Loading Events

« All Events

  • This event has passed.

ಎಂ. ಸುಬ್ಬರಾಯರು

October 22, 2023

೨೨೧೦೧೯೦೨ ೧೧೧೯೭೫ ಕನ್ನಡ ರಂಗಭೂಮಿಯಲ್ಲಿ ಅಭಿನವ ಶಿಖಾಮಣಿ ಎನಿಸಿದ್ದ ಸುಬ್ಬರಾಯರು ಹುಟ್ಟಿದ್ದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮೂಕನ ಹಳ್ಳಿಯಲ್ಲಿ. ತಂದೆ ರಾಮಣ್ಣ, ತಾಯಿ ಅಚ್ಚಮ್ಮ. ಹುಟ್ಟಿದ ಹನ್ನೊಂದೇ ತಿಂಗಳಿನಲ್ಲೇ ತಾಯಿಯ ಪ್ರೀತಿಯಿಂದ ವಂಚಿತರು. ಓದಿದ್ದು ಮೂಕನಹಳ್ಳಿ ಗ್ರಾಂಟ್‌ಸ್ಕೂಲ್, ಗುಬ್ಬಿ ವೆಸ್ಲಿಯನ್‌ ಮಿಷನ್‌ ಸ್ಕೂಲ್‌. ಬಾಲ್ಯದಿಂದಲೇ ಸಂಗೀತದಲ್ಲಿ ಅಭಿರುಚಿ, ಇವರು ದೇವರನಾಮ ಹಾಡಿದರೆ ತಂದೆಯ ಪಿಟೀಲು ಸಹವಾದನ. ಶಾಲೆಯಲ್ಲಿ ನಡೆದ ಪ್ರಹ್ಲಾದ ಚರಿತ್ರೆ ನಾಟಕದಲ್ಲಿ ಪ್ರಹ್ಲಾದನ ಪಾತ್ರದಿಂದ ರಂಗಭೂಮಿ ಪ್ರವೇಶ. ಗುಬ್ಬಿ ಚಂದಣ್ಣನವರ ನಾಟಕ ಕಂಪನಿಗಾಗಿ ಸ್ನೇಹಿತರನ್ನೆಲ್ಲಾ ಸೇರಿಸಿಕೊಂಡು ಮಾಡಿದ ಪ್ರಹ್ಲಾದ ಚರಿತ್ರೆ. ಜಿ.ಎಚ್‌. ವೀರಣ್ಣನವರ ಹಾರ‍್ಮೋನಿಯಂ ವಾದನ. ಗುಬ್ಬಿ ಕಂಪನಿಯ ಸದಾರಮೆ ನಾಟಕದಲ್ಲಿ ದೊರೆತ ರಾಜಕುಮಾರನ ಪಾತ್ರ. ಬೆಳ್ಳಾವೆ ನರಹರಿ ಶಾಸ್ತ್ರಿಗಳಿಂದ ರಚಿತವಾದ ಶ್ರೀಕೃಷ್ಣ ಲೀಲಾ, ಕಂಸವಧಾ, ಯವಗರ್ವಭಂಗ, ರುಕ್ಮಿಣಿ ಸ್ವಯಂವರ ಮೊದಲಾದ ನಾಟಕಗಳಲ್ಲಿ ಪ್ರಮುಖ ಪಾತ್ರ. ರುಕ್ಮಿಣಿ ಸ್ವಯಂವರದ ಕೃಷ್ಣ ಪಾತ್ರದಿಂದ ಪ್ರೇಕ್ಷಕರಿಂದ ದೊರೆತ ಪ್ರಶಂಸೆ. ಸೋದರಮಾವ ನಟಭಯಂಕರ ಗಂಗಾಧರರಾಯರಿಂದ ಸಂಭಾಷಣೆಯ ವೈಖರಿ, ಸಿ.ಬಿ. ಮಲ್ಲಪ್ಪನವರಿಂದ ವೇಷಭೂಷಣ, ಜಿ. ನಾಗೇಶರಾಯರಿಂದ ಕಲಿತ ಹಾಡುಗಾರಿಕೆ, ಭಾರತ ಜನಮನೋಲ್ಲಾಸಿನಿ ನಾಟಕಸಭಾ ಸೇರಿದಾಗ ದೊರೆತ ವೈವಿಧ್ಯಮಯ ಪಾತ್ರ. ವೀರಸಿಂಹ ಚರಿತ್ರೆಯಲ್ಲಿ ರಾಣಿಪಾತ್ರದಿಂದ ದೊರೆತ ಯಶಸ್ಸಿನಿಂದ ದ್ರೌಪದಿ, ಕಯಾದು, ಚಂದ್ರಮತಿ, ಶಾಕುಂತಲಾ, ಚಾರುಮತಿ ಮುಂತಾದ ಪಾತ್ರಗಳ ನಿರ್ವಹಣೆಯಿಂದ ದೊರೆತ ಹೆಸರು. ಸ್ತ್ರೀ ಪಾತ್ರಗಳಲ್ಲಿ ಕಯಾದು ಪಾತ್ರ ಅಪಾರಕೀರ್ತಿ ತಂದ ಪಾತ್ರ. ಪ್ರಹ್ಲಾದನ ನಾಟಕ ನೋಡಿದ ಟಿ.ಪಿ.ಕೈಲಾಸಂ ಮೆಚ್ಚಿ ತಮ್ಮ ಕೈಯಲ್ಲಿದ್ದ ಚಿನ್ನದ ಉಂಗುರವನ್ನೇ ರಂಗದ ಮೇಲೆ ಹೋಗಿ ನಟರಿಗೆ ನೀಡಿದ ಉಡುಗೊರೆ. ಐದು ದಶಕಗಳ ಕಾಲ ರಂಗಭೂಮಿಯಲ್ಲಿ ವೀರಪಾತ್ರಧಾರಿ, ರಾಣಿಪಾತ್ರವಹಿಸಿ ಕಲಾಸೇವೆಯಲ್ಲಿದ್ದಾಗಲೇ ರಂಗದಿಂದ ನಿರ್ಗಮನ.   ಇದೇದಿನಹುಟ್ಟಿದಕಲಾವಿದರು ಶ್ರೀನಿವಾಸರಾವ್ ತಾವರಗೇರಿ – ೧೯೩೦ ಮುರಳೀಧರ  ಎಂ. – ೧೯೫೭

* * *

Details

Date:
October 22, 2023
Event Category: