
- This event has passed.
ಎಂ.ಜಿ. ಗೋಪಾಲಕೃಷ್ಣನ್
August 22
೨೨.೦೮.೧೯೫೨ ಪ್ರಸಿದ್ಧ ಮೃದಂಗ ವಿದ್ವಾಂಸರಾದ ಎಂ.ಜಿ. ಗೋಪಾಲಕೃಷ್ಣನ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಸಂಗೀತ ವಿದ್ವಾನ್ ಎಂ.ಎಸ್. ಗೋವಿಂದರಾವ್, ತಾಯಿ ಸಾವಿತ್ರಮ್ಮ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಕಾಂ. ಹಾಗೂ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿಯಿಂದ ಎಂ.ಕಾಂ. ಪದವಿ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಮೂಡಿದ ಆಸಕ್ತಿ. ಮನೆಯಲ್ಲಿ ಸಂಗೀತದ ವಾತಾವರಣ. ಹಿರಿಯ ವಿದ್ವಾಂಸರುಗಳಾದ ಎ. ರಾಜಾಚಾರ್, ಕೆ.ಎನ್. ಕೃಷ್ಣಮೂರ್ತಿ, ಕುಂಭಕೋಣಂ ಎಂ. ರಾಜಪ್ಪ ಅಯ್ಯರ್, ತಿನ್ನಿಯಂ ಕೃಷ್ಣನ್, ತಂಜಾವೂರು ರಾಮಮೂರ್ತಿ, ಎ.ವಿ. ಆನಂದ್ ಇವರಲ್ಲಿ ಕಲಿತ ಮೃದಂಗ ಶಿಕ್ಷಣ. ಜನಗಣತಿ ಕಾರ್ಯಾಲಯ, ಬೊರೂಕಾ ಸ್ಟೀಲ್ ಕಂಪನಿ, ಬಿ.ಎಚ್..ಇ.ಎಲ್- ತಿರುಚಿನಾಪಳ್ಳಿ, ಇದೀಗ ಸೀನಿಯರ್ ಆಫೀಸ್ ಸೂಪರಿಂಟೆಂಡೆಂಟ್ ಆಗಿ ಬೆಂಗಳೂರು ಬಿ.ಎಚ್.ಇ.ಎಲ್ ನಲ್ಲಿ ಸೇವೆ. ಹಲವಾರು ಸಂಗೀತೋತ್ಸವಗಳಲ್ಲಿ ಮೃದಂಗ ಕಾರ್ಯಕ್ರಮ. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್, ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್, ನಾದಜ್ಯೋತಿ ತ್ಯಾಗರಾಜ ಸಂಗೀತ ಸಭಾ, ಹಂಸಧ್ವನಿ, ರಾಗಸುಧಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ, ಮುಂಬಯಿ, ಸ್ವಾತಿ ತಿರುನಾಳ್ ಸಂಗೀತ ಸಭಾ- ತಿರುವನಂತಪುರ ಚೆನ್ನೈ ಮುಂತಾದೆಡೆ ಪ್ರಸಿದ್ಧ ಗಾಯಕರು , ಉದಯೋನ್ಮುಖರುಗಳಿಗೆ ಮತ್ತು ಮಧುರೆ ರಾಮನಾಥನ್, ಹೈದ್ರಾಬಾದ್ ಸಹೋದರಿಯರು, ನೀಲಾರಾಮಗೋಪಾಲ್, ಕದ್ರಿಗೋಪಾಲನಾಥ್, ಉಷಾರಾಮಮೂರ್ತಿ ಮುಂತಾದವರುಗಳಿಗೆ ನೀಡಿದ ಮೃದಂಗ ವಾದನ ಸಹಕಾರ. ಬಿ.ಎಚ್.ಇ.ಎಲ್. ಕನ್ನಡ ಸಂಘ ಮತ್ತು ಹಲವಾರು ಸಂಗ ಸಂಸ್ಥೆಗಳಿಂದ ಸನ್ಮಾನ. ಲಯ, ವಿನ್ಯಾಸ, ಕ್ಷಣಕ್ಷಣಮ್ ಸಂಸ್ಥೆಯ ಮೂಲಕ ಹಲವಾರು ಶಿಷ್ಯರಿಗೆ ನೀಡುತ್ತಿರುವ ಮೃದಂಗ ಶಿಕ್ಷಣ. ಇದೇ ದಿನ ಹುಟ್ಟಿದ ಕಲಾವಿದರು ಶಾರದಾ ಶೇಷಗಿರಿ – ೧೯೩೭ ನಿವಣೆಗಣೇಶಭಟ್ಟ – ೧೯೪೪
* * *