೮.೬.೧೯೧೮ ೧.೧.೧೯೯೧ ತಂದೆ ಮಹಾಕಾವ್ಯಗಳನ್ನು ರಚಿಸಿದರೆ, ಈ ಕಾವ್ಯಗಳಿಗೆ ದೃಶ್ಯ ರೂಪ ನೀಡಿದ ಶ್ರೀಕಂಠಶಾಸ್ತ್ರಿ ಕುಕ್ಕೆಯವರು ಹುಟ್ಟಿದ್ದು ಶಿವಮೊಗ್ಗದಲ್ಲಿ. ತಂದೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು, ತಾಯಿ ಸಂಕಮ್ಮ. ಶಾಲೆಯಲ್ಲಿ ಉಪಾಧ್ಯಾಯರು ಪಾಠಮಾಡುತ್ತಿದ್ದರೆ ಅವರ ಚಿತ್ರವನ್ನೇ ಬಿಡಿಸುತ್ತಾ ಕುಳಿತಿದ್ದ ವಿದ್ಯಾರ್ಥಿಗೆ ಪ್ರಶ್ನೆ ಕೇಳಿದ್ದು ಕೇಳಲ್ಲಿಲ್ಲ. ಉತ್ತರ ಹೇಳದಿದ್ದಾಗ ನಾಗರಬೆತ್ತದ ಏಟಿನ ರುಚಿ. ಹುಡುಗನೂ ಬೆತ್ತ ಕಿತ್ತುಕೊಂಡು ಉಪಾಧ್ಯಾಯರಿಗೇ ನೀಡಿದ ಬೆತ್ತದ ತಿರುಗೇಟು – ಶಾಲೆಯಿಂದ ಉಚ್ಛಾಟನೆ. ಶ್ರೀಕಂಠಶಾಸ್ತ್ರಿ ಬರೆಯುತ್ತಿದ್ದ ಚಿತ್ರಗಳನ್ನು ನೋಡಿದ ಚಿತ್ರಕಲಾ ಶಿಕ್ಷಕರಾದ ರಾಮಕೃಷ್ಣರವರಿಂದ ಪ್ರಶಂಸೆ. ಮದರಾಸಿನ ಲೋಯರ್ ಆರ್ಟ್ಸ್ ಪರೀಕ್ಷೆಯಲ್ಲಿ ಮತ್ತು ಹೈಯರ್ ಆರ್ಟ್ಸ್ ಪರೀಕ್ಷೆಯಲ್ಲಿ ಪಡೆದ ಪ್ರಥಮ ಶ್ರೇಣಿ. ಮೈಸೂರಿನ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ದೊರೆತ ಕ್ರಾಫ್ಟ್ಸ್ಮನ್ ಹುದ್ದೆ. ಸರಿ ಎನಿಸದೆ ಅದನ್ನು ತೊರೆದು ಶಿವಮೊಗ್ಗೆಯಲ್ಲಿ ತೆರೆದ ಫೋಟೋ ಸ್ಟುಡಿಯೋ. ಮದುವೆಯ ನಂತರ ಬೆಂಗಳೂರಿಗೆ. ಬೆಂಗಳೂರಿನಲ್ಲಿ ಕುಕ್ಕೆ ಬ್ರದರ್ಸ್ ಹೆಸರಿನಲ್ಲಿ ತೆರೆದ ಫೋಟೋ ಸ್ಟುಡಿಯೋ. ಹೊನ್ನಪ್ಪ ಭಾಗವತರ ಸಂಪರ್ಕಕ್ಕೆ ಬಂದು ಮಹಾಕವಿ ಕಾಳಿದಾಸ ಮತ್ತು ಕು. ರಾ. ಸೀತಾರಾಮ ಶಾಸ್ತ್ರಿಗಳ ಸಂಪರ್ಕದಿಂದ ಕೈವಾರ ಮಹಾತ್ಮೆ ಚಲನಚಿತ್ರಗಳಿಗೆ ಕಲಾ ನಿರ್ದೇಶನ. ಚಿತ್ರಮಾಧ್ಯಮವಲ್ಲದೆ ತೇಗ, ಬೀಟೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮಿಶ್ರಣ ಮುಂತಾದ ಮಾಧ್ಯಮಗಳಲ್ಲೂ ಕೃತಿಗಳ ರಚನೆ. ಕೆಂಗಲ್ ಹನುಮಂತಯ್ಯನವರ ಆಶಯದಂತೆ ಕಾಂಗ್ರೆಸ್ ಅಧಿವೇಶನದ ಮುಖ್ಯದ್ವಾರದ ಕಲಾತ್ಮಕ ರಚನೆ. ಶ್ಲಾಘಿಸಿದ ಮುಖ್ಯಮಂತ್ರಿಗಳು ಕಲಾವಿದರ ಸಂಸ್ಥೆ ತೆರೆಯಲು ನೀಡಿದ ನೆರವು. ಮೈಸೂರಿನ ಚಿತ್ರಕಲಾ ಪರಿಷತ್ ಇಂದು ಪ್ರಾರಂಭಿಸಿದ ಚಿತ್ರಕಲಾ ವಿದ್ಯಾಲಯ ಮತ್ತು ಅ.ನ. ಸುಬ್ಬರಾಯರ ಕಲಾಮಂದಿರದಲ್ಲಿ ಶಿಕ್ಷಕರಾಗಿ ಕೆಲಕಾಲ. ಬಸವನಗುಡಿ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ವೆಂಕಟಪ್ಪ ಕಲಾ ಭವನ, ಮೈಸೂರಿನ ಲಲಿತ ಕಲಾ ಭವನ, ಮ್ಯಾಕ್ಸ್ ಮುಲ್ಲರ್ ಭವನ, ರಾಮ್ನೀಲ್ ಆರ್ಟ್ ಗ್ಯಾಲರಿ, ಮುಂತಾದೆಡೆ ನಡೆಸಿದ ಏಕವ್ಯಕ್ತಿ ಪ್ರದರ್ಶನಗಳು. ಮೈಸೂರಿನ ವಸ್ತು ಪ್ರದರ್ಶನದಲ್ಲಿ ಸತತವಾಗಿ ಏಳು ವರ್ಷ ದೊರೆತ ಪ್ರಥಮ ಬಹುಮಾನ, ಚಿಕ್ಕಮ್ಮ ಚಿತ್ರಕ್ಕೆ ಪ್ರಜಾವಾಣಿ ಬಹುಮಾನ, ಕರ್ನಾಟಕ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಥಮ ಬಹುಮಾನ, ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು. ಇದೇದಿನಹುಟ್ಟಿದಕಲಾವಿದರು ಎನ್.ಎಸ್. ವೆಂಕಟರಾಂ – ೧೯೩೬ ಸತ್ಯವತಿ ಸುರೇಶ್ – ೧೯೬೩.
* * *