ಎಂ.ಎನ್. ಶೇಷಗಿರಿ

Home/Birthday/ಎಂ.ಎನ್. ಶೇಷಗಿರಿ
Loading Events
This event has passed.

೨೩-೨-೧೯೩೦ ೧೫-೨-೨೦೦೫ ಹೆಸರಾಂತ ಸುಗಮ ಸಂಗೀತ ಗಾಯಕರಾದ, ದೀನನಾಥ ಮಂಜೇಶ್ವರ ಶಿಷ್ಯ ಪರಂಪರೆಯ ಶೇಷಗಿರಿಯವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ. ತಂದೆ ನಿಂಗಪ್ಪ, ತಾಯಿ ಗಂಗಮ್ಮ. ಓದಿದ್ದು ಮುಲ್ಕಿ ಪರೀಕ್ಷೆ ಮತ್ತು ಕನ್ನಡ ಜಾಣ ಪರೀಕ್ಷೆ. ಜೊತೆಗೆ ಮುಂಬಯಿಯ ಇಂಟರ್ ಮೀಡಿಯೆಟ್ ಡ್ರಾಯಿಂಗ್, ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ-ಮಾಧ್ಯಮ, ಹಿಂದೂಸ್ಥಾನಿ ಸಂಗೀತದಲ್ಲಿ ಪ್ರೊಫೆಷನಲ್ ಗ್ರೇಡ್, ಸಂಗೀತ ವಿಶಾರದ ಪದವಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪಡೆದ ಪರಿಣತಿ. ಬಡಗಿತನ, ಕರಕುಶಲ, ಮಣ್ಣಿನ ಮೂರ್ತಿಗಳ ರಚನೆ, ಚಿತ್ರಕಲೆ, ಭಜನೆ, ಸಂಗೀತ ಇವೆಲ್ಲ ಕಲೆಗಳೂ ಮನೆತನಕ್ಕೆ ಬಂದ ಬಳುವಳಿ, ಹೊಸರಿತ್ತಿಯ ನೀಲಕಂಠ ಬುವಾ, ರಾಮಬುವಾ ಮಕೋಳ ಇವರ ವಂಶ ಪರಂಪರೆಯಲ್ಲಿ ಬಂದವರು. ಉದ್ಯೋಗಕ್ಕೆ ಸೇರಿದ್ದು ೧೯೫೧ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ, ಸಂಗೀತ ಶಿಕ್ಷಕರಾಗಿ ಬಡ್ತಿ ಪಡೆದು ೧೯೮೮ರಲ್ಲಿ ಪಡೆದ ನಿವೃತ್ತಿ, ಶಾಲಾ ಶಿಕ್ಷಕರಾಗಿ ನೀಡಿದ ಸಂಗೀತ ಶಿಕ್ಷಣ. ಆಕಾಶವಾಣಿ ಧಾರವಾಡ ಕೇಂದ್ರದ ಬಿ.ಹೈ. ಕಲಾವಿದರು. ದೂರದರ್ಶನದ ಮೂಲಕ ನೀಡಿದ ಹಲವಾರು ಕಾರ್ಯಕ್ರಮಗಳು. ಹಲವಾರು ಧ್ವನಿಸುರಳಿಗಳ ಬಿಡುಗಡೆ. ಕವನ ರಚಿಸಿ ರಾಗ ಸಂಯೋಜಿಸಿದ್ದರ ಜೊತೆಗೆ ಸಂಗೀತ ಶಾಸ್ತ್ರ ಕುರಿತು ಹಲವಾರು ಪುಸ್ತಕಗಳ ರಚನೆ. ಸಂಗೀತ ಸಮ್ಮೇಳನದಲ್ಲಿ ನೀಡಿದ ಪ್ರಾತ್ಯಕ್ಷಿಕೆ. ಕನ್ನಡ ಚಿತ್ರರಂಗದ ಹಾಡುಗಾರ್ತಿ ಸಂಗೀತ ಕಟ್ಟಿ ಇವರ ಶಿಷ್ಯವರ್ಗದಲ್ಲಿ ಪ್ರಮುಖರು. ಸಂದ ಪ್ರಶಸ್ತಿಗಳು, ನಡೆಸಿಕೊಟ್ಟ ಕಾರ್ಯಕ್ರಮಗಳು ಹಲವಾರು. ಬೆಳಗಾವಿಯ ಲಿಂಗರಾಜ ಜಯಂತಿ, ಮುರುಘರಾಜೇಂದ್ರಮಠ-ಚಿತ್ರದುರ್ಗ, ಲಯನ್ಸ್ ಕ್ಲಬ್, ಕನಕ ಗುರುಪೀಠ-ಕಾಗಿನೆಲೆ, ಕನ್ನಡ ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್ತಿನ ಸಮ್ಮೇಳನ, ಪುಟ್ಟರಾಜ ಗವಾಯಿ ಕ್ಷೇತ್ರ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ಟಾಗೋರ್ ಶತಮಾನೋತ್ಸವ, ಕನಕದಾಸರ ೪ನೇ ಶತಮಾನೋತ್ಸವ, ಸಂತ ಶಿಶುನಾಳ ಪ್ರಶಸ್ತಿ, ಸಂಗೀತ ಸುಧಾಕರ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು : ಎಚ್.ಎಂ. ಚೆನ್ನಯ್ಯ – ೧೯೩೫ ರಾಜಲಕ್ಷ್ಮೀ ತಿರುನಾರಾಯಣ್ – ೧೯೩೭

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top