ಎಚ್. ಯೋಗಾನರಸಿಂಹಂ

Home/Birthday/ಎಚ್. ಯೋಗಾನರಸಿಂಹಂ
Loading Events

೧೭..೧೮೯೭ ..೧೯೭೧ ಕರ್ನಾಟಕ ಸಂಗೀತದ ವಾಗ್ಗೇಯಕಾರರಾದ ಯೋಗನರಸಿಂಹಂ  ರವರು ಹುಟ್ಟಿದ್ದು ಕೋಲಾರದಲ್ಲಿ. ತಂದೆ ಹೊಳೆ ನರಸೀಪುರದ ನಾರಣಪ್ಪನವರು, ತಾಯಿ ಲಕ್ಷ್ಮೀದೇವಮ್ಮ. ಓದಿದ್ದು ಮೈಸೂರಿನಲ್ಲಿ ಮಹಾರಾಜಾ ಕಾಲೇಜಿನಿಂದ ಬಿ.ಎ. ಪದವಿ, ೧೯೨೧ ರಲ್ಲಿ ಚಿನ್ನದ ಪದಕದೊಡನೆ ಪಡೆದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಮೈಸೂರಿನ ವಿದ್ಯಾ ಇಲಾಖೆಯಲ್ಲಿ ಸಂಸ್ಕೃತ ಶಾಲಾ ಇನ್‌ಸ್ಪೆಕ್ಟರಾಗಿ, ಸಂಸ್ಕೃತ ಪಾಠಶಾಲೆ, ಬೆಂಗಳೂರಿನ ಸಂಸ್ಕೃತ ಪಾಠಶಾಲೆಯ ಪ್ರಿನ್ಸಿಪಾಲರಾಗಿ ಸೇವೆ. ಬಿ.ಟಿ. ಪದವಿಯ ನಂತರ ನಂಜನಗೂಡು, ದಾವಣಗೆರೆ, ತೀರ್ಥಹಳ್ಳಿ, ಕೋಲಾರ ಮುಂತಾದೆಡೆ ಹೈಸ್ಕೂಲು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಬೆಳೆದದ್ದು ಸಂಗೀತದ ವಾತಾವರಣ. ತಾಯಿ ಒಳ್ಳೆಯ ಗಾಯಕಿ. ನಿಂತಾಗ, ಕುಳಿತಾಗ, ಕೆಲಸ ಮಾಡುತ್ತಿದ್ದಾಗ ಹಾಡುತ್ತಿದ್ದ ಹಾಡುಗಳನ್ನು ಗಮನಿಸಿ ಕಲಿತದ್ದೇ ಜಾಸ್ತಿ. ಮೈಸೂರಿನಲ್ಲಿ ಸಂಗೀತಕ್ಕೆ ದೊರೆಗಳಿಂದ ದೊರೆತ ಪ್ರೋತ್ಸಾಹದ ಫಲವಾಗಿ ಪ್ರಾರಂಭವಾದ ಸಂಗೀತ ಶಾಲೆಯಲ್ಲಿ ಸಂಗೀತ ಕಲಿಕೆ. ವೀಣೆ ಶೇಷಣ್ಣ, ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ, ಕೆ. ವಾಸುದೇವಾಚಾರ್ಯ ಮುಂತಾದವರಿಂದ ಸಂಗೀತ ಶಿಕ್ಷಣವನ್ನು ನೋಡಿ ಕಲಿತವರು. ಗುರುಮುಖೇನ ಪಾಠವಾಗಿಲ್ಲದಿದ್ದರೂ ಬಿಡಾರಂ ಕೃಷ್ಣಪ್ಪನವರು ಹಾಡುತ್ತಿದ್ದ ಕೃತಿಗಳನ್ನು ಸ್ವರ ಸಹಿತ ಬರೆದಿಟ್ಟುಕೊಂಡು ಸ್ವತಃ ಕಲಿತ ಸಂಗೀತ. ಸಂಗೀತ ಶಾಸ್ತ್ರ ಗ್ರಂಥಗಳನ್ನು ಓದಿದ್ದು ಅಪಾರ. ಅಂದಿನ ಸಂಗೀತ ದಿಗ್ಗಜರಾದ ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ, ಎನ್. ಚನ್ನಕೇಶವಯ್ಯ, ಬಿ.ಕೆ. ಪದ್ಮನಾಭಯ್ಯ ಮುಂತಾದವರ ಮನೆಗಳಲ್ಲಿ ವಾರಕ್ಕೊಮ್ಮೆ ನಡೆಸಿಕೊಡುತ್ತಿದ್ದ ಭಜನಾ ಕಾರ್ಯಕ್ರಮ. ಧನಾರ್ಜನೆಯ ಆಸೆ ಇಲ್ಲದೆ ಸ್ವ-ಸಂತೋಷಕ್ಕಾಗಿ, ಸ್ವಾನುಭವ, ಆತ್ಮೋನ್ನತಿಗಾಗಿ ಕಲಿತ ಸಂಗೀತ. ಹೆಚ್ಚಾಗಿ ಕಚೇರಿ ಮಾಡದಿದ್ದರೂ ನೆಂಟರಿಷ್ಟರ ಮನೆಯ ಸಮಾರಂಭಗಳಲ್ಲಿ, ಅಪೇಕ್ಷೆ ಪಟ್ಟವರ ಎದುರಿನಲ್ಲಿ ಹಾಡಿದ್ದೇ ಹೆಚ್ಚು. ಬೆಂಗಳೂರು ಆಕಾಶವಾಣಿಯಲ್ಲಿ ನಡೆಸಿಕೊಟ್ಟ ಕೆಲವು. ಕಾರ್ಯಕ್ರಮಗಳು. ಸಂಗೀತ ಸಂಸ್ಕೃತದಲ್ಲಿ ಪಾಂಡಿತ್ಯವಿದ್ದುದರಿಂದ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ. ನಿರ್ದೇಶಿಸಿದ್ದು ಶಾಕುಂತಲ ನಾಟಕ. ಸಂಗೀತ ರೂಪಕಗಳು – ಓಂಕಾರ ಪಂಜರ ಶುಕೀಂ, ಶಾಮಲ ದಂಡಕ, ನಾದಬ್ರಹ್ಮ ಮುಂತಾದುವು. ಸಂಗೀತ ಕಲಿಸಲು ಪ್ರಾರಂಭಿಸಿದ್ದು ಸಂಗೀತ ಕಲಾಭಿವರ್ಧಿನಿ ಸಭಾ. ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಹಲವಾರು ಸಂಗೀತ ಕೃತಿಗಳ ರಚನೆ. ಸಮಗ್ರ ರಚನೆಗಳ ಪುಸ್ತಕ ’ಗೀತಕುಸುಮಾಂಜಲಿ’ ಹಲವಾರು ಹಾಡುಗಳ ಧ್ವನಿ ಮುದ್ರಿಕೆ, ಕ್ಯಾಸೆಟ್ ಬಿಡುಗಡೆ. ’ಸಂಗೀತ ಸಿರಿ ಎಚ್.ಯೋಗಾನರಸಿಂಹಂ’ ಪುಸ್ತಕವನ್ನು ವಿ. ಸೀ. ಸಂಪದ ಹೊರತಂದಿದೆ.   ಇದೇ ದಿನ ಹುಟ್ಟಿದ ಕಲಾವಿದರು ಎಸ್.ರಾಮಮೂರ್ತಿ – ೧೯೩೪ ಜಂಬು ಕಣ್ಣನ್ – ೧೯೩೪ ಉತ್ತರಾಚಾರ್ಯ  – ೧೯೩೫ ಕಾವೇರಿ ಶ್ರೀಧರ್‌ – ೧೯೪೬ ರಾಜಗೋಪಾಲ್ ಕಲ್ಲೂರಕರ – ೧೯೬೫.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top