಿಕ್ಸ್ ‘ಬೇಟೆ’ ಮಾದರಿಯ ಸರಣಿಯ ಪ್ರಥಮರೆಂಬ ಹೆಗ್ಗಳಿಕೆ. ಸಂಗೀತ, ನೃತ್ಯ ಉಷಾರವರ ಆಸಕ್ತಿ ವಿಷಯಗಳು. ಬೆಂಗಳೂರು ಆಕಾಶವಾಣಿಯಲ್ಲಿ ಅನೇಕ ಮಕ್ಕಳ ಕಾರ್ಯಕ್ರಮಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಡೆಸಿಕೊಟ್ಟ ಹಿರಿಮೆ. ಸಂದ ಪ್ರಶಸ್ತಿ ಗೌರವಗಳು ಹಲವಾರು. ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮನುಶ್ರೀ ಪ್ರಶಸ್ತಿ ಮುಖ್ಯವಾದುವುಗಳು. ಅರವತ್ತು ತುಂಬುವ ಮೊದಲೇ ಬದುಕಿಗೆ ವಿದಾಯ ಹೇಳಿದ್ದು ಅಕ್ಟೋಬರ್ ೧ರ ೨೦೦೦ದಂದು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕಂದಗಲ್ ಹನುಮಂತರಾಯರು – ೧೮೮೫-೧೩.೯.೬೬ ಬೆಂಗೇರಿ ಮಾಸ್ತರ – ೧೮೯೯ ಎಸ್.ಆರ್. ಚಂದ್ರ – ೧೯೧೫ ಮಂಜುಶ್ರೀ ಹೊಸಮನಿ – ೧೯೭೯

Details

Date:
November 23, 2023
Event Category: