Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಎಂ.ಎಸ್.ಜಯಮ್ಮ – ಕಣಜ

ಎಂ.ಎಸ್.ಜಯಮ್ಮ

Home/Birthday/ಎಂ.ಎಸ್.ಜಯಮ್ಮ
Loading Events

೦೩.೦.೧೯೨೫ ೨೯.೦.೧೯೯೯ ಸಂಗೀತಕ್ಕಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಗುರುಕುಲ ಪದ್ಧತಿಯಲ್ಲಿ ಶಿಷ್ಯರನ್ನು ತಯಾರು ಮಾಡಿದ ಜಯಮ್ಮನವರು ಹುಟ್ಟಿದ್ದು ಮೈಸೂರು. ತಂದೆ ಎಂ. ಸುಬ್ಬರಾವ್, ತಾಯಿ ಸೀತಾಬಾಯಿ. ಓದಿದ್ದು ಪ್ರೌಢಶಾಲೆಯವರೆಗೆ. ತಮ್ಮ ಆರನೆಯ ವಯಸ್ಸಿನಿಂದಲೇ ಸಂಗೀತಾಭ್ಯಾಸ. ಸಂಗೀತ ವಿದುಷಿ ನೀಲಮ್ಮ ಕಡಾಂಬಿಯವರಲ್ಲಿ ವೀಣೆ ಮತ್ತು ಹಾಡುಗಾರಿಕೆಯ ಸಂಗೀತ ಶಿಕ್ಷಣ. ವೀಣೆ ಸುಬ್ಬಣ್ಣನವರ ಶಿಷ್ಯೆಯಾಗಿ ಕಲಿತ ವೀಣಾವಾದನ. ನಾಟ್ಯವಿಶಾರದೆ ಅಕ್ಕಮ್ಮಣ್ಣಿಯವರಲ್ಲಿ ಮುಂದುವರೆದ ಸಂಗೀತ ಪಾಠ. ಆಸ್ಥಾನ ವಿದ್ವಾನ್ ತಿಟ್ಟಿಕೃಷ್ಣಯ್ಯಂಗಾರ್‌ರವರಲ್ಲಿ ವೀಣೆ ಮತ್ತು ಹಾಡುಗಾರಿಕೆಯ ಪ್ರೌಢಶಿಕ್ಷಣ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿಯವರು ನಡೆಸುವ ಸಂಗೀತ ಪರೀಕ್ಷೆಯಲ್ಲಿ ವಿದ್ವಾನ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಹೆಗ್ಗಳಿಕೆ. ೧೯೫೦ ರಿಂದಲೂ ವಿದ್ಯಾರ್ಥಿಗಳಿಗೆ ನೀಡಿದ ಹಾಡುಗಾರಿಕೆ ಮತ್ತು ವೀಣಾ ಶಿಕ್ಷಣ. ಶಿವಮೊಗ್ಗ ಮತ್ತು ಚಿತ್ರದುರ್ಗದ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಂಗೀತ ಉಪನ್ಯಾಸಕಿಯಾಗಿ ಸಲ್ಲಿಸಿದ ಸೇವೆ. ಮೈಸೂರಿನ ವನಿತಾ ಸದನದಲ್ಲಿ ಸುಮಾರು ೩೦ ವರ್ಷ ಕಾಲ ಸಂಗೀತದ ಅಧ್ಯಾಪಕಿಯಾಗಿ. ತಯಾರು ಮಾಡಿದ ಶಿಷ್ಯವರ್ಗ. ಗುರುಕುಲ ಪದ್ಧತಿಯಲ್ಲೂ (ಮನೆಯಲ್ಲಿ ಶಿಷ್ಯರಿಗೆ ಅಶನ-ವಸನಗಳ ಏರ್ಪಾಡು ಮಾಡಿ) ಶಿಷ್ಯರಿಗೆ ನೀಡಿದ ಶಿಕ್ಷಣ. ವಿದ್ಯಾರ್ಥಿಗಳಿಗೆ ಸಂಗೀತ ಶಾಸ್ತ್ರದ ಬಗ್ಗೆ ಪ್ರಾತ್ಯಕ್ಷಿಗಳನ್ನು ನಡೆಸಿ ತರಬೇತುಗೊಳಿಸುತ್ತಿದ್ದುದು ಇವರ ವಿಶಿಷ್ಟ ಬೋಧನಾ ಪದ್ಧತಿ. ಇವರ ಶಿಷ್ಯರಲ್ಲಿ ಅನೇಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ  ಖ್ಯಾತಿಗಳಿಸಿದ್ದಲ್ಲದೆ ಕೆಲವರು ಸಂಗೀತವನ್ನೇ ವೃತ್ತಿಯಾಗಿಸಿಕೊಂಡು ಪಡೆದ ಪ್ರಸಿದ್ಧಿ. ಮೈಸೂರಿನ ಗಾನ ಭಾರತಿ (ವೀಣೆಶೇಷಣ್ಣ ಭವನ), ತ್ಯಾಗರಾಜ ಸಂಗೀತ ಸಭಾ, ನಾದ ಬ್ರಹ್ಮ ಸಂಗೀತ ಸಭಾ, ಬೆಂಗಳೂರಿನ ರಂಜನಿ ಸಂಗೀತ ಸಭಾ ಮುಂತಾದೆಡೆ ರಾಮೋತ್ಸವ, ಗಣೇಶೋತ್ಸವ, ಕೃಷ್ಣ ಜಯಂತಿಗಳಲ್ಲದೆ ಇತರೆ ದಿನಗಳಲ್ಲೂ ಹಲವಾರು ಬಾರಿ ಕಚೇರಿ ನಡೆಸಿ ಪಡೆದ ಖ್ಯಾತಿ. ಭಾರತೀಯ ನೃತ್ಯ ಕಲಾ ಪರಿಷತ್, ವನಿತಾ ಸದನ, ಶ್ರೀ ತ್ಯಾಗರಾಜ ಸಂಗೀತ ಸಭಾದಿಂದ, ’ವೀಣಾ ವಿದ್ಯಾಮಣಿ’ ಮುಂತಾದ ಬಿರುದು ಗೌರವಗಳೊಡನೆ ದೊರೆತ ಸನ್ಮಾನ. ಇದೇ ದಿನ ಹುಟ್ಟಿದ ಕಲಾವಿದ ಅತ್ತಿಗುಪ್ಪೆ ಕೃಷ್ಣಕುಮಾರ್‌- ೧೯೪೭.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top