Loading Events

« All Events

ಎಸ್.ವಿ. ಶ್ರೀನಿವಾಸರಾವ್

December 24

೨೪.೧೨.೧೯೩೧ ಸಾಹಿತ್ಯ, ಸಂಘಟನೆಯಲ್ಲಿ ಕ್ರಿಯಾಶೀಲ ವ್ಯಕ್ತಿಎನಿಸಿರುವ ಶ್ರೀನಿವಾಸ್‌ರಾವ್‌ರವರು ಹುಟ್ಟಿದ್ದು ತುಮಕೂರಿನಲ್ಲಿ ತಾ ೨೪.೧೨.೧೯೩೧ ರಲ್ಲಿ. ತಂದೆ ಶ್ಯಾನುಭೋಗ್ ವೆಂಕಟರಾಮಯ್ಯ, ತಾಯಿ ಪುಟ್ಟಚ್ಚಮ್ಮ. ಪ್ರಾರಂಭಿಕ ಶಿಕ್ಷಣ ತುಮಕೂರಿನ ಓಲ್ಡ್ ಚಾಯ್ಸ್ ಮಿಡ್ಲ್ ಸ್ಕೂಲ್ ಮತ್ತು ಆರ್ಯನ್ ಹೈಸ್ಕೂಲುಗಳಲ್ಲಿ, ಫಸ್ಟ್‌ಗ್ರೇಡ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ. ರಷ್ಯನ್ ಭಾಷೆಯ ಡಿಪ್ಲೊಮ, ರಾಷ್ಟ್ರ ಭಾಷಾ ವಿಶಾರದ (ಹಿಂದಿ), ಆಚಾರ್ಯ ಪ್ರೌಢಶಾಲಾ ಸಂಜೆ ಕಾಲೇಜಿನಿಂದ ಎ.ಎನ್.ಐ.ಇ. ತಾಂತ್ರಿಕ ವಿಧ್ಯಾಭ್ಯಾಸದ ಜೊತಗೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯದಲ್ಲಿ ಬೆಳೆದ ಆಸಕ್ತಿ. ವಿಶ್ವ ಕರ್ನಾಟಕ, ಉಷಾ, ಕರ್ಮವೀರ, ಚಿತ್ರಗುಪ್ತ, ಕಥೆಗಾರ ಮುಂತಾದ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟಿತ. ಉದ್ಯೋಗಕ್ಕಾಗಿ ಸೇರಿದ್ದು ಭಾರತದ ರಕ್ಷಣಾ ಇಲಾಖೆ ಟಿ.ಡಿ.ಇ. ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ (ಈಗ ಸಿ.ಕ್ಯು.ಎ.ಎಲ್) ಅಲ್ಲೇ ಬಡ್ತಿ ಪಡೆದು ಸೈಂಟಿಫಿಕ್ ಆಗಿ ೧೯೮೯ ರಲ್ಲಿ ನಿವೃತ್ತಿ. ರಕ್ಷಣಾ ಇಲಾಖೆಯಲ್ಲಿದ್ದಾಗಲೇ ಅನೇಕ ಯಂತ್ರಗಳನ್ನು ರೂಪಿಸಿ/ ಅಭಿವೃದ್ಧಿ ಪಡಿಸಿ ಇಲಾಖೆಯಿಂದ ಪಡೆದ ಹಲವಾರು ಬಹುಮಾನಗಳು ಹಾಗೂ ಪ್ರಶಂಸಾ ಪತ್ರಗಳು. ಹಲವಾರು ಕಾದಂಬರಿಗಳು ರಚನೆ. ಕಥೆಗಾರ, ಸುಧಾ, ಕನ್ನಡ ಪ್ರಭ, ಪ್ರಜಾಮತ, ಮಲ್ಲಿಗೆ, ಮಂಗಳ, ಬಾಲಮಂಗಳ ಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ೧೫ ಕಾದಂಬರಿಗಳು ಸೇರಿ ಸುಮಾರು ೨೦ ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟಿತ. ಸುಮಾರು ೯ ಕಥಾ ಸಂಕಲನಗಳು, ೨೦ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದಿತ ಕೃತಿಗಳು, ವೈಜ್ಞಾನಿಕ ಕೃತಿಗಳು, ಚಾರಿತ್ರಿಕ ಕಾದಂಬರಿಗಳು, ಪ್ರವಾಸ ಕಥನ, ವ್ಯಕ್ತಿ ಚಿತ್ರಗಳು, ಸಂಪಾದಿತ / ಸಂಕಲನ, ಸಂಕೀರ್ಣ ಕೃತಿಗಳು ಸೇರಿ ಒಟ್ಟು ೭೫ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಆಕಾಶವಾಣಿ ಕೇಂದ್ರದಿಂದ ಹಲವಾರು ರೂಪಕಗಳು, ನಾಟಕಗಳು, ಚಿಂತನ ಕಾರ್ಯಕ್ರಮಗಳ ಪ್ರಸಾರ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿ ಸ್ಥಾಪಕ ಕಾರ್ಯದರ್ಶಿಯಾಗಿ, ಪ್ರಕಾಶಕರ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಯಾಗಿ, ಪರಿಷತ್ಪತ್ರಿಕೆಯಾದ ‘ಕನ್ನಡ ನುಡಿ’ ಸಂಪಾದಕರಾಗಿ, ಬಿ.ಎಂ.ಶ್ರೀ. ಪ್ರತಿಷ್ಠಾನದ ‘ಲೋಚನ’ ಪತ್ರಿಕೆಯ ಸಂಪಾದಕರಾಗಿ, ದೂರದರ್ಶನ ಕೇಂದ್ರ ಪ್ರಿವ್ಯೂ ಸಮಿತಿಯ ಸದಸ್ಯರಾಗಿ, ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯದ ಪ್ರೈಮರಿ ಶಾಲೆಯ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ಪುಸ್ತಕಗಳ ವಿಮರ್ಶಕರಾಗಿ ಇದೀಗ ಬಿ.ಎಂ.ಶ್ರೀ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ್ಯದರ್ಶಿ ಹಾಗೂ ‘ವಾರ್ತಾ ಪತ್ರ’ದ ಸಂಪಾದಕತ್ವದ ಜವಾಬ್ದಾರಿಗಳು. ‘ಒರಿಯಾ ಕಥೆಗಳು’ ಉತ್ತಮ ಅನುವಾದಕ್ಕಾಗಿ ರಾಜ್ಯ ಸರಕಾರದ ಬಹುಮಾನ, ‘ಪ್ರೌಢಪ್ರತಾಪ ವೀರ ರಾಜೇಂದ್ರ’ ಕೃತಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ, ‘ಸಹನೆ-ಸಾಧನೆ’ – ಮಕ್ಕಳ ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪುರಸ್ಕಾರ, ಕನ್ನಡ ಶ್ರೀ, ಕರ್ನಾಟಕ ಶ್ರೀ ಪ್ರಶಸ್ತಿ, ಸರಸ್ವತಿ ಸುಪುತ್ರ ಪ್ರಶಸ್ತಿ, ವಿಜಯಶ್ರೀ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು.

Details

Date:
December 24
Event Category: