ಎಂ.ಡಿ. ಗೋಗೇರಿ

Home/Birthday/ಎಂ.ಡಿ. ಗೋಗೇರಿ
Loading Events
This event has passed.

೨೧-೧-೧೯೪೨ ಹುಟ್ಟಿದ್ದು ರೋಣ ತಾಲ್ಲೂಕು ಗೋಗೇರಿಯಲ್ಲಿ. ತಂದೆ ದಸ್ತಗೀರ ಸಾಹೇಬ, ತಾಯಿ ಅಲ್ಲಮ್ಮಾ. ಫಂಡು ಸಾಹೇಬ ಅಂಗಡಿ ಎಂಬುವರ ಗಾಂವಠಿ ಶಾಲೆಯಲ್ಲಿ  ನಾಲ್ಕನೆಯ ಇಯತ್ತೆ ಪಾಸು. ಕುರುಡಿಗಿ, ನಿಡಗುಂದಿ, ರೋಣದಲ್ಲಿ ಓದಿ ಮುಲ್ಕಿ ಪರೀಕ್ಷೆ ಪಾಸು. ಹೈಸ್ಕೂಲು ವಿದ್ಯಾಭ್ಯಾಸ ಗಜೇಂದ್ರಗಡದಲ್ಲಿ. ಹುಬ್ಬಳ್ಳಿಯಲ್ಲಿ ಟಿ.ಸಿ.ಎಚ್. ಟ್ರೈನಿಂಗ್. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಬೊಮ್ಮನ ಹಳ್ಳಿಯಲ್ಲಿ ಶಿಕ್ಷಕ ವೃತ್ತಿ ಆರಂಭ. ಸ್ವಂತ ಜಿಲ್ಲೆಯಾದ ಧಾರವಾಡ ಜಿಲ್ಲೆಯಲ್ಲೇ ಶಿಕ್ಷಕ ವೃತ್ತಿಗಾಗಿ ಹುಡುಕಾಟ. ಅದೃಷ್ಟದಿಂದ ಸಂದರ್ಶನಕ್ಕೆ ಕರೆ. ಧಾರವಾಡ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶೀರನ ಹಳ್ಳಿಯಲ್ಲಿ ಶಿಕ್ಷಕರಾಗಿ ನೇಮಕಾತಿ ಹುಕುಂ. ಇದ್ದ ಶಾಲೆ ಬಿಟ್ಟರೆ ಶಾಲೆ ಮುಚ್ಚುತ್ತಾರೆಂದು ರಜೆ ಬರೆದು ಸ್ವಂತ ಊರಿಗೆ. ನಂತರ ರಿಜಿಸ್ಟರ್ ಅಂಚೆಯ ಮೂಲಕ ರಾಜೀನಾಮೆ ಪತ್ರ ರವಾನೆ. ಬೊಮ್ಮನಹಳ್ಳಿಯ ರೂಮಿನಲ್ಲಿದ್ದ ಹಾಸಿಗೆ, ಸ್ಟೌವ್, ಬಟ್ಟೆ-ಬರೆ ದೇವರಪಾಲು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಲಿಸುತ್ತ, ಕಲಿಯುತ್ತ ಬೆಳೆದ ಸಾಹಿತ್ಯದ ಗೀಳು. ವಿದ್ಯಾರ್ಥಿಗಳಿಗೆ ಅಭಿನಯ, ಗೀತೆ, ಪ್ರಹಸನ ತರಬೇತಿ. ಆ ಶಾಲೆಯಿಂದಲೂ ಎತ್ತಂಗಡಿ. ಕಲಘಟಕಿ ತಾಲ್ಲೂಕಿನ ಮಡಕಿ ಹೊನ್ನಳ್ಳಿಗೆ ಸಹಾಯ ಶಿಕ್ಷಕರಾಗಿ ನೇಮಕಾತಿ. ಕಾವ್ಯಕೃಷಿ ಪ್ರಾರಂಭ. ಮೊಟ್ಟಮೊದಲ ಕವನ ಸಂಕಲನ ಜೀವಜೇನು ಪ್ರಕಟ. ಮತ್ತೆ ಹುಬ್ಬಳ್ಳಿಗೆ ವರ್ಗಾವಣೆ. ಬಿಡುವಿಲ್ಲದೆ ಕವಿಗೋಷ್ಠಿ, ರೇಡಿಯೋ ಕಾರ್ಯಕ್ರಮಗಳು. ಕಲಿಸುವುದರ ನಡುವೆಯೂ ಕಲಿಯುತ್ತಾ ಮೈಸೂರು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯಗಳ ಬಾಹ್ಯ ವಿದ್ಯಾರ್ಥಿ. ಎಂ.ಎ. ತೇರ್ಗಡೆ. ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚನ. ಪತ್ರಿಕೆಗಳಲ್ಲಿ ಹಾಸ್ಯ ಬರಹಗಳೂ ಪ್ರಕಟ. ಪ್ರಕಟಿತ ಪುಸ್ತಕಗಳು-ಆರು ಕವನ ಸಂಕಲನಗಳು, ಮೂರು ಮಕ್ಕಳ ಪದ್ಯಗಳು, ಮೂರು ಏಕಾಂಕ ನಾಟಕಗಳು, ಸಾಹೇಬರ ಸಿಪಾಯಿ, ನಮಸ್ಕಾರ, ಕವಿಪತ್ನಿಯರ ಸಂದರ್ಶನ ಮತ್ತು ಪುರುಷ ಶೋಷಣೆ ಮೊದಲಾದ ಹಾಸ್ಯ ಸಂಕಲನಗಳು. ‘ಹುಬ್ಬಳ್ಳಿಯಿಂದ ಹೂಬಳ್ಳಿಗೆ’ ಸ್ವಾನುಭವದ ಸಂ ಕಥನ ಪ್ರಕಟಣೆ. ಸಂದ ಪ್ರಶಸ್ತಿಗಳು-ಹುಬ್ಬಳ್ಳಿ ಮೂರು ಸಾವಿರ ಮಠ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ಹರ್ಡೇಕರ್ ಮಂಜಪ್ಪ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಜೆ.ಆರ್. ಲಕ್ಷ್ಮಣರಾವ್ – ೧೯೨೧ ಎಂ.ಎಚ್. ಬೀಳಗಿ – ೧೯೩೭ ಸರಿತಾ ಜ್ಞಾನಾನಂದ – ೧೯೪೩ ರಂಜನಾ ನಾಯಕ್ – ೧೯೪೯ ಡಿ.ಬಿ. ರಜಿಯಾ – ೧೯೫೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top