Loading Events

« All Events

  • This event has passed.

ಎಂ.ಆರ್. ಪ್ರಭಾಕರ್

November 19

೧೯.೧೧.೧೯೪೬ ಶಾಸ್ತ್ರೀಯ ಸಂಗೀತ, ಕಾವ್ಯವಾಚನ, ಸುಗಮ ಸಂಗೀತ ಕ್ಷೇತ್ರಗಳಲ್ಲಿ ಪ್ರಖ್ಯಾತರಾಗಿರುವ ಪ್ರಭಾಕರ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಎಂ.ವಿ. ರಾಮಾಶಾಸ್ತ್ರಿ, ತಾಯಿ ಭಾಗೀರಥಮ್ಮ. ಉದ್ಯೋಗಿಯಾಗಿ ಸೇರಿದ್ದು ಭಾರತೀಯ ವಿಜ್ಞಾನ ಮಂದಿರ, ಕಲಾ ಸೇವೆಗಾಗಿ ಪಡೆದ ಸ್ವಯಂ ನಿವೃತ್ತಿ. ಒಂಬತ್ತನೇ ವಯಸ್ಸಿನಿಂದಲೇ ಸಂಗೀತಾಭ್ಯಾಸ, ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ, ಹಿಂದೂಸ್ತಾನಿ ಸಂಗೀತದಲ್ಲಿ ಪರಿಶ್ರಮ, ಗಮಕ ಕಲಾಪರಿಷತ್ತಿನ ಸೀನಿಯರ್ ತರಗತಿಗಳಿಗೆ ನೀಡುತ್ತಿರುವ ತರಬೇತಿ, ಆಕಾಶವಾಣಿಯಲ್ಲಿ ಗಮಕ ರೂಪಕಗಳ ಪ್ರಸಾರ. ಗಾಯನದಲ್ಲಿ ಕಾವ್ಯವಾಚನದ ವಿನೂತನ ಪ್ರಯೋಗದಿಂದ ಪಡೆದ ಪ್ರಶಂಸೆ. ಬೆಂಗಳೂರು, ಮೈಸೂರು ಆಕಾಶವಾಣಿ ಕೇಂದ್ರದಿಂದ ಸುಗಮ ಸಂಗೀತ ಕಾರ್ಯಕ್ರಮಗಳ ಪ್ರಸಾರ. ಹೊರರಾಜ್ಯಗಳಾದ ಕೋಲ್ಕತ್ತಾ, ಪಾಂಡಿಚೇರಿ, ಮದರಾಸುಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮ. ಸುಮಾರು ೮೦೦ ವಿದ್ಯಾರ್ಥಿಗಳಿಗೆ ನೀಡಿದ ಸುಗಮಸಂಗೀತ ತರಬೇತಿ, ಬೆಂಗಳೂರಿನ ಪ್ರತಿ ಬಡಾವಣೆಯಲ್ಲೂ ದೇವರನಾಮ, ಭಾವಗೀತೆ, ಜನಪದಗೀತೆ, ಆದಿಶಂಕರಾಚಾರ್ಯರ ಕೃತಿಗಳು, ಲಲಿತಾಸಹಸ್ರನಾಮ, ವಿಷ್ಣುಸಹಸ್ರನಾಮ ಗಾಯನ ತರಬೇತಿ, ಸೌಂದರ್ಯ ಲಹರಿ, ಶಿವಾನಂದ ಲಹರಿಗಳಿಗೆ ಮಾಡಿದ ರಾಗಸಂಯೋಜನೆ-ಧ್ವನಿಸುರಳಿಗಳ ಬಿಡುಗಡೆ. ದೆಹಲಿಯ ಕೆಂಪುಕೋಟೆಯಲ್ಲಿ ರಾಜೀವ್‌ಗಾಂಧಿ ಸಮ್ಮುಖದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ. ಕಲೆಯ ಉದ್ಧಾರಕ್ಕಾಗಿ ಸ್ಥಾಪಿತವಾಗಿರುವ ಸಂಸ್ಕಾರ ಭಾರತಿಯ ‘ಸಾಧಕರು ಹಾಗೂ ಸಂಘಟಕರು’ ಮಾಲಿಕೆ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು.   ಇದೇ ದಿನ ಹುಟ್ಟಿದ ಕಲಾವಿದರು ಮೋಹನ್ ಸಿತನೂರ್ ಎಚ್. – ೧೯೫೫

Details

Date:
November 19
Event Category: