
- This event has passed.
ಎನ್ಕೆ ಕುಲಕರ್ಣಿ
August 29
೨೯-೮-೧೯೧೩ ೨೩-೪-೨೦೦೫ ಸಾಹಿತ್ಯವಲಯದಲ್ಲಿ ಎನ್ಕೆ ಎಂದು ಪ್ರಸಿದ್ಧರಾಗಿದ್ದು, ಧಾರವಾಡದ ಮಂದಿಗೆ ಪ್ರೀತಿಯ ನಾನೀಕಾಕ ಆಗಿದ್ದ ಎನ್ಕೆ ಕುಲಕರ್ಣಿಯವರು ಹುಟ್ಟಿದ್ದು ಗದಗದಲ್ಲಿ. ತಂದೆ ಕೃಷ್ಣರಾವ್ ನರಸಿಂಹ ಕುಲಕರ್ಣಿ, ತಾಯಿ ಸೋನಕ್ಕ. ಪ್ರಾರಂಭಿಕ ಶಿಕ್ಷಣ ಗದಗ, ಕುಮಟಾ, ಹಳಿಯಾಳಗಳಲ್ಲಿ. ಗದಗದ ಮುನಿಸಿಪಲ್ ಹೈಸ್ಕೂಲಿನಿಂದ ಮೆಟ್ರಿಕ್ಯುಲೇಷನ್, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ., ಎಂ.ಎ. ಪದವಿ. ಬೆಳಗಾವಿಯ ಟೀಚರ್ಸ್ ಕಾಲೇಜಿನಿಂದ ಬಿ.ಟಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಗದಗದ ಸಮಿತಿ ಹೈಸ್ಕೂಲಿನ ಶಿಕ್ಷಕರಾಗಿ. ನಂತರ ಕೆ.ಇ. ಬೋರ್ಡ್ ಹೈಸ್ಕೂಲು. ಮುಂಬಯಿ AIRನ ಶಾಲಾ ಪ್ರಸಾರದಲ್ಲಿ ಪ್ರಥಮ ಭಾಷಣ ಪ್ರಸಾರ. ಇದೇ ಮುಂಬೈ ಆಕಾಶವಾಣಿ ನಿಲಯದ ಉದ್ಯೋಗಕ್ಕೆ ಸಿಕ್ಕ ಪ್ರವೇಶ. ಕನ್ನಡ ಸ್ಟಾಫ್ ಆರ್ಟಿಸ್ಟ್ ಆಗಿ ನೇಮಕ. ಹಲವಾರು ವರ್ಷ ಸೇವೆ. ಚಲನಚಿತ್ರಗಳಿಗೂ ಸಂಭಾಷಣೆ, ಕಥೆ ರಚನೆ. ನಂತರ ಧಾರವಾಡ, ಬೆಂಗಳೂರಿನ ಆಕಾಶವಾಣಿಯಲ್ಲಿ ಪ್ರೋಗ್ರ್ಯಾಂ ಎಕ್ಸಿಕ್ಯುಟಿವ್ ಹುದ್ದೆ. ಹಲವಾರು ಹಾಸ್ಯ ಪ್ರಹಸನ, ಕಾದಂಬರಿ, ನಗೆಲೇಖನಗಳ ಸಂಕಲನ ಪ್ರಕಟಣೆ. ನಡುಮನೆಯಲ್ಲಿ ಬೆಳ್ಳಿಹಬ್ಬ, ಅಧಃಪಾತ, ಸುಧಾರಿಸಿದ ಕಳ್ಳ, ಮುಂತಾದ ೨೦ಕ್ಕೂ ಹೆಚ್ಚು ಏಕಾಂಕ, ರೇಡಿಯೋ, ದೊಡ್ಡ ನಾಟಕಗಳು. ಹರಟೆಗಳು-ಮುಂಗಾಲ್ ಪುಟಿಗೆ, ತ್ರಿಶೂಲಿಗಳು, ಎನ್ಕೆ ಬರಹಗಳು, ಮೋಡಕಾ ಬಜಾರ್, ಇದು ಬೆಂಗಳೂರು, ಎನ್ಕೆ ಲಲಿತ ಪ್ರಬಂಧಗಳು. ಲೇಖನ ಸಂಗ್ರಹ-ಎನ್ಕೇನ ಪ್ರಕಾರೇಣ. ಕಾವ್ಯ-ಗಾಳಿಗೀತ. ನಿರೂಪಣೆ-ನನ್ನ ಬದುಕಿನ ಹಾಡು (ಗಂಗೂಬಾಯಿ ಹಾನಗಲ್). ಕಾದಂಬರಿಗಳು-ಸಾವಿನ ಉಡಿಯಲ್ಲಿ, ಎರಡನೆಯ ಸಂಬಂಧ, ವೈನಿ, ಕಲೋಪಜೀವಿ, ಗೌರಿಶಂಕರ, ಮೂರು ತಲೆಮಾರು, ಲಲಿತಾ, ವಿಧುರ ವೈರಾಗ್ಯ, ದತ್ತು ಮಾಸ್ತರ, ಸೋನಕ್ಕ ಮುಂತಾದುವು. ಜೀವನ ಚರಿತ್ರೆ-ವಾಮನರಾವ ಮಾಸ್ತರ, ಗರೂಡ ಸದಾಶಿವರಾಯರು, ಬಂಕಿಮ ಚಂದ್ರರು, ಸಾವಿರದ ಕವಿ ಬೇಂದ್ರೆ ಮುಂತಾದ ೧೫ ಕೃತಿಗಳು. ವಿಮರ್ಶೆ, ಇತರ, ಅಪ್ರಕಟಿತ ಕೃತಿ ಸೇರಿ ೯೦ ಹೆಚ್ಚು ರಚನೆಗಳು. ಅರಸಿ ಬಂದ ಪ್ರಶಸ್ತಿ. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕೇಂದ್ರ ಸರಕಾರದ ಬಹುಮಾನ, ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಪ್ರೊ.ಸ.ಸ. ಮಾಳವಾಡ ಪ್ರಶಸ್ತಿ, ಮೂರು ಸಾವಿರ ಮಠ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್. ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ‘ನಾನೀ.’ ಇದೇ ದಿನ ಹುಟ್ಟಿದ ಸಾಹಿತಿ : ಗುರುದೇವಿ ಹಿರೇಮಠ – ೧೯೧೫-೩.೧೧.೯೦