ಎಂ. ಯಾಮುನಾಚಾರ್ಯ

Home/Birthday/ಎಂ. ಯಾಮುನಾಚಾರ್ಯ
Loading Events

೩-೯-೧೮೯೯ ೪-೧-೧೯೭೦ ಸರಳತೆ, ಖಚಿತತೆಗಳನ್ನು ಮೈಗೂಡಿಸಿಕೊಂಡಿದ್ದು, ತತ್ತ್ವಶಾಸ್ತ್ರದ ಪ್ರಖ್ಯಾತ ಪ್ರಾಧ್ಯಾಪಕರಾಗಿದ್ದ ಯಮುನಾಚಾರ‍್ಯರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ನಾರಾಯಣ ಅಯ್ಯಂಗಾರ್, ತಾಯಿ ಮಾಣಿಕ್ಕಮ್ಮ. ವಿದ್ಯಾಭ್ಯಾಸವೆಲ್ಲ ಮೈಸೂರಿನಲ್ಲಿಯೇ. ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಮಹಾರಾಜಾ ಕಾಲೇಜಿನಲ್ಲಿ   ಅಧ್ಯಾಪಕರ ಹುದ್ದೆ. ನಂತರ ಹಾಸನದ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಸೂಪರಿಂಟೆಂಡೆಂಟರಾಗಿ ಅಲ್ಲಿಯೇ ನಿವೃತ್ತಿ. ಇಂಗ್ಲಿಷ್, ಕನ್ನಡ, ಸಂಸ್ಕೃತ, ತಮಿಳು ಭಾಷೆಗಳಲ್ಲಿ ಪಡೆದಿದ್ದ ಪಾಂಡಿತ್ಯ. ತರಗತಿಯಲ್ಲಲ್ಲದೆ ಸಾರ್ವಜನಿಕ ಕ್ಷೇತ್ರದಲ್ಲಿಯೂ ಒಳ್ಳೆಯ ಭಾಷಣಕಾರರು. ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸ ಮಾಲೆಯಲ್ಲಿ. ಟಿ.ಎಸ್. ವೆಂಕಣ್ಣಯ್ಯನವರು ಇವರಿಗೆ ಪ್ರೋತ್ಸಾಹ ಕೊಟ್ಟಿದ್ದೇ, ಭಾಷಣ ಅದೊಂದು ಗೀಳಿನಂತೆ ಅಂಟಿಕೊಂಡಿತಂತೆ. ಇವರಿಗೆ ವಿದೇಶ ಪ್ರವಾಸದ ಅದೃಷ್ಟ  ಖುಲಾಯಿಸಿದ್ದು, ಬೀಳ್ಕೊಡುಗೆ ಸಮಾರಂಭವೇರ‍್ಪಡಿಸಿದಾಗ ಅತಿಥಿಗಳೆಲ್ಲರೂ ಬಂದರೂ ಇವರೇ ತಡವಾಗಿ ಬಂದರಂತೆ. ಕಾರಣ- “ಸಾಕಪ್ಪ ಸಾಕು, ಭಾಷಣಕ್ಕೆ ಕರೆದಿದ್ದರು. ಅಲ್ಲಿ ಭಾಷಣ ಮಾಡಲು ನನಗೆ ಅವಕಾಶವೇ ಸಿಕ್ಕಲಿಲ್ಲ. ಏನ್ಮಾಡೋಕಾಗುತ್ತೆ ಎಂದು ಅಲವತ್ತುಕೊಂಡರಂತೆ.” ತತ್ತ್ವಶಾಸ್ತ್ರದ ಬಗ್ಗೆ ಆಸಕ್ತಿ ಇವರಿಗೆ ಅಜ್ಜ ಗೋವಿಂದಾಚಾರ‍್ಯ ಸ್ವಾಮಿಗಳಿಂದ ಬಂದ ಬಳುವಳಿ. ಪೂರ್ವಾಶ್ರಮದಲ್ಲಿ ಇವರು ಮೈಸೂರು ಸರಕಾರದ ಎಂಜನಿಯರಾಗಿದ್ದರಂತೆ. ವೈಷ್ಣವ ತತ್ತ್ವದ ಮೇಲೆ ಹಲವು ಪುಸ್ತಕಗಳನ್ನು ಬರೆದವರು. ಇವರಿಂದ ಯಮುನಾಚಾರ‍್ಯರು ಪ್ರೇರಿತರು. ಹಲವಾರು ಕೃತಿಗಳ ರಚನೆ. ಪಾಶ್ಚಾತ್ಯ ರಾಜಕೀಯ ತತ್ತ್ವಗಳು, ಆಳ್ವಾರರುಗಳು, ಆಧುನಿಕ ತರ್ಕಶಾಸ್ತ್ರ ಸಂಗ್ರಹ, ಮತಧರ್ಮ ತತ್ತ್ವಶಾಸ್ತ್ರ, ಆಚಾರ‍್ಯ ರಾಮಾನುಜಾಚಾರ್ಯ, ಸಮಾಜ ವಿಜ್ಞಾನ ಸಂಗ್ರಹ, ಮತಧರ್ಮದ ಪುನರುಜ್ಜೀವನ, ಮನುಷ್ಯನ ಮನಸ್ಸು ಮುಂತಾದ ಕೃತಿಗಳು. ಇಂಗ್ಲಿಷ್‌ನಲ್ಲಿಯೂ ತತ್ತ್ವಶಾಸ್ತ್ರಕ್ಕೆ ಸಂಬಂಸಿದ ಹಲವಾರು ಕೃತಿ ರಚನೆ. ಇವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿದ ಇಪ್ಪತ್ತು ಸಂಪುಟಗಳ ‘ಗಾಂ ಸಾಹಿತ್ಯ’ ಕನ್ನಡದಲ್ಲಿ ಗಾಂ ಸಾಹಿತ್ಯಕ್ಕೆ ಯಮುನಾಚಾರ‍್ಯರ ಬಹುದೊಡ್ಡ ಕೊಡುಗೆ. ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಸಂದರ್ಶನ ಪ್ರಾಧ್ಯಾಪಕರೆಂದು ಅಮೆರಿಕಾ ಪ್ರವಾಸ. ನಾಲ್ಕು ತಿಂಗಳ ಕಾಲ ಗಾಂ ತತ್ತ್ವವನ್ನು, ಭಾರತೀಯ ತತ್ತ್ವಶಾಸ್ತ್ರವನ್ನು ವಿದೇಶಿಯರಿಗೆ ಪರಿಚಯಿಸಿದ ಹೆಗ್ಗಳಿಕೆ. ದೆಹಲಿಯ ಗಾಂ ಪೀಸ್ ಫೌಂಡೇಶನ್ನಿನ ಅಧ್ಯಕ್ಷರಾಗಿಯೂ ಹಲವಾರು ವರ್ಷ ಸಲ್ಲಿಸಿದ ಸೇವೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಎನ್.ಎಸ್. ತಿಮ್ಮೇಗೌಡ – ೧೯೪೭ ಗೋಪಾಲಕೃಷ್ಣ ಪಿ. ನಾಯಕ್ – ೧೯೨೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top