Loading Events

« All Events

  • This event has passed.

ಎಚ್. ಆರ್. ರಂಗಸ್ವಾಮಿ

October 1, 2023

೧೦೧೯೩೩ ಉತ್ತಮನಟ, ಅತ್ಯುತ್ತಮ ವ್ಯವಸ್ಥಾಪಕರೆನಿಸಿದ್ದ ರಂಗಸ್ವಾಮಿ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಹೊಳಲು ಗ್ರಾಮದಲ್ಲಿ. ತಂದೆ ರಾಮಯ್ಯ, ತಾಯಿ ಭಾಗೀರಥಮ್ಮ. ಮಗ ಸರಕಾರಿ ಕೆಲಸಕ್ಕೆ ಸೇರಬೇಕೆಂಬುದು ತಂದೆಯ ಆಸೆ. ಮಗನಿಗೆ ರಂಗಭೂಮಿಯ ಸೆಳೆತ. ಪ್ರಸಿದ್ಧ ಕಲಾವಿದರಾಗಿದ್ದ ರೊಳ್ಳೆ ವೆಂಕಟಾಚಲಯ್ಯನವರೇ ಇವರ ಗುರು. ನಾಟ್ಯಕಲಾ ಎ.ಎನ್‌. ಶೇಷಾಚಾರ್ಯರ ಶೇಷಕಮಲ ಮಂಡಲಿಯಲ್ಲಿ ಬಣ್ಣದ ಬದುಕು ಆರಂಭ. ಅಭಿನವ ಭಕ್ತಶಿರೋಮಣಿ ಸಿ.ಬಿ. ಮಲ್ಲಪ್ಪನವರ ಕಂಪನಿಯಲ್ಲಿ ಪೌರಾಣಿಕ ಪಾತ್ರಗಳು, ಎಂ.ಸಿ. ಮಹಾದೇವ ಸ್ವಾಮಿಯವರ ಕನ್ನಡ ಥಿಯೇಟರ್ಸ್‌ನಲ್ಲಿ ದೊರೆತ ರಾಜಾ ವಿಕ್ರಮ, ಚಂದ್ರಹಾಸ, ನಾಟಕಗಳಲ್ಲಿ ದುರ್ಜಯ ಮತ್ತು ಸೋಮಯಾಜಿ ಪಾತ್ರನಿರ್ವಹಣೆಯಿಂದ ದೊರೆತ ಪ್ರಸಿದ್ಧಿ. ಆಗಾಗ್ಗೆ ಕಂಪನಿ ಕಟ್ಟಿ ನಾಟಕಗಳನ್ನಾಡಿಸುವುದೇ ರಂಗಸ್ವಾಮಿ ಪ್ರವೃತ್ತಿ. ಇತರರ ಬಂಡವಾಳದ ಮೇಲೆ ಆಡಳಿತ ನಡೆಸುತ್ತಿದ್ದರೂ ಕಟ್ಟಿದ ಕಂಪನಿಗಳು ಅಲ್ಪಾಯುಷಿ. ಹಲವಾರು ವರ್ಷ ಅಲೆಮಾರಿ ಜೀವನ. ಕಡೆಗೆ ಸೇರಿದ್ದು ಹಿರಣ್ಣಯ್ಯ ಮಿತ್ರಮಂಡಲಿ. ದೊರೆತ ಪೂರ್ಣಸ್ವಾತಂತ್ರ್ಯ. ದೊಡ್ಡ ದೊಡ್ಡ ಪಾತ್ರಗಳ ನಟನೆಗೆ ಅವಕಾಶ. ಹಿರಣ್ಣಯ್ಯ ಮಿತ್ರಮಂಡಲಿಯ ಭ್ರಷ್ಟಾಚಾರ ನಾಟಕದ ಪೊಲೀಸ್‌ಇನ್ಸ್‌ಪೆಕ್ಟರನ ಪಾತ್ರ, ಬಹುದೊಡ್ಡ ಹೆಸರು ತಂದು ಕೊಟ್ಟ ಪಾತ್ರ. ಸತ್ಯ, ನ್ಯಾಯ ಎಂದು ನಂಬಿದ್ದ ಮಗನೇ ಭ್ರಷ್ಟಾಚಾರಿ ತಂದೆಗೆ ಕೋಳ ತೊಡಿಸುವ ದೃಶ್ಯದ ಸೊಗಸಾದ ಅಭಿನಯದಿಂದ ಪ್ರೇಕ್ಷಕರಿಂದ ದೊರೆತ ಅಪಾರ ಮೆಚ್ಚುಗೆ. ಲಂಚಾವತಾರದ ಗುಮಾಸ್ತೆ ರಾಮಣ್ಣ, ಅನಾಚಾರದ ಬಂಗಲೆ ಭೀಮಯ್ಯ ರಂಗಸ್ವಾಮಿಗೆ ಕೀರ್ತಿ ತಂದುಕೊಟ್ಟ ಪಾತ್ರಗಳು. ಮದುವೆಯಾದ ಒಂದೆರಡು ವರ್ಷದಲ್ಲೇ, ಅತಿ ಕಿರಿಯ ವಯಸ್ಸಿನಲ್ಲೇ ಜೀವನ ರಂಗಭೂಮಿಯಿಂದ ನಿರ್ಗಮನ.   ಇದೇದಿನಹುಟ್ಟಿದಕಲಾವಿದರು: ನಾಗವೇಣಿ ನಂಜುಂಡಸ್ವಾಮಿ – ೧೯೪೭ ಹನುಮಂತಸಿಂಗ್‌ ಹಾನಗಲ್‌- ೧೯೪೮ ರಾಮಕೃಷ್ಣ ಎನ್.ಕೆ. – ೧೯೫೧ ವೇಣುಗೋಪಾಲ್‌ಎಂ.ಕೆ. – ೧೯೬೧ ಕಾಶಪ್ಪ ಡಿ.ಎಚ್. – ೧೯೭೩

* * *

Details

Date:
October 1, 2023
Event Category: