ಎಸ್. ನಂಜುಂಡಸ್ವಾಮಿ

Home/Birthday/ಎಸ್. ನಂಜುಂಡಸ್ವಾಮಿ
Loading Events
This event has passed.

೨೬-೩-೧೯೦೬ ೨೭-೧೨-೧೯೬೯ ವರ್ಣಚಿತ್ರ, ಶಿಲ್ಪಕಲೆಯಲ್ಲಿ ಅಗ್ರಗಣ್ಯರೆನಿಸಿದ್ದ ಎಸ್.ಎನ್. ಸ್ವಾಮಿಯವರು ಹುಟ್ಟಿದ್ದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ. ತಂದೆ ಶಿಲ್ಪ ಸಿದ್ಧಾಂತಿ ವೀರತ್ತಸ್ವಾಮಿಗಳು, ಶಿಲ್ಪಕಲೆ ಮತ್ತು ಚಿತ್ರಕಲೆ ವಂಶಪಾರಂಪರ್ಯವಾಗಿ ಬಂದ ವಿದ್ಯೆ. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ಚಿತ್ರಾಭ್ಯಾಸ, ಮುಂಬಯಿ ಜೆ.ಜೆ. ಕಲಾಶಾಲೆಯಿಂದ ಹೆಚ್ಚಿನ ವಿದ್ಯಾಭ್ಯಾಸ. ಜಯಚಾಮರಾಜೇಂದ್ರ ಕಲಾಶಾಲೆಯಲ್ಲಿ ಅಧ್ಯಾಪಕ ವೃತ್ತಿ. ರೇಖಾಚಿತ್ರ, ತೈಲಚಿತ್ರ, ವರ್ಣಚಿತ್ರಗಳಲ್ಲಿ ಸಾಧಿಸಿದ ಅದ್ವಿತೀಯ ಸಾಧನೆ. ಪ್ರಕೃತಿ ಚಿತ್ರಗಳು, ಭೂ ದೃಶ್ಯಗಳಲ್ಲಿ ನೆರಳು-ಬೆಳಕಿನಾಟಗಳ ಸೌಂದರ್ಯವನ್ನು ಯಥಾವತ್ ಚಿತ್ರಿಸುವ ಕಲೆ ಕರಗತ, ಸಂಯೋಜನೆಯಲ್ಲಿ ತಮ್ಮದೇ ಆದ ತತ್ತ್ವ. ಮೈಸೂರು ವಾಣಿ ವಿಲಾಸ ಮೊಹಲ್ಲದಲ್ಲಿರುವ ಮಹಾರಾಜ ಹೈಸ್ಕೂಲಿನ ಭಿತ್ತಿಯೊಂದರ ಮೇಲೆ ರಚಿತವಾಗಿರುವ ಶಾರದಾದೇವಿ ಚಿತ್ರ, ಕಬೀರ್ ತನ್ನ ಹೆಂಡತಿಯನ್ನು ಹೆಗಲ ಮೇಲೆ ಹೊತ್ತೊಯ್ಯುವ ದೃಶ್ಯ, ವೃತ್ತಿ ಶಿಕ್ಷಣ ಶಾಲೆಯಲ್ಲಿ ರಾಜರ ಒಡ್ಡೋಲಗದ ದೃಶ್ಯಗಳು ಕಲಾವಂತಿಕೆಯ ನಿದರ್ಶನಗಳು. ಹಲವಾರು ಭಾವಚಿತ್ರಗಳ ರಚನೆಯಲ್ಲೂ ಅದ್ವಿತೀಯ ಸಾಧನೆ. ಮೈಸೂರಿನ ವಸ್ತುಪ್ರದರ್ಶನ ಶಾಲೆಯ ಮೇಲೆ ರಚಿಸಲ್ಪಟ್ಟ ಜಯಚಾಮರಾಜ ಒಡೆಯರ ಚಿತ್ರ. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಕಥೆಗಳನ್ನು ಓದುವುದು, ಕೇಳುವುದು, ಕತೆ ಕೇಳಿದ ನಂತರ ಚಿತ್ರ ರಚನೆ. ಪ್ರಖ್ಯಾತ ಚಿತ್ರಗಳೆಂದರೆ ಅಶೋಕ ವನದಲ್ಲಿ ಸೀತಾದೇವಿ ರಾವಣನ ಕೈಸೆರೆಯಾಗಿದ್ದು ಮತ್ತು ಮಾಯಾಜಿಂಕೆಗೆ ಮೋಹಗೊಂಡ ಸೀತೆ, ರಾಮನಲ್ಲಿ ತನ್ನ ಅಭೀಪ್ಸೆಯನ್ನು ವ್ಯಕ್ತಪಡಿಸುತ್ತಿರುವುದು. ಆಡಂಬರವಿಲ್ಲದ ಜೀವನ. ನಿವೃತ್ತಿಯ ನಂತರ ಒಂಟಿಕೊಪ್ಪಲಿನಲ್ಲಿದ್ದ ಮನೆಮಾರಿ ಹುಟ್ಟೂರಾದ ಯರಗಂಬಳ್ಳಿಗೆ. ಪುನಃ ವಾಪಸ್ಸು ಮೈಸೂರಿಗೆ. ಚಿತ್ರಕಲೆ ಬೇಸರವಾದಾಗ ಗಂಧದ ಮತ್ತು ದಂತದಲ್ಲಿ ಮೂರ್ತಿಗಳ ಕೆತ್ತನೆ. ಬೇಲೂರಿನ ಶಿಲಾಬಾಲಿಕೆಯರಿಂದ ಸ್ಫೂರ್ತಿ. ಸಂದ ಗೌರವ, ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ, ಚಾಮುಂಡೇಶ್ವರಿ ಶಿಲಾ ವಿಗ್ರಹವನ್ನು ಕಡೆಯುತ್ತಿದ್ದಾಗ ನಿಧನರಾದರು. ಇದೇ ದಿನ ಹುಟ್ಟಿದ ಕಲಾವಿದರು : ಉಷಾ ದಾತರ್ – ೧೯೩೨ ಅರ್ಚನಾ ಹಂಡೆ – ೧೯೭೦ ಪಾರ್ಶ್ವನಾಥ್ ಶಾ. ಉಪಾಧ್ಯ – ೧೯೮೨

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top