ಎಂ.ವಿ. ರಾಜಮ್ಮ

Home/Birthday/ಎಂ.ವಿ. ರಾಜಮ್ಮ
Loading Events
This event has passed.

೧೦-೦೩-೧೯೨೧ ೦೬-೦೭-೨೦೦೦ ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದೇ ಖ್ಯಾತರಾಗಿದ್ದ ಎಂ.ವಿ. ರಾಜಮ್ಮನವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿ. ತಂದೆ ಜಮೀನ್ದಾರರಾಗಿದ್ದ ನಂಜಪ್ಪ, ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಹತ್ತಿದ ಅಭಿನಯದ ಗೀಳು. ಶಾಲಾ ರಂಗಭೂಮಿಯಿಂದಲೇ ಪಡೆದ ರಂಗ ಪ್ರವೇಶ. ಶಾಲೆಯ ವಾರ್ಷಿಕೋತ್ಸವದಲ್ಲಿ ‘ಕೃಷ್ಣಲೀಲಾ’ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿದ ದಿಟ್ಟ ಹುಡುಗಿ. ಜನಮೆಚ್ಚುಗೆ ಪಡೆದ ಬಾಲನಟಿ. ಆಂಧ್ರದ ಹೆಸರಾಂತ ನಟ ವೇಮೂರಿ ಗಗ್ಗಯ್ಯನವರು ವಹಿಸುತ್ತಿದ್ದ ಯಮಧರ್ಮರಾಯ, ಕಂಸ, ಜರಾಸಂಧ, ಶಿಶುಪಾಲ, ದಕ್ಷ, ಮೈರಾವಣ ಮೊದಲಾದ ದೈತ್ಯ ಪಾತ್ರಗಳನ್ನು, ವೀರಾವೇಶದ ಅಭಿನಯವನ್ನು ನೋಡಿ ರಂಗಭೂಮಿಗೆ ಪಾದಾರ್ಪಣ. ಅಷ್ಟರಲ್ಲಿ ಮಹಮದ್ ಪೀರ್ ರವರ ಶ್ರೀ ಚಂದ್ರಕಲಾ ನಾಟಕ ಮಂಡಲಿಯಿಂದ ಬಂದ ಕರೆ. ಸಂಸಾರ ನೌಕ, ಗೌತಮಬುದ್ಧ ನಾಟಕಗಳಲ್ಲಿ ದೊರೆತ ‘ಸರಳ’ ಮತ್ತು ‘ಯಶೋಧರ’ ಪಾತ್ರಗಳ ನಿರ್ವಹಣೆ. ತಮ್ಮ ಭಾವಪ್ರಧಾನ ಅಭಿನಯದಿಂದ ಮೂಕವಾದ ರಂಗಭೂಮಿ ಪ್ರೇಕ್ಷಕವರ್ಗ. ಅಭಿನಯ ಲಾಲಿತ್ಯ, ಗೀತೆಗಳ ಮಾಧುರ್ಯ, ವೇಷಭೂಷಣಗಳಿಂದ ಜನ ಮೆಚ್ಚುಗೆ ಗಳಿಸಿ ಪಡೆದ ಶ್ರೇಷ್ಠನಟಿ ಪಟ್ಟ. ೧೯೩೬ರಲ್ಲಿ ಬಣ್ಣದ ಬದುಕಿನ ಹೊಸ ಅಧ್ಯಾಯ. ಸಂಸಾರ ನೌಕ ಚಲನಚಿತ್ರದಲ್ಲಿ ಅಭಿನಯ. ಬಿ.ಆರ್. ಪಂತುಲು, ಎಚ್.ಎಲ್.ಎನ್. ಸಿಂಹ, ಡಿಕ್ಕಿ ಮಾಧವರಾವ್, ಜಿ.ವಿ. ಕೃಷ್ಣ ಮೊದಲಾದ ಸಹನಟರ ಸ್ನೇಹ. ತಮಿಳುನಾಡಿನಲ್ಲೂ ಗಳಿಸಿದ ಕೀರ್ತಿ. ತೆಲುಗು ಚಿತ್ರ ಕೃಷ್ಣ ಜರಾಸಂಧದಲ್ಲೂ ನಟಿಯ ಪಾತ್ರ. ತಮಿಳು ಚಿತ್ರ ಯಯಾತಿಯಲ್ಲಿ ದೇವಯಾನಿಯ ಪಾತ್ರ, ಕನ್ನಡ ಚಿತ್ರಗಳಾದ ರತ್ನಗಿರಿ ರಹಸ್ಯ, ಸ್ಕೂಲ್‌ಮಾಸ್ಟರ್, ಚಿನ್ನದಗೊಂಬೆ, ಮಕ್ಕಳರಾಜ್ಯ, ಕಿತ್ತೂರು ಚೆನ್ನಮ್ಮ ಮುಂತಾದುವುಗಳಲ್ಲಿ ದೊರೆತ ಕೀರ್ತಿ. ೧೯೪೩ರಲ್ಲಿ ರಾಧಾರಮಣ ಚಿತ್ರ ನಿರ್ಮಿಸಿದ ಮೊದಲ ಮಹಿಳಾ ನಿರ್ಮಾತೃ , ಜಿ.ವಿ. ಅಯ್ಯರ್, ಬಾಲಕೃಷ್ಣ ಬೆಳಕಿಗೆ, ಸ್ಕೂಲ್‌ಮಾಸ್ಟರ್, ಕಿತ್ತೂರು ಚೆನ್ನಮ್ಮ ಅಭಿನಯಕ್ಕಾಗಿ ಸಂದ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಪದಕ ಮುಂತಾದ ಪುರಸ್ಕಾರಗಳು. ಇದೇ ದಿನ ಹುಟ್ಟಿದ ಕಲಾವಿದರು : ಎಂ.ಆರ್. ರಾಜಶೇಖರ – ೧೯೪೪ ಸಿ. ಚಂದ್ರಶೇಖರ್ – ೧೯೪೭

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top