Loading Events

« All Events

  • This event has passed.

ಎಂ.ವಿ. ಸೀತಾರಾಮಯ್ಯ

September 9, 2023

೯-೯-೧೯೧೦ ೧೨-೩-೧೯೯೦ ರಾಘವ, ಮೈ.ವೆಂ.ಸೀ. ಮುಂತಾದ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಎಂ.ವಿ.ಸೀತಾರಾಮಯ್ಯನವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ವೆಂಕಟದಾಸಪ್ಪನವರು, ತಾಯಿ ಸಾವಿತ್ರಮ್ಮ. ಶಿಕ್ಷಣವೆಲ್ಲಾ ಮೈಸೂರಿನಲ್ಲೆ-ಬನುಮಯ್ಯ ಪ್ರೌಢಶಾಲೆ, ಇಂಟರ್ ಮೀಡಿಯೆಟ್ ಕಾಲೇಜು ಮತ್ತು ಮಹಾರಾಜ ಕಾಲೇಜಿನಲ್ಲಿ. ಎಂ.ಎ. (ಕನ್ನಡ) ಪದವಿ. ದೀರ್ಘ ಕವಿತೆಗಾಗಿ ಪಡೆದದ್ದು ಬಿ.ಎಂ.ಶ್ರೀ. ಸ್ವರ್ಣಪದಕ. ಸಾಹಿತ್ಯದಷ್ಟೇ ಚಿತ್ರಕಲೆಯಲ್ಲೂ ಸಮಾನ ಆಸಕ್ತಿ. ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟಿನಲ್ಲಿ ಅರಮನೆಯ ಚಿತ್ರಕಾರರಾದ ಲಕ್ಷಣ ಕೃಷ್ಣ ಮತ್ತು ಕೆ. ವೆಂಕಟಪ್ಪನವರಿಂದ ಮಾರ್ಗದರ್ಶನ. ಸ್ನಾತಕೋತ್ತರ ಪದವಿಯ ನಂತರ ಉದ್ಯೋಗಕ್ಕಾಗಿ ಸೇರಿದ್ದು (೧೯೩೪-೩೯) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯದರ್ಶಿಯಾಗಿ. ನಂತರ (೧೯೩೯-೪೬) ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಕನ್ನಡ ನಿಘಂಟು ಕಚೇರಿಯಲ್ಲಿ ಸಹಾಯಕ ಸಂಪಾದಕರಾಗಿ, ಬೆಂಗಳೂರು ಸರಕಾರಿ ಕಾಲೇಜಿನಲ್ಲಿ (೧೯೪೬) ಕನ್ನಡ ಅಧ್ಯಾಪಕರಾಗಿ, ೧೯೬೩ರಲ್ಲಿ ರೀಡರ್ ಆಗಿ ಬಡ್ತಿ. ೧೯೬೭ರಲ್ಲಿ ನಿವೃತ್ತಿಯ ನಂತರ ಐದು ವರ್ಷಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ ಪ್ರಾಧ್ಯಾಪಕರಾಗಿ ಸಂಶೋಧನೆ ಮತ್ತು ಬೋಧನೆ. ರಚಿಸಿದ ವಿಪುಲ ಸಾಹಿತ್ಯ, ವೈವಿಧ್ಯಮಯ. ಕಾವ್ಯ-ಹಕ್ಕಿಹಾಡು, ಆ ಚಿತ್ರಗಳು ಮತ್ತು ಇತರ ಕಥನ ಕವನಗಳು, ರಾಗ, ಅಶೋಕ ಚಕ್ರ, ವಿಶ್ವಜ್ಯೋತಿ ಬಾಪು, ರಾಷ್ಟ್ರರಥ, ಗೀತಭಾರತಿ, ಹಂಸಪಥ ಮೊದಲಾದ ೧೫ ಕೃತಿಗಳು. ಮಕ್ಕಳ ಪದ್ಯಗಳು-ಹೂವಾಡಗಿತ್ತಿ, ಹಾವಾಡಿಗ, ಕೋಡಂಗಿ. ಕಥಾಸಂಕಲನ-ಶಿಲಾಮುಖ, ಯೌವನ ಸುಧೆ, ಮಾರ್ಗದರ್ಶಕ, ರತಿದೇವಿ ಮತ್ತು ಇತರ ಕಥೆಗಳು, ಕರುಣಾಲಹರಿ, ಬಿಸಿಲು ಬೆಳದಿಂಗಳು ಮುಂತಾದ ೧೦ ಕೃತಿಗಳು. ಕಾದಂಬರಿಗಳು-ಭಾಗ್ಯಲಕ್ಷ್ಮೀ, ಮಾದನ ಮಗಳು, ಜೀವನದ ಜೊತೆಗಾತಿ, ಸ್ನೇಹದ ಕಾಣಿಕೆ, ತಾಯ ಬಯಕೆ ಮೊದಲಾದ ೧೦ ಕೃತಿಗಳು. ಸಾಹಿತ್ಯ ಸಮೀಕ್ಷೆ-ಕನ್ನಡ ಜೀವನ ಚರಿತ್ರೆ, ಸಾಹಿತ್ಯ ಮತ್ತು ಚಿತ್ರಕಲೆ, ಜೈಮಿನಿ ಭಾರತ ಸಮೀಕ್ಷೆ ಮುಂತಾದ ಆರು ಕೃತಿಗಳು. ೯ ನಾಟಕಗಳು. ಪ್ರಬಂಧಗಳು-ಮುಗಿಲುಗಳು, ಹಿಡಿ ಹೂವು, ಹಿತಚಿಂತನ, ಬಾಳಿನ ಬುತ್ತಿ. ವ್ಯಕ್ತಿಚಿತ್ರ, ಕಾವ್ಯ ಮೀಮಾಂಸೆ, ಗ್ರಂಥ ಸಂಪಾದನೆ, ಶಾಸ್ತ್ರಗ್ರಂಥ, ಜೀವನ ಚರಿತ್ರೆ ಸೇರಿ ಒಟ್ಟು ೧೦೦ಕ್ಕೂ ಮಿಕ್ಕು ಕೃತಿ ಪ್ರಕಟಿತ. ಪ್ರಶಸ್ತಿ ಗೌರವಗಳು-ದೇವರಾಜ ಬಹದ್ದೂರ್ ಬಹುಮಾನ, ರಾಜ್ಯಸರಕಾರದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ ಬಹುಮಾನ, ನಿಡಿಮಾಮಿಡಿ ಶ್ರೀಗಳಿಂದ ಸ್ವರ್ಣಪದಕ ಬಹುಮಾನ, ಸ್ನೇಹಿತರು,. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಆಸ್ವಾದ.’ ಸಂಸ್ಮರಣ ಕೃತಿಗಳೂ ಪ್ರಕಟಿತ.   ಇದೇ ದಿನ ಹುಟ್ಟಿದ ಸಾಹಿತಿಗಳು : ಶೇಖರ್ ಇಡ್ಕ – ೧೯೩೩ ಜ್ಯೋತಿ ಹೊಸೂರ – ೧೯೩೭ ಪದ್ಮಜೆ. ಕೆ. ಆರ್. – ೧೯೪೪ ಬಿ.ಆರ್. ಲಕ್ಷ್ಮಣರಾವ್ – ೧೯೪೬

Details

Date:
September 9, 2023
Event Category: