ಎನ್. ಮರಿಶಾಮಾಚಾರ್

Home/Birthday/ಎನ್. ಮರಿಶಾಮಾಚಾರ್
Loading Events
This event has passed.

೧೫.೦೫.೧೯೫೧ ಕಲೆಯ ಹಲವು ಪ್ರಕಾರಗಳಾದ ಕಲಾ ಬರಹ, ಕಲಾ ಇತಿಹಾಸ, ಕಲಾ ಸಂಘಟನೆ ಮುಂತಾದುವುಗಳಲ್ಲಿ ತೊಡಗಿಸಿಕೊಂಡಿರುವ ಮರಿಶಾಮಾಚಾರ್‌ರವರು ಹುಟ್ಟಿದ್ದು ದೇವನಹಳ್ಳಿಯ ಬಳಿಯ ವಿಜಯಪುರದಲ್ಲಿ. ತಂದೆ ಸಿ.ಎಂ. ನಂಜುಂಡಾಚಾರ್‌, ತಾಯಿ ಲಿಂಗಮ್ಮ. ಕೆನ್‌ ಕಲಾ ಶಾಲೆಯಿಂದ ಪ್ರಥಮ ರ‍್ಯಾಂಕ್‌ನೊಡನೆ ಪಡೆದ ಡಿಪ್ಲೊಮ. ದ್ವಿತೀಯ ರ‍್ಯಾಂಕ್‌ನಲ್ಲಿ ಆರ್ಟ್ಸ್‌‌ಮಾಸ್ಟರ್‌ ಪದವಿ. ಬರೋಡದಲ್ಲಿ ಕೆ.ಜಿ.ಸುಬ್ರಹ್ಮಣ್ಯ ರವರಲ್ಲಿ ಚಿತ್ರಕಲೆಯ ಉನ್ನತ ಶಿಕ್ಷಣ. ರಾಜ್ಯ ಲಲಿತಕಲಾ ಅಕಾಡಮಿ, ಎಂ.ಎಸ್.ಐ.ಎಲ್. ನೆಹರು ಶತಮಾನೋತ್ಸವ, ದಕ್ಷಿಣ ಭಾರತ ವಲಯ ಸಾಂಸ್ಕೃತಿಕ ಕೇಂದ್ರ, ಚೆನ್ನೈ ಸೇರಿದಂತೆ ಹಲವಾರು ಕಲಾ ಶಿಬಿರಗಳಲ್ಲಿ ಭಾಗಿ. ಅಭಿವ್ಯಕ್ತಿ ವೇದಿಕೆ, ‌ಪ್ರಾಚ್ಯ ಸಂಶೋಧನಾ ಇಲಾಖೆ, ರಿದಮ್, ಕರ್ನಾಟಕ ಲಲಿತ ಕಲಾ ಅಕಾಡಮಿ, ರಾಜ್ಯ ಸಮಕಾಲೀನ ಕಲಾವಿದರು, ಅಖಿಲ ಭಾರತ ಗ್ರಾಫಿಕ್ಸ್, ಚೆನ್ನೈ, ದೆಹಲಿ, ಅಹಮದಾಬಾದ್, ತಿರುವನಂತಪುರ, ಹೈದರಾಬಾದ್, ಜಿಕಣಿ, ಬಿಯನೆಲ್ ಕಲಾ ಸಂಬಂಧಿ ಸುಮಾರು ೧೭ ಪುಸ್ತಕಗಳ ರಚನೆ. ಕನ್ನಡ ಮತ್ತು ಸಂಸ್ಕೃತ ಇಲಾಖೆಯಲ್ಲಿ ಹಲವಾರು ಹುದ್ದೆಗಳ ಜವಾಬ್ದಾರಿಯುತ ಕಾರ್ಯ. ಕರ್ನಾಟಕ ಶಿಲ್ಪಕಲಾ ಅಕಾಡಮಿಯ ರಿಜಿಸ್ಟ್ರಾರ್‌ ಆಗಿ, ದೆಹಲಿಯ ರಾಷ್ಟ್ರೀಯ ಲಲಿತಕಲಾ ಅಕಾಡಮಿ ಸದಸ್ಯರಾಗಿ, ಚೆನ್ನೈನ ಲಲಿತ ಕಲಾ ಅಕಾಡೆಮಿಯ ರೀಜಿನಲ್ ಸೆಂಟರ್‌ನ ಸದಸ್ಯರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯ ಕಲಾ ವಿಭಾಗದ ಸಲಹಾ ಸಮಿತಿಯ ಸದಸ್ಯರಾಗಿ ಸಲ್ಲಿಸಿದ ಸೇವೆ. ಸರಕಾರದ ಹಲವಾರು ಕಲಾವಿಭಾಗಗಳ ನಿರ್ವಹಣೆಯ ಜವಾಬ್ದಾರಿ. ಕಲಾಪರವಾದ ಚಟುವಟಿಕೆಗಳಲ್ಲಿ ಸದಾ ಭಾಗಿ. ಕಲಾ ಕೃತಿ ರಚನೆ – ಭಾರತಾದ್ಯಂತ ಸಂಚಾರ. ಸಂದ ಪ್ರಶಸ್ತಿಗಳು ಹಲವಾರು. ಅಖಿಲ ಭಾರತ ಕಲಾ ಪ್ರದರ್ಶನದಲ್ಲಿ ದೆಹಲಿಯ ಐಆರ್‌ಡಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸೃಜನಶೀಲ ಪುಸ್ತಕಕ್ಕೆ ಲಲಿತಕಲಾ ಅಕಾಡಮಿ ಪ್ರಶಸ್ತಿ, ಭಾರತೀಯ ಕಲೆ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಉತ್ತಮ ಪುಸ್ತಕ ವಿನ್ಯಾಸಕ್ಕೆ ಪ್ರಾಧಿಕಾರದಿಂದ ಎರಡು ಭಾರಿ, ಫೆಡರೇಷನ್ ಆಫ್‌ ಇಂಡಿಯಾ ಪಬ್ಲಿಷರ್‌ನಿಂದ ಪ್ರಶಸ್ತಿ. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುವರ್ಣ ಕರ್ನಾಟಕ ವಿಶೇಷ ಘಟಕ, ವಿಶ್ವ ಕನ್ನಡ ಸಮ್ಮೇಳನ, ಶತಮಾನೋತ್ಸವ, ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದ ಕಾರ್ಯಗಳಲ್ಲಿ ಪ್ರಮುಖ ಪಾತ್ರ. ಇದೇ ದಿನ ಹುಟ್ಟಿದ ಕಲಾವಿದರು ಬಿ.ಎ.ಎಸ್.ಮಣಿ – ೧೯೪೧ ಶಿವರುದ್ರಯ್ಯ. ಕೆ. – ೧೯೫೨ ರಾಧಿಕ ರಂಜನಿ – ೧೯೬೬ ದೀಪ ನರಸಿಂಹನ್ – ೧೯೭೫

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top