Loading Events

« All Events

  • This event has passed.

ಎಚ್. ರಾಮಚಂದ್ರಶಾಸ್ತ್ರಿ

November 2, 2023

೨-೧೧-೧೯೦೫ ೧೯-೧೨-೧೯೭೬ ಷಹಜಹಾನ್ ನಾಟಕದಲ್ಲಿ ದಿಲ್‌ದಾರನ ಪಾತ್ರವಹಿಸಿ ‘ದಿಲ್‌ದಾರ್ ಶಾಸ್ತ್ರಿ’ ಎಂದೇ ಪ್ರಖ್ಯಾತರಾಗಿದ್ದ ರಾಮಚಂದ್ರಶಾಸ್ತ್ರಿಗಳು ಹುಟ್ಟಿದ್ದು ಪಾಂಡವಪುರ ತಾಲ್ಲೂಕಿನ ಹಳೇಬೀಡು ಗ್ರಾಮದಲ್ಲಿ. ತಂದೆ ಎಚ್. ಕೃಷ್ಣಶಾಸ್ತ್ರಿ, ತಾಯಿ ಸಾವಿತ್ರಮ್ಮ, ಮೈಸೂರಿನ ಶಾರದಾ ವಿಲಾಸ ಹೈಸ್ಕೂಲಿನಲ್ಲಿ ವ್ಯಾಸಂಗ. ವಿದ್ಯೆಗೆ ವಿದಾಯ, ಉದ್ಯೋಗಕ್ಕೆ ಸೇರಿದ್ದು ರೈಲ್ವೆ ವರ್ಕ್‌ಷಾಪಿನಲ್ಲಿ. ನಾಟಕಾಭಿನಯದಲ್ಲಿ ಅಭಿರುಚಿ, ಹೈಸ್ಕೂಲು ಸ್ನೇಹಿತರನ್ನೆಲ್ಲಾ ಸೇರಿಸಿ ‘ಕವಿರತ್ನ ಕಾಳಿದಾಸ’ ನಾಟಕ ಅಭ್ಯಾಸಮಾಡಿ, ಎ.ವಿ. ವರದಾಚಾರ್ಯರಿಂದ ಉಚಿತವಾಗಿ ಪಡೆದ ಥಿಯೇಟರ್‌ನಲ್ಲಿ ಪ್ರದರ್ಶಿಸಿದ ನಾಟಕ. ಸಂಗೀತ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ ಸೇರಿ ಭೂ ಕೈಲಾಸ, ಭಕ್ತ ಅಂಬರೀಷ, ವಸಂತ ಸೇನಾ, ಕಬೀರ್, ಸಂಪೂರ್ಣ ರಾಮಾಯಣ ನಾಟಕಗಳಲ್ಲಿ ಅಭಿನಯ, ಸಂಪೂರ್ಣ ರಾಮಾಯಣದ ದಶರಥನ ಪಾತ್ರ ಹೆಸರು ತಂದುಕೊಟ್ಟ ನಾಟಕ. ನಟ ಭಯಂಕರ ಎಂ.ಎನ್. ಗಂಗಾಧರ್, ತ್ರಿಯಂಭಕ ಶಾಸ್ತ್ರಿಗಳ ಭಾರತಜನ ಮನೋಲ್ಲಾಸಿನಿ ನಾಟಕ ಸಭಾ ಸೇರಿ ಹಲವಾರು ನಾಟಕಗಳಲ್ಲಿ ಅಭಿನಯ. ಪೀರ್ ಸಾಹೇಬರ ಕಂಪನಿಯಲ್ಲಿ ಹೆಸರಾಂತ ನಾಟಕಗಳಾದ ಪ್ರಹ್ಲಾದ ಚರಿತ್ರೆ, ಕಂಸವಧೆ ಮುಂತಾದ ನಾಟಕಗಳಲ್ಲಿ ದೈತ್ಯನ ಪಾತ್ರಧಾರಿಯಾಗಿ ಪಡೆದ ಅಪಾರ ಜನಮಚ್ಚುಗೆ ಗೌತಮಬುದ್ಧ ನಾಟಕದ ಚೆನ್ನ, ಷಹಜಹಾನ್ ನಾಟಕದ ದಿಲ್ವಾರ್, ಸಂಸಾರನೌಕಾದ ಸಿದ್ಧ, ಎಚ್ಚಮನಾಯಕದ ಸಿದ್ಧಾಂತಿ ಪಾತ್ರಗಳು ರಂಗಭೂಮಿಯಲ್ಲಿ ಚಿರಸ್ಥಾಯಿಗೊಳಿಸಿದ ಪಾತ್ರಗಳು. ಸುಬ್ಬಯ್ಯನಾಯ್ಡು ರವರ ಭಕ್ತ ಅಂಬರೀಷ ಮತ್ತು ಜೀವಕಣ್, ವೇದವತಿ (ತಮಿಳು), ಗುಬ್ಬಿವೀರಣ್ಣನವರ ಸುಭದ್ರ ಕನ್ನಡ ಚಿತ್ರ, ಕೃಷ್ಣಪ್ರೇಮ (ತೆಲುಗು) ಮುಂತಾದ ಚಲನಚಿತ್ರಗಳು ಸೇರಿ ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಪಡೆದ ಕೀರ್ತಿ. ೧೯೬೮ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಯೂ ಸೇರಿ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು ಎಚ್.ಕೆ. ರಾಮಸ್ವಾಮಿ – ೧೯೨೨

Details

Date:
November 2, 2023
Event Category: