Loading Events

« All Events

  • This event has passed.

ಎಸ್.ವಿ. ರಂಗಣ್ಣ

December 24, 2023

೨೪-೧೨-೧೮೯೮ ೧೭-೨-೧೯೮೭ ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ದಾರಿತೋರಿದ  ರಂಗಣ್ಣನವರು ಹುಟ್ಟಿದ್ದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ. ತಂದೆ ವೆಂಕಟಸುಬ್ಬಯ್ಯ, ತಾಯಿ ವೆಂಕಟಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಚಿಕ್ಕಮಗಳೂರು, ಮೊಳಕಾಲ್ಮುರು, ಗುಬ್ಬಿ . ಕಾಲೇಜಿಗೆ ಸೇರಿದ್ದು ಬೆಂಗಳೂರು ಸೆಂಟ್ರಲ್ ಕಾಲೇಜು. ೧೯೧೯ರಲ್ಲಿ ಚಿನ್ನದ ಪದಕದೊಡನೆ ಬಿ.ಎ. ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಸುವರ್ಣ ಪದಕದೊಡನೆ ಎಂ.ಎ. ಪದವಿ. ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಬೋಧನಾ ವೃತ್ತಿ. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಆರಂಭ. ಕೆಲಕಾಲ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತೆ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪ್ರಾಚಾರ‍್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ. ನಿವೃತ್ತಿಯ ನಂತರವೂ ನಿರಂತರ ಅಧ್ಯಯನ, ಅಧ್ಯಾಪನ. ಕನ್ನಡದಲ್ಲಿ ಕೃತಿ ರಚಿಸಲು ಎ.ಆರ್.ಕೃ.ರವರಿಂದ ಪ್ರೇರಣೆ. ಮೊದಲು ರಚಿಸಿದ ಕೃತಿ ಕುಮಾರವ್ಯಾಸ ಕಿರುಹೊತ್ತಗೆ. ರುಚಿ, ವಿಡಂಬನೆ, ಶೈಲಿ ಪ್ರಾರಂಭದ ಕೃತಿಗಳು. ಶೈಲಿ ಕೃತಿಯು ಇವರಿಗೆ ಅಪಾರ ಕೀರ್ತಿ ತಂದ ಕೃತಿ. ಪಂಪ, ರನ್ನ, ಜನ್ನ, ನಾಗಚಂದ್ರ, ಹರಿಹರ, ಲಕ್ಷ್ಮೀಶ ಮುಂತಾದ ಅನೇಕ ಕವಿಗಳ ಶೈಲಿಯನ್ನು ‘ಶೈಲಿ’ ಕೃತಿಯಲ್ಲಿ ಚರ್ಚಿಸಿದ್ದಾರೆ. ವಿಮರ್ಶಾ ಸಂಕಲನ-ಹೊನ್ನಶೂಲ ೧೯೬೯ರಲ್ಲಿ ಪ್ರಕಟಿತ. ಕಾಳಿದಾಸನ ‘ನಾಟಕ ವಿಮರ್ಶೆ’ ಮತ್ತೊಂದು ಪ್ರಮುಖ ಕೃತಿ. ಪಾತ್ರಚಿತ್ರಣ, ಸಂವಿಧಾನ, ನಾಟಕೀಯತೆ ಕಥಾವಸ್ತುಗಳ ದೀರ್ಘಚರ್ಚೆ. ದೀರ್ಘ ವ್ಯಾಸಂಗ ಹಾಗೂ ಪರಿಶ್ರಮದಿಂದ ರಚಿಸಿದ ಮತ್ತೊಂದು ಮಹೋನ್ನತ ಕೃತಿ “ಪಾಶ್ಚಾತ್ಯ ಗಂಭೀರ ನಾಟಕಗಳು”. ರಂಗಬಿನ್ನಪ ಮುಕ್ತಕಗಳ ಸೃಜನಾತ್ಮಕ ಕೃತಿ. ಇನ್ನೆರಡು ಕೃತಿ ನಾಟುನುಡಿ. ಕವಿಕಥಾಮೃತ-ವಿದೇಶಿ ಬರಹಗಾರರ ಬದುಕಿನ ರೋಚಕ ಘಟನೆಗಳ ಸರಮಾಲೆ. ಇಂಗ್ಲಿಷ್ ಕೃತಿಗಳು-KNOTS AND KNOTTING, THE LADY AND THE RING, OLD TALE RETOLD, B.M. SRIKANTAIAH : A PROFILE. ಸಂದ ಗೌರವ ಪ್ರಶಸ್ತಿಗಳು-ಸ್ಕೌಟ್ ಚಳವಳಿಯಲ್ಲಿ ತೊಡಗಿಸಿಕೊಂಡದ್ದಕ್ಕೆ ರಜತಗಜ ಪ್ರಶಸ್ತಿ, ರಂಗಬಿನ್ನಪ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೭೦ರಲ್ಲಿ ಮೈಸೂರು ವಿ.ವಿ.ದಿಂದ ಗೌರವ ಡಿ.ಲಿಟ್ ಪದವಿ. ೧೯೭೬ರಲ್ಲಿ ಶಿವಮೊಗ್ಗೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಬಾಗಿನ’.   ಇದೇ ದಿನ ಹುಟ್ಟಿದ ಸಾಹಿತಿಗಳು : ಪಿ.ಬಿ. ದೇಸಾಯಿ – ೧೯೧೦ ಬಿ. ಲೀಲಾಭಟ್ – ೧೯೨೫ ಎಸ್.ವಿ. ಶ್ರೀನಿವಾಸರಾವ್ – ೧೯೩೧ ಬಿ.ವಿ. ಕೆದಿಲಾಯ – ೧೯೩೭ ಪದ್ಮಜಾ ಸುಂದರೇಶ್ – ೧೯೪೮

Details

Date:
December 24, 2023
Event Category: