
- This event has passed.
ಎಂ. ವಾಸುದೇವರಾವ್
October 13
೧೩.೧೦.೧೯೪೩ ಕರ್ನಾಟಕದ ಸಂಗೀತದ ಮೃದಂಗವಾದನದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಾಸುದೇವರಾವ್ ಹುಟ್ಟಿದ್ದು ಬೆಂಗಳೂರು. ತಂದೆ ಹಿಂದೂಸ್ತಾನಿ ಪ್ರಖ್ಯಾತ ಗಾಯಕರಾದ ಮ.ನ.ರಾವ್ ಮತ್ತು ತಾಯಿ ಲಕ್ಷ್ಮೀಬಾಯಿ. ಮೃದಂಗ ವಿದ್ವಾನ್ ಎಚ್.ಪುಟ್ಟಾಚಾರ್ಯರಲ್ಲಿ ಮೃದಂಗ ಶಿಕ್ಷಣ, ವಿದ್ವತ್ ಪರೀಕ್ಷೆಯಲ್ಲಿ ಗಳಿಸಿದ ಪ್ರಥಮ ರ‍್ಯಾಂಕ್. ಗಾಯನ ಮತ್ತು ಡೋಲಕ್ ವಾದನದಲ್ಲಿ ಪಡೆದ ಪರಿಣತಿ. ಮೃದಂಗವಾದನದ ಬೋಧಕರಾಗಿ ೨೫ ಕ್ಕೂ ಹೆಚ್ಚುವರ್ಷಗಳ ಅನುಭವ. ವ್ಯಾಲಿ ಸ್ಕೂಲ್, ಭಾರತೀಯ ವಿದ್ಯಾ ಭವನ, ಬೆಂಗಳೂರಿನ ದಕ್ಷಿಣ ಕೇಂದ್ರೀ ಯ ಶಾಲೆ, ವಾಣಿ ಸಂಗೀತ ಶಾಲೆ, ಜ್ಞಾನೋದಯ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೀಡಿದ ಮೃದಂಗ ಶಿಕ್ಷಣ. ಚಾಮರಾಜಪೇಟೆ ರಾಮಸೇವಾ ಮಂಡಲಿ, ಶ್ರೀಕೃಷ್ಣ ಸಂಗೀತ ಸಭಾ, ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರೀಷತ್ ತ್ಯಾಗರಾಜ ಗಾನ ಸಭಾ ಮುಂತಾದೆಡೆಗಳಲ್ಲದೆ ಹೊರ ರಾಜ್ಯಗಳಾದ ಮುಂಬಯಿ ಕೋಲ್ಕತ್ತಾ, ಭಿಲಾಯ್, ತಿರುಪತಿ ಮುಂತಾದೆಡೆ ಪ್ರಸಿದ್ಧ ಸಂಗೀತಗಾರರಿಗೆ ನೀಡಿದ ಮೃದಂಗ ವಾದನದ ಸಹಕಾರ. ಆಕಾಶವಾಣಿ ಮತ್ತು ದೂರದರ್ಶನದ ರಾಷ್ಟ್ರೀಯ ಜಾಲದಲ್ಲಿ ಕಾರ್ಯಕ್ರಮ ಪ್ರಸಾರ. ಸರಕಾರ ನಡೆಸುವ ವಿದ್ವಾತ್ ಪರೀಕ್ಷೆಯ ಪರೀಕ್ಷಕರಾಗಿ ಸಲ್ಲಿಸಿದ ಸೇವೆ. ಸಂಗೀತದ ಹಲವಾರು ಪಠ್ಯಪುಸ್ತಗಳ ಲೇಖಕರು ಮೃದಂಗವಾದನ ಕಲೆಯ ಬಗ್ಗೆ ಗಾಯನ ಗಂಗಾ ಮಾಸ ಪತ್ರಿಕೆಗೆ ಬರೆದ ಲೇಖನಗಳು. ವಿದೇಶ ಪ್ರವಾಸ ಮಾಡಿ ನೆದರ್‌ಲ್ಯಾಂಡ್ ಹಾಗೂ ಜರ್ಮನಿಯಲ್ಲಿ ನಡೆಸಿಕೊಟ್ಟ ಕಾರ್ಯಕ್ರಮ. ಬೆಂಗಳೂರು ಗಾಯನ ಸಮಾಜದಿಂದ ಕಿರಿಯರ ವಿಭಾಗದಲ್ಲಿ ಶ್ರೇಷ್ಠ ಮೃದಂಗ ಪಕ್ಕ ವಾದ್ಯಗಾರ, ಸಂಗೀತೋತ್ಸವದಲ್ಲಿ ಅತ್ಯುತ್ತಮ ಮೃದಂಗವಾದಕ, ಕರ್ನಾಟಕ ಸಂಗೀತ ನೃತ್ಯ ಆಕಾಡಮಿಯಿಂದ ಕರ್ನಾಟಕ ಕಲಾಶ್ರೀ, ಪರ್‌ಕಸಿವ್ ಆರ್ಟ್ ಸೆಂಟರಿನಿಂದ ಲಯ ಕಲಾ ನಿಪುಣ ಮುಂತಾದ ಹಲವಾರು ಗೌರವ ಪ್ರಶಸ್ತಿಗಳು. ಇದೇದಿನಹುಟ್ಟಿದಕಲಾವಿದರು ಕೃಷ್ಣಮೂರ್ತಿ ಹೆಚ್. ವಿ. – ೧೯೨೭ ವೆಂಕಟರಮಣ ಎಂ. ಎಸ್. – ೧೯೭೭
* * *