Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಎಸ್.ಮಂಜುನಾಥ ಆಚಾರ್ಯ – ಕಣಜ

ಎಸ್.ಮಂಜುನಾಥ ಆಚಾರ್ಯ

Home/Birthday/ಎಸ್.ಮಂಜುನಾಥ ಆಚಾರ್ಯ
Loading Events

೧೮.೦೬.೧೯೬೮ ವೈವಿಧ್ಯಮಯ ಕಲಾ ಶಿಲ್ಪಗಳ ರಚನೆಯ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಮಂಜುನಾಥಾ ಚಾರ್ಯರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಶಿವಾರ ಪಟ್ಟಣದಲ್ಲಿ. ತಂದೆ ಎಸ್. ಶಂಕರನಾರಾಯಣಾಚಾರ್ಯ, ತಾಯಿ ಸಿದ್ದಮ್ಮ. ಓದಿದ್ದು ಎಸ್.ಎಸ್.ಎಸ್.ಸಿ. ವರೆಗೆ ಕೆನ್ ಕಲಾ ಶಾಲೆಯಿಂದ ಡ್ರಾಯಿಂಗ್ ಮಾಸ್ಟರ್‌ ಪದವಿ. ಯಲಹಂಕ ಬಳಿಯ ಅಟ್ಟೂರಿನಲ್ಲಿ ಸುರಭಿ ಹೊಯ್ಸಳ ಕಲಾ ನಿಕೇತನ ಶಾಲೆ ಆರಂಭ. ಚಿಕ್ಕಂದಿನಿಂದಲೂ ಕೆತ್ತನೆ ಕೆಲಸದಲ್ಲಿ ಮೂಡಿದ ಆಸಕ್ತಿ. ಅಮೃತ ಶಿಲೆ, ಕಪ್ಪುಶಿಲೆ, ಪಂಚಲೋಹ, ಪ್ಲಾಸ್ಟರ್‌ ಆಫ್‌ಪ್ಯಾರಿಸ್, ಫೈಬರ್‌ ಗ್ಲಾಸ್‌ಗಳಲ್ಲಿ ಕೃತಿ ರಚನೆ. ಬಸವಣ್ಣ, ಅಂಬಿಗರ ಚೌಡಯ್ಯ, ವಿವೇಕಾನಂದ, ಅಂಬೇಡ್ಕರ್‌, ಕುವೆಂಪು, ಕಾರಂತ ಇವರೆಲ್ಲರ ರೂಪಗಳೂ ಸಾಕಾರಗೊಂಡದ್ದು ಶಿಲ್ಪಕಲೆಯಲ್ಲಿ. ಭಾರತ ಸರಕಾರದ ವತಿಯಿಂದ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಶಿಲ್ಪಕಲಾ ಪ್ರದರ್ಶನ, ಹರಿಯಾಣ, ಸೂರಜ್ ಕುಂಡ್ ಕಲಾ ಮೇಳ, ಕರ್ನಾಟಕ ಶಿಲ್ಪ ಕಲಾ ಅಕಾಡಮಿ ಶಿಬಿರ, ಹಂಪಿ ವಿಶ್ವವಿದ್ಯಾಲಯ, ಅಂತಾರಾಷ್ಟ್ರೀಯ ಶಿಲ್ಪಕಲಾ ಶಿಬಿರ, ಶಿಲ್ಪೋತ್ಸವಗಳಲ್ಲಿ ಭಾಗಿ. ಅಮೆರಿಕದ ಮಿಚಿಗನ್ ದೇವಸ್ಥಾನಕ್ಕೆ ೫ ಅಡಿ ವೆಂಕಟೇಶ್ವರ, ೩ ಅಡಿ ಗಣಪತಿ, ೩ ಅಡಿ ಶಿವಲಿಂಗ ಮೂರ್ತಿಗಳು, ಇಂಗ್ಲೆಂಡಿನ ಕೆಲ ಮೆಗ್ರೋ ಆರ್ಟ್ ಗ್ಯಾಲರಿ ಮತ್ತು ವಸ್ತು ಸಂಗ್ರಹಾಲಯದಲ್ಲಿ ಶಿವಲಿಂಗ ಮತ್ತು ’ನಂದಿ’ಕಲ್ಲಿನ ಮೂರ್ತಿ, ನಟರಾಜ, ಕಾಳಿಂಗ ಮರ್ದನ ಕಲಾಕೃತಿಗಳು, ಜಪಾನ್‌ಗೆ ಶಿವನ ಶಿಲ್ಪ ಮುಂತಾದ ಮೂರ್ತಿಗಳ ರವಾನೆ. ರಾಷ್ಟ್ರಪತಿ ಭವನದಲ್ಲಿ ಸೂಕ್ಷ್ಮ ಕುಸುರಿ ಕೆಲಸದ ಗಣಪತಿ ವಿಗ್ರಹ, ಮಾಜಿ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಸಂಗ್ರಹಕ್ಕೆ ಗಣಪತಿ, ಮಾಜಿ ರಾಷ್ಟ್ರಪತಿ ಆರ್‌. ವೆಂಕಟರಾಮನ್ ರವರ ಸಂಗ್ರಹಕ್ಕೆ ನಾಟ್ಯ ಗಣೇಶನ ವಿಗ್ರಹ ಮುಂತಾದ ಖಾಸಗಿ ಸಂಗ್ರಹಗಳಲ್ಲಿ ಸಂಗ್ರಹೀತ. ಸಂದ ಪ್ರಶಸ್ತಿ ಗೌರವಗಳು ಹಲವಾರು. ಕರ್ನಾಟಕ ರಾಜ್ಯ ಕರಕುಶಲ ಮಂಡಲಿ ಪ್ರಶಸ್ತಿ, ೧೯೯೫ ರಲ್ಲಿ ಬೇಲೂರಿನಲ್ಲಿನ ಶಿಲ್ಪಕಲಾ ಪ್ರದರ್ಶನದಲ್ಲಿ ಅಮರಶಿಲ್ಪಿ ಜಕ್ಕಣಾಚಾರ್ಯ ಪ್ರಶಸ್ತಿ, ೧೯೯೬ ರಲ್ಲಿ ಕಲಾ ಬ್ರಹ್ಮ ಪ್ರಶಸ್ತಿ, ೨೦೦೧ ರಲ್ಲಿ ಕ್ರಾಫ್ಟೆಸ್ ಕೌನ್ಸಿಲ್ ಆಫ್‌ ಇಂಡಿಯಾ ಅವರ ಕಮಲಾದೇವಿ ಪ್ರಶಸ್ತಿ (ಶಿಲಾಬಾಲಿಕೆಗೆ) ೨೦೦೪ ರಲ್ಲಿ ಜ್ಞಾನ ಮಂದಾರ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ. ೨೦೦೬ ರಲ್ಲಿ ಖಾದಿ ಗ್ರಾಮೋದ್ಯೋಗ ರಾಜ್ಯಪ್ರಶಸ್ತಿ. ಕೆಂಪೇಗೌಡ ಪ್ರಶಸ್ತಿ ಮುಖ್ಯವಾದುವುಗಳು.   ಇದೇ ದಿನ ಹುಟ್ಟಿದ ಕಲಾವಿದರು: ಜಯಣ್ಣ ಜಿ. – ೧೯೩೯ ರಾಘವದೇವಿ – ೧೯೩೯ ರತ್ನಾಕರ ಎಸ್ ಗರೂಡ – ೧೯೫೧ ಜಿನ್ನಪ್ಪ ಜಿ. – ೧೯೭೨

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top