
- This event has passed.
ಎಸ್. ಸೋಮಸುಂದರಂ
November 20
೨೦.೧೧.೧೯೩೩ ರಂಗಭೂಮಿ ನಟ, ನಿರ್ದೇಶಕ, ಸುಗಮ ಸಂಗೀತಗಾರರಾದ ಸೋಮಸುಂದರಂ ಹುಟ್ಟಿದ್ದು ಮೈಸೂರು. ತಂದೆ ಎ. ಸುಬ್ರಹ್ಮಣ್ಯನ್, ತಾಯಿ ಲಕ್ಷ್ಮೀನರಸಮ್ಮ. ಚಿಕ್ಕಂದಿನಿಂದಲೂ ಸಂಗೀತದತ್ತ ಒಲವು. ಮೈಸೂರಿನ ಎಸ್. ಕೃಷ್ಣಅಯ್ಯಂಗಾರ್, ಸಂಗೀತ ವಿದುಷಿ ರತ್ನಮ್ಮನವರ ಬಳಿ ಸಂಗೀತಪಾಠ. ಪಿ. ಕಾಳಿಂಗರಾಯರ ಗಾಯನದ ಸ್ಫೂರ್ತಿಯಿಂದ ಭಾವಗೀತೆಗಳ, ಜನಪದ ಗೀತೆಗಳ ಹಾಡುಗಾರಿಕೆಯಲ್ಲಿ ಪಡೆದ ವಿಶೇಷ ಪರಿಶ್ರಮ, ಉದ್ಯೋಗಿಯಾಗಿ ಸೇರಿದ್ದು ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿ. ೧೯೫೭ರಲ್ಲಿ ಗಾನಸುಧಾ ಸುಗಮ ಸಂಗೀತ ಅಕಾಡಮಿ ಸ್ಥಾಪನೆ. ನವದೆಹಲಿಯ ಯುವಜನೋತ್ಸವ, ಬರೋಡದ ರಾಷ್ಟ್ರೀಯ ಯುವಜನೋತ್ಸವ, ದೆಹಲಿಯ ಗಣರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಡಿ ಬಂಗಾಳ, ಒರಿಸ್ಸಾ, ತಮಿಳುನಾಡುಗಳಲ್ಲಿ ಕಾರ್ಯಕ್ರಮ, ಆಕಾಶವಾಣಿ, ದೂರದರ್ಶನದಲ್ಲಿ ಕಾರ್ಯಕ್ರಮ ಪ್ರಸಾರ, ಚಂಚರಿಕ, ಹಕ್ಕಿ ಹಾರುತಿದೆ, ಬೆಳಗು, ಹೃದಯರಾಗ, ಕ್ಯಾಸೆಟ್ ಬಿಡುಗಡೆ. ನಾಟಕಗಳಲ್ಲಿ ಅಭಿನಯ ಮಿತ್ರರ ಬಳಗ, ಕಲಾಘೋಷಣಿ ಸಂಸ್ಥೆಗಳ ಪ್ರಾರಂಭ, ಪ್ರೊ. ಬಿ.ಸಿ., ಬಿ.ವಿ. ಕಾರಂತ, ಆರ್. ನಾಗೇಶ್, ಎಚ್.ಕೆ. ರಾಮಮೂರ್ತಿ, ಬಿ.ಎನ್. ನಾಣಿ ಮುಂತಾದವರು ನಿರ್ದೇಶಿಸಿದ ನಾಟಕಗಳ ಪಾತ್ರಧಾರಿ. ಸ್ವರ್ಗಕ್ಕೆ ಮೂರೇ ಬಾಗಿಲು, ತುಘಲಕ್, ದಾರಿಯಾವುದಯ್ಯಾ ವೈಕುಂಠಕೆ ನಾಟಕಗಳಲ್ಲಿ ಪ್ರಮುಖಪಾತ್ರ, ಹಲವಾರು ನಾಟಕಗಳಿಗೆ ನೀಡಿದ ಸಂಗೀತ, ಗಾನಸುಧಾ ಸುಗಮಸಂಗೀತ ಅಕಾಡಮಿಯ ಸ್ವರ್ಣಮಹೋತ್ಸವ ಆಚರಣೆಯ ಹೆಗ್ಗಳಿಕೆ. ಒರಿಸ್ಸಾ ರಾಜ್ಯದ ಶಿಕ್ಷಣ ಇಲಾಖೆಯ ಸನ್ಮಾನ, ಸಂಗೀತಗಂಗಾ ಪ್ರಶಸ್ತಿ, ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾಶ್ರೀ, ರಂಗಭೂಮಿ ಸೇವೆಗಾಗಿ ಪದ್ದಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದರು ವಿ.ಜೆ. ನಾಯಕ್ – ೧೯೩೧ ಉಳ್ಳೂರು ನಾಗೇಂದ್ರ ಉಡುಪ – ೧೯೩೯ ಸುರೇಶ್ ಹಾಲಭಾವಿ – ೧೯೪೦