೧೦-೧೧-೧೯೧೯ ೨೬-೪-೧೯೯೭ ಹಿಂದೂಸ್ತಾನಿ ಸಂಗೀತ ಪರಿಣತರ ವಂಶದಲ್ಲಿ ಎಸ್.ಬಿ. ಹುನಗುಂದ್‌ರವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಮುದ್ದೆಬಿಹಾಳಿ. ತಂದೆ ಭೀಮರಾವ್ ಹುನಗುಂದ್, ತಾಯಿ ಹನುಮಕ್ಕ. ಚಿಕ್ಕಂದಿನಿಂದಲೂ ಬೆಳೆದ ಸಂಗೀತಾಸಕ್ತಿ. ೧೧ನೇ ವಯಸ್ಸಿನಲ್ಲೇ ದೇವರನಾಮ ಹಾಡುತ್ತ ಮೇಳದಲ್ಲಿ ಭಾಗಿ. ಸಾರಂಗಿವಾದಕ ಅಬ್ದುಲ್ ಅಜೀಜ್‌ಖಾನ್, ಮುಂಬಯಿಯ ಪ್ರಭುದೇವ ಸರದಾರ್, ಸೊಲ್ಲಾಪುರದ ಹರಿಭಾವು ಬೇಂದ್ರೆಯವರ ಬಳಿ ಹಾರ್ಮೋನಿಯಂ ಮತ್ತು ಗಾಯನ ಶಿಕ್ಷಣ. ದೂರಸಂಪರ್ಕ ಇಲಾಖೆಯ ಅಧಿಕಾರಿಯಾಗಿ ದೇಶಾದ್ಯಂತ ಸಲ್ಲಿಸಿದ ಸೇವೆಯ ಜೊತೆಗೆ ಪುಣೆ, ಪಾಟ್ಣ, ಬಿಹಾರ್, ಕೇರಳ, ಮಧ್ಯಪ್ರದೇಶದ ಆಕಾಶವಾಣಿ ಕೇಂದ್ರದಿಂದ ಗಾಯನ, ಹಾರ್ಮೋನಿಯಂ ವಾದನ ಕಚೇರಿಗಳು ಪ್ರಸಾರ, ಹಲವಾರು ಪ್ರಖ್ಯಾತ ಗಾಯಕರಿಗೆ ನೀಡಿದ ಹಾರ್ಮೋನಿಯಂ ವಾದನ ಸಹಕಾರ. ನಿವೃತ್ತಿಯ ನಂತರ ಆಯ್ದುಕೊಂಡದ್ದು ಮೈಸೂರುವಾಸ. ಸ್ನೇಹ ಜೀವಿ, ಹಲವಾರು ಶಿಷ್ಯರಿಗೆ ನೀಡಿದ ಉಚಿತ ಸಂಗೀತ ಶಿಕ್ಷಣ. ಅನೇಕ ನಾಟಕಗಳಲ್ಲಿ ಪಾತ್ರಧಾರಿ. ಉತ್ತರ ಕರ್ನಾಟಕದ ವೃತ್ತಿರಂಗಭೂಮಿ ಕಲಾವಿದರಿಗೆ ನೀಡಿದ ಹಾರ್ಮೋನಿಯಂ ಸಾಥಿ. ಮೈಸೂರಿನ ಸ್ಟಾರ್ ಆಫ್ ಮೈಸೂರು ಪತ್ರಿಕೆಗೆ ಬರೆದ ಸಂಗೀತ ವಿಮರ್ಶೆ. ಮೈಸೂರಿನ ರೋಟರಿ ಯೂತ್‌ಕ್ಲಬ್‌ನಿಂದ ಸನ್ಮಾನ. ಶ್ರೀಕೃಷ್ಣ ಜಯಂತಿ ಉತ್ಸವ ಸಂದರ್ಭದಲ್ಲಿ ‘ಗಾನಭಾರತಿ’, ಸಂಗೀತ ಕೃಪಾಕುಟೀರದ ಸಂಗೀತೋತ್ಸವದಲ್ಲಿ ‘ಕರ್ನಾಟಕ ಗಾನಕಲಾ ನಿಪುಣ’, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಕಲಾವಿದರು ಶ್ರೀನಿವಾಸಮೂರ್ತಿ ಎ.ಎಲ್. – ೧೯೨೫ ನಾಗೇಶ್ ಬಿ.ಆರ್. – ೧೯೩೧ ರಾಜಗೋಪಾಲ್ ವಿ. – ೧೯೪೭

