ಎಚ್.ಜಿ. ದತ್ತಾತ್ರೇಯ

Home/Birthday/ಎಚ್.ಜಿ. ದತ್ತಾತ್ರೇಯ
Loading Events
This event has passed.

೨೦.೦೪.೧೯೪೨ ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಹಿರಿತೆರೆಗಳಲ್ಲಿ ತಮ್ಮ ನಟನೆಯಿಂದ ಪ್ರಖ್ಯಾತರಾಗಿರುವ ’ದತ್ತಣ್ಣ’ರವರು ಹುಟ್ಟಿದ್ದು ಚಿತ್ರದುರ್ಗ. ತಂದೆ ಹರಿಹರ ಗುಂಡೂರಾಯರು, ತಾಯಿ ವೆಂಕಮ್ಮ. ಓದಿದ್ದು ಎಂಜನಿಯರಿಂಗ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಪಡೆದ ಎಂ.ಇ.ಪದವಿ. ಭಾರತ ಸರಕಾರದಿಂದ ಪಡೆದ ಪ್ರತಿಭಾ ವಿದ್ಯಾರ್ಥಿ ವೇತನ. ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್‌ ಆಗಿ, ಹಿಂದೂಸ್ತಾನ್ ಏರೋನಾಟಿಕ್ಸ್‌ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ, ಅಲ್ಲಿನ ಸ್ಟಾಫ್ ಕಾಲೇಜಿನ ಪ್ರಾಂಶುಪಾಲರಾಗಿ ಸಲ್ಲಿಸಿದ ಸೇವೆ. ಮಾಧ್ಯಮಿಕ ಶಾಲೆಯಿಂದಲೇ ಹತ್ತಿದ ನಾಟಕದ ಗೀಳು. ಅಕ್ಕಪಕ್ಕದ ಹುಡುಗರನ್ನು ಸೇರಿಸಿ ಮಾಡಿದ ಸೊಹ್ರಾಬ್-ರುಸ್ತುಂ ನಾಟಕ. ತುಮಕೂರಿನ ಪ್ರೌಢಶಾಲೆಯ ನಾಟಕದಲ್ಲಿ ಮದಕರಿ ನಾಯಕನ ಪಾತ್ರ. ಚಿತ್ರದುರ್ಗಕ್ಕೆ ಬರುತ್ತಿದ್ದ ಜಮಖಂಡಿ ಕಂಪನಿ, ಗುಬ್ಬಿ ಕಂಪನಿ ನಾಟಕಗಳ ಪ್ರಭಾವ. ಚಿತ್ರದುರ್ಗದ ಪ್ರೌಢ ಶಾಲೆಯಲ್ಲಿ ಅಳಿಯ ದೇವರು ನಾಟಕದಲ್ಲಿ ರುಕ್ಕುಪಾತ್ರ, ದುರ್ಗದ ಹವ್ಯಾಸಿ ತಂಡ ಅಭಿನಯಿಸಿದ ದೇವದಾಸಿ ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ, ಬೆಂಗಳೂರಿನ ಅಂತರ ಕಾಲೇಜು ನಾಟಕ ಸ್ಪರ್ಧೆ ಉಲ್ಲಾಳ್ ಫೀಲ್ಡ್‌ಗಾಗಿ ಡನ್‌ಲಪ್ ಗರ್ಲ್ ನಲ್ಲೂ ಹೆಣ್ಣು ಪಾತ್ರ. ಹೀಗೆ ಮೊದಲು ಸಿಕ್ಕಿದ್ದು ಹೆಣ್ಣು ಪಾತ್ರಗಳೇ! ಏರ್‌ ಫೋರ್ಸ್ ಅಡ್ಮಿನಿಸ್ಟ್ರೇಟಿವ್ ಕಾಲೇಜಿನಲ್ಲಿ ಅಭಿನಯಿಸಿದ ಅಂಬಾಸಿಡರ್‌ ಪಾತ್ರಕ್ಕೆ ದೊರೆತ ಪ್ರಶಂಸೆ. ದೆಹಲಿಯ ಕನ್ನಡ ಭಾರತಿ ಸಂಸ್ಥೆಯಲ್ಲಿ ಬಿ.ವಿ.ಕಾರಂತರ ನಹಿ ನಹಿ ರಕ್ಷತಿ, ಸಿಕ್ಕು, ಎಚ್ಚಮನಾಯಕ, ನಾನೇ ಬಿಜ್ಜಳ ನಾಟಕದಲ್ಲಿ ಬಿಜ್ಜಳದ ಪಾತ್ರ ಬಹಳ ಖ್ಯಾತಿ ತಂದು ಕೊಟ್ಟ ಪಾತ್ರ. ಹಲವಾರು ಗಣ್ಯರ ಅಪೇಕ್ಷೆಯ ಮೇರೆಗೆ ಮರು ಪ್ರದರ್ಶನಗೊಂಡ ನಾಟಕ, ’ನಾನೇ ಬಿಜ್ಜಳ’. ಎಂ.ಎಸ್.ಸತ್ಯು ರವರ ’ಕುರಿ’ನಾಟಕಕ್ಕೆ ನೇಪಥ್ಯದಲ್ಲಿ ಪ್ರಮುಖಪಾತ್ರ. ಬೆಂಗಳೂರಿನಲ್ಲಿ ಸುಧೀಂದ್ರರವರ ಮಳೆ ನಿಲ್ಲುವವರೆಗೂ, ಸಮುದಾಯದ ಕೊಂದುಕೂಗಿತ್ತು ನೋಡಾ, ಸಂಕ್ರಾಂತಿ, ರುಡಾಲಿ, ಈ ಮುಖದವರು, ಪುರುಷ್, ಹಾವು ಏಣಿ, ರಕ್ತ ಕಲ್ಯಾಣ್, ನೆರಳು, ಸಿಂಗಾರವ್ವ ಮತ್ತು ಅರಮನೆ. ಕುರುಕ್ಷೇತ್ರದಿಂದ ಕಾರ್ಗಿಲ್ ವರೆಗೆ ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರದಿಂದ ಬಂದ ಪ್ರಸಿದ್ಧಿ. ಇವರು ಅಭಿನಯಿಸಿದ ಹಲವಾರು ಚಲನಚಿತ್ರಗಳಿಗೆ ರಾಜ್ಯ, ರಾಷ್ಟ್ರಪ್ರಶಸ್ತಿ, ಮುನ್ನುಡಿ, ಮೌನಿ ರಾಷ್ಟ್ರ ಪ್ರಶಸ್ತಿ ಗಳಿಸಿದರೆ, ಆ ಸ್ಫೋಟ, ಮುನ್ನುಡಿಗೆ ರಾಜ್ಯ ಪ್ರಶಸ್ತಿ, ಅಮೆರಿಕಾ ಅಮೆರಿಕಾಕ್ಕೆ ಆರ್ಯಭಟ ಪ್ರಶಸ್ತಿ, ಚಲನ ಚಿತ್ರ ಪ್ರೇಮಿಗಳ ಸಂಘದ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಇತರ ಚಲನಚಿತ್ರಗಳು ಹೂಮಳೆ. ಚಿನ್ನಾರಿಮುತ್ತ, ಮೈಸೂರು ಮಲ್ಲಿಗೆ, ತುತ್ತೂರಿ, ಕ್ರೌರ್ಯ, ತೆಲುಗು-ತಿಲದಾನಂ, ಮಲಯಾಳಂ-ಅತೀತಂ, ಹಿಂದಿ-ದೂಸ್ರಾ, ಇಂಗ್ಲಿಷ್ Arranged Marriage ಮುಂತಾದವುಗಳು ಸೇರಿ  ೯೫ ಕ್ಕೂ ಮಿಕ್ಕು ಚಲನಚಿತ್ರಗಳಲ್ಲಿ ಅಭಿನಯ.   ಇದೇದಿನಹುಟ್ಟಿದಕಲಾವಿದರು: ರಾಮಸ್ವಾಮಿ. ಎಚ್.ಟಿ – ೧೯೨೪ ಪುಂಚಿತ್ತಾಯ .ವಿ.ಎಸ್. – ೧೯೪೨ ವಿ.ಕೃಷ್ಣಮೂರ್ತಿ – ೧೯೪೦ ವಸಂತ ಮಾಧವಿ – ೧೯೪೭ ಮುರಳಿ.ಎ.-೧೯೬೧

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top