ಎನ್.ಬಿ. ಜಯಪ್ರಕಾಶ್ (ಜೆ.ಪಿ.)

Home/Birthday/ಎನ್.ಬಿ. ಜಯಪ್ರಕಾಶ್ (ಜೆ.ಪಿ.)
Loading Events

೨೦.೦೫.೧೯೫೦ ಹಾಸ್ಯಪಾತ್ರಗಳಲ್ಲಿ ತಮ್ಮದೆ ಆದ ವಿಶಿಷ್ಟ ಛಾಪು ಮೂಡಿಸಿ ರಂಗಭೂಮಿ, ದೂರದರ್ಶನ, ಚಲನಚಿತ್ರಗಳ ಪಾತ್ರಧಾರಿಯಾದ ಜಯಪ್ರಕಾಶ್‌ ರವರು ಹುಟ್ಟಿದ್ದು ಬೆಂಗಳೂರು. ತಂದೆ ಎಸ್. ಬಸವಯ್ಯ ಮಹಂತರಮಠ, ತಾಯಿ ಭ್ರಮರಾಂಬಿಕ. ಓದಿದ್ದು ಬಿ.ಎಸ್ಸಿ. ಶಾಲಾ ಕಾಲೇಜು ದಿನಗಳಿಂದಲೂ ನಾಟಕದ ಬಗ್ಗೆ ಬೆಳೆದ ಆಸಕ್ತಿ. ಉದ್ಯೋಗಕ್ಕಾಗಿ ಸೇರಿದ್ದು ಎನ್. ಜಿ. ಇ. ಎಫ್. ಕಾರ್ಖಾನೆ. ೨೨ ವರ್ಷಗಳು ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಇದೀಗ ಪೂರ್ಣಾವಧಿಯ ರಂಗ ಚಟುವಟಿಕೆಗಳಲ್ಲಿ ಭಾಗಿ. ಸಾಮಾಜಿಕ ಪರಿವರ್ತನೆಗಾಗಿ ಹಲವಾರು ನಾಟಕಗಳನ್ನು ರಂಗದ ಮೇಲೆ ತಂದುದಷ್ಟೇ ಅಲ್ಲದೆ ಕಾರ್ಯತಃ ಸಾಮಾಜಿಕ ಪರಿವರ್ತನೆಗೆ ಪ್ರಾರಂಭಿಸಿದ ಸಂಸ್ಥೆ ’ಪರಿವರ್ತನ’ದ ಸಕ್ರಿಯ ಕಾರ್ಯಕರ್ತ. ’ಯಶಸ್ವಿ ಕಲಾವಿದರು’ ನಾಟಕ ಸಂಸ್ಥೆಯ ಜನಪ್ರಿಯನಾಟಕ ’ಸಂಸಾರದಲ್ಲಿ ಸರಿಗಮ’ ಹಾಸ್ಯ ನಾಟಕದಲ್ಲಿ ಪ್ರಮುಖ ಪಾತ್ರ, ದಿ. ಉದಯಕುಮಾರ್‌ರವರು ಕನಕದಾಸ ಮಿತ್ರ ಮಂಡಲಿ ವೃತ್ತ ನಾಟಕ ಸಂಸ್ಥೆಗಾಗಿ ರಚಿಸಿದ್ದ ’ಭಕ್ತ ಕನಕದಾಸ’ ಐತಿಹಾಸಿಕ ನಾಟಕದಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಹಾಸ್ಯ ಪಾತ್ರ ನಿರ್ವಹಣೆ. ಆಕಾಶವಾಣಿ ಕಾರ್ಯಕ್ರಮಗಳಾದ ನಾಟಕ. ಚಲನಚಿತ್ರ ಗೀತೆಗಳ ನಂದನ ಕಾರ್ಯಕ್ರಮಗಳಲ್ಲಿ ಭಾಗಿ. ರಂಗಭೂಮಿಯಲ್ಲಿ ಅಭಿನಯಿಸಿದ ನಾಟಕಗಳು ಹಲವಾರು. ೩೬ ಅಲ್ಲ ೬೩, ತ್ರಿಮೂರ್ತಿ, ಎದುರು ಮನೆ ಯಶೋದ, ಹಲೋ ಡಾರ್ಲಿಂಗ್, ಭಾರತೀಪುರ, ಹಳ್ಳಿಚಿತ್ರ, ನರ್ಸ್‌ ಡಾಕ್ಟರ್‌ ಪರ್ಸು, ಇವಳ್ನಬಿಟ್, ಇವಳ್ನ ಬಿಟ್‌, ಇವಳ್ಯಾರು. ಸಸ್ಪೆನ್‌ಷನ್, ಉದ್ಯೋಗಂ ಪುರುಷ ಲಕ್ಷಣಂ, ಮೊಂಡಗಂಡ- ತುಂಟ ಹೆಂಡ್ತಿ ಇವರ ನಟನೆಗೆ ಖ್ಯಾತಿ ತಂದ ನಾಟಕಗಳು. ನನ್ಹೆಂಡ್ತಿ ಮಗು ಮತ್ತು ಅಮ್ಮಾವ್ರಗಂಡ ಧ್ವನಿಸುರುಳಿ ಬಿಡುಗಡೆ. ಪರಿವರ್ತನ ಸಂಸ್ಥೆ ನಿರ್ಮಿಸಿದ, ರಾಷ್ಟ್ರೀಯ ಮತ್ತು ರಾಜ್ಯಪ್ರಶಸ್ತಿ ವಿಜೇತ ’ಹೂಮಳೆ’ ಚಲನಚಿತ್ರ ಮತ್ತು ಧಾರಾವಾಹಿಗಳಾದ ಹೊಸ ಬದುಕು, ಭಕ್ತಕನಕದಾಸ, ಸರಸ-ವಿರಸ, ಹೆಂಡ್ತಿ-ಹೆಂಡ್ತೀನೆ, ಬದಲಾವಣೆ, ಕಾಡು, ಮನಸ್ಸೆಲ್ಲಾ ಅವಳೇ ಮುಂತಾದ ನೂರಾರು ಧಾರಾವಾಹಿಗಳ ನಟನಾಗಿ ಪಡೆದ ಖ್ಯಾತಿ. ರಂಗಭೂಮಿಯ ಎಲ್ಲಾ ರಂಗ ತಂಡಗಳ ಬೇಡಿಕೆಯ ಹಾಸ್ಯನಟ. ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಹಾಸ್ಯನಟ, ಚಿತ್ರಪ್ರೇಮಿಗಳ ಸಂಘದಿಂದ ಶ್ರೇಷ್ಠ ಹಾಸ್ಯನಟ, ಆರ್ಯಭಟ ಪ್ರಶಸ್ತಿ, ’ಶ್‌’ ಚಿತ್ರದಲ್ಲಿ ಶ್ರೇಷ್ಟ ಹಾಸ್ಯನಟ ಪ್ರಶಸ್ತಿ, ದೂರದರ್ಶನ, ಸಾಂಸ್ಕೃತಿಕ ಸಂಘ, ಹಲವಾರು ರಂಗ ನಾಟಕ ಸಂಸ್ಥೆಗಳಿಂದ ಪಡೆದ ಶ್ರೇಷ್ಠ ಹಾಸ್ಯ ನಟ ಪ್ರಶಸ್ತಿ. ಇದೇ ದಿನ ಹುಟ್ಟಿದ ಕಲಾವಿದರು ಎಂ.ಜೆ. ಶ್ರೀನಿವಾಸ ಅಯ್ಯಂಗಾರ್‌ – ೧೯೨೪ ಕೇಶವ ಗುರಂ – ೧೯೩೧ ಶಿವಲಿಂಗಪ್ಪ ಎಸ್.ಬಿ. – ೧೯೪೪ ನಾಗಚಂದ್ರ – ೧೯೫೨ ರಘು.ಟಿ. – ೧೯೫೯.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top